ಸಾರಾಂಶ
ಅತ್ಯುತ್ತಮ ಶಾಲೆಯನ್ನಾಗಿ ರೂಪಿಸಲು ಅಗತ್ಯ ಸವಲತ್ತುಗಳು ಒದಗಿಸಿಕೊಡುವುದರ ಮೂಲಕ ವಿದ್ಯಾರ್ಥಿಗಳು ಆರೋಗ್ಯಕರ, ಶೈಕ್ಷಣಿಕರ ವಾತಾವರಣ ನಿರ್ಮಿಸಬೇಕು. ಶುಚಿತ್ವ ಶುದ್ಧ ನೀರು ಅತ್ಯಾಧುನಿಕ ಡಿಜಿಟಲ್ ಗ್ರಂಥಾಲಯ ಬಳಕೆ ಮಾಡಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚಲಿದೆ.
ಮಾಲೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಅಪ್ಡೇಟ್ ಆಗಿದ್ದಾಗ ಮಾತ್ರ ಸರ್ಕಾರಿ ಶಾಲೆಯ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಹೇಳಿದರು.
ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇಹಗಲ್ ಪೌಂಡೇಶನ್ ಸಂಸ್ಥೆ ನಿರ್ಮಿಸಿದ್ದ ಡಿಜಿಟಲ್ ಗ್ರಂಥಾಲಯ ಹಾಗೂ ನವೀಕರಣಗೊಂಡ ಶೌಚಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರು ನಿತ್ಯ ಜ್ಞಾನರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂದಿನ ತಾಂತ್ರಿಕತೆಯ ಸಹಕಾರದೊಂದಿಗೆ ಅಪ್‌ಡೇಟ್ ಆಗಬೇಕು ಎಂದರು.
ಗ್ರಂಥಾಲಯ ಬಳಸಿಕೊಳ್ಳಿ
ಸೆಹಗಲ್ ಫೌಂಡೇಶನ್ ಸಂಸ್ಥೆಯ ದಕ್ಷಿಣ ಭಾರತದ ಮುಖ್ಯಸ್ಥೆ ಶುಚಿಸಿಂಗ್ ಮಾತನಾಡಿ, ಒಂದು ಶಾಲೆಯನ್ನು ಅತ್ಯುತ್ತಮ ಶಾಲೆಯನ್ನಾಗಿ ರೂಪಿಸಲು ಅಗತ್ಯ ಸವಲತ್ತುಗಳು ಒದಗಿಸಿಕೊಡುವುದರ ಮೂಲಕ ವಿದ್ಯಾರ್ಥಿಗಳು ಆರೋಗ್ಯಕರ, ಶೈಕ್ಷಣಿಕರ ವಾತಾವರಣ ನಿರ್ಮಿಸಲು ಸಂಸ್ಥೆ ಶ್ರಮಿಸುತ್ತಿದೆ. ಶಾಲೆಯಲ್ಲಿ ಶುಚಿತ್ವ ಶುದ್ಧ ನೀರು ಅತ್ಯಾಧುನಿಕ ಡಿಜಿಟಲ್ ಗ್ರಂಥಾಲಯ ಬಳಕೆ ಮಾಡಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚಲಿದೆ ಎಂದರು.
ಮಕ್ಕಳು ವಿಕಸನ ಗೊಳಿಸುವ ಜತೆಯಲ್ಲಿ ಜೀವನ ಕೌಶಲ್ಯಗಳು ಸಾಂದರ್ಭಿಕವಾಗಿ ಬಳಕೆ ಮಾಡಿಕೊಳ್ಳಲು ಅನುಕೂಲವಾದ ಪರಿಸರ ನಿರ್ಮಾಣ ಮಾಡಿಕೊಡುವುದರ ಮೂಲಕ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಗುಣಾತ್ಮಕ ಹಾಗೂ ಡಿಜಿಟಲೀಕರಣ ಶಿಕ್ಷಣವನ್ನು ನೀಡಲು ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಕೋಮಲ ನಾರಾಯಣ, ಮಾರಿಕಾಂಬ ಟ್ರಸ್ಟಿನ ಅಧ್ಯಕ್ಷ ಪಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ, ಕ್ಷೇತ್ರ ಸಮನ್ವಯಾಧಿಕಾರಿ ಟಿ ವೆಂಕಟಸ್ವಾಮಿ, ಪ್ರಾಂಶುಪಾಲೆ ಬಿಪಿ ಚಂದ್ರಿಕಾ, ಉಪ ಪ್ರಾಂಶುಪಾಲ ಎಬಿ ರಾಮಕೃಷ್ಣಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶ್ರೀನಿವಾಸ್, ಎಸ್ ಡಿ ಎಂ ಸಿ ಅಧ್ಯಕ್ಷ ರೋಹಿತ್ ನಾರಾಯಣ್ ಮತ್ತಿತರರು ಹಾಜರಿದ್ದರು.