ಭಾರತೀಯರಿಗೆ ವಿದೇಶದಲ್ಲೂ ಗೌರವ ತರುವ ಕೆಲಸ ಮಾಡಿದ ಮೋದಿ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ

| Published : Oct 13 2024, 01:09 AM IST / Updated: Oct 13 2024, 04:11 AM IST

ಭಾರತೀಯರಿಗೆ ವಿದೇಶದಲ್ಲೂ ಗೌರವ ತರುವ ಕೆಲಸ ಮಾಡಿದ ಮೋದಿ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿಯಿಂದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ದೊರಕಿದೆ, ನರೇಂದ್ರ ಮೋದಿ ಸಾಧನೆ ಬಹಳಷ್ಟಿದೆ, ಬಡವರಿಗೆ ಉಚಿತವಾಗಿ ಬ್ಯಾಂಕ್ ಖಾತೆ ಮಾಡಿಸಿ ಸಾಲಸೌಲಭ್ಯ ಸಿಗುವ ರೀತಿ ಮಾಡಿದ್ದಾರೆ, ಪ್ರತಿ ಹಳ್ಳಿಗೂ ವಿದ್ಯುತ್ ನೀಡಿದ್ದಾರೆ.ಮೋದಿಯ ಕೈ ಬಲಪಡಿಸಿದರೆ ಮತ್ತಷ್ಟು ಅಭಿವೃದ್ಧಿ ಮಾಡಲು ಸಾಧ್ಯ.

 ಕೋಲಾರ  : ಭಾರತೀಯರಿಗೆ ವಿದೇಶದಲ್ಲೂ ಗೌರವ ತರುವ ಕೆಲಸ ಮಾಡಿದ ಮೋದಿರನ್ನು ಬೆಂಬಲಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರ ಮೇಲಿದ್ದು ಬಿಜೆಪಿ ಸದಸ್ಯತ್ವ ಪಡೆಯುವ ಮೂಲಕ ಮೋದಿ ಕೈಬಲಪಡಿಸಬೇಕು ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ತಿಳಿಸಿದರು.

ನಗರದ ಖಾಸಗಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿ, ದೇಶವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ನರೇಂದ್ರ ಮೋದಿ ಮತ್ತು ಬಿಜೆಪಿ ಕಾರಣ. ಯುವಕರು ವಿದ್ಯಾರ್ಥಿಗಳು ಪ್ರಧಾನಿ ಮೋದಿಯ ಕೈ ಬಲಪಡಿಸಿದರೆ ಮತ್ತಷ್ಟು ಅಭಿವೃದ್ದಿ ಮಾಡಲು ಸಾಧ್ಯ ಎಂದರು.ಮೋದಿ ಸಾಧನೆ ಪ್ರಚಾರ ಮಾಡಿ

ರಾಜ್ಯದಲ್ಲಿನ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರವು ನೀಡಿದ್ದ ಸುಳ್ಳು ಭರವಸೆಗಳನ್ನು ಈಡೇರಿಸಲು ವಿಫಲವಾಗಿವೆ. ಬಿಜೆಪಿ ಸರಕಾರವು ಬಡವರಿಗೆ ಕೋವಿಡ್ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ನೀಡಿತು. 

ಮೋದಿಯಿಂದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ದೊರಕಿದೆ, ನರೇಂದ್ರ ಮೋದಿ ಸಾಧನೆ ಬಹಳಷ್ಟಿದೆ, ಬಡವರಿಗೆ ಉಚಿತವಾಗಿ ಬ್ಯಾಂಕ್ ಖಾತೆ ಮಾಡಿಸಿ ಸಾಲಸೌಲಭ್ಯ ಸಿಗುವ ರೀತಿ ಮಾಡಿದ್ದಾರೆ, ಪ್ರತಿ ಹಳ್ಳಿಗೂ ವಿದ್ಯುತ್ ನೀಡಿದ್ದಾರೆ ಇಂತಹ ಅಭಿವೃದ್ಧಿ ಕೆಲಸಗಳನ್ನು ಪ್ರತಿ ಮನೆ ಬಾಗಿಲಿಗೆ ತಿಳಿಸಿ ಸದಸ್ಯತ್ವವನ್ನು ಮಾಡಿಲಾಗುತ್ತಾ ಇದ್ದು ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಖಜಾಂಚಿ ಶಿಳ್ಳಂಗೆರೆ ಮಹೇಶ್, ನಗರ ಅಧ್ಯಕ್ಷ ಸಾ.ಮಾ ಅನಿಲ್ ಬಾಬು, ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಮಾಲ್ ಮಂಜು, ಮುಖಂಡರಾದ ಗುರುಮೂರ್ತಿ, ಸುಬ್ರಮಣಿ, ನಂದನ್ ಇದ್ದರು.