ಇವಿಎಂ ಬಗ್ಗೆ ಪರಂಗೆ ಅನುಮಾನ - ಕೆಲವು ಕಡೆ ಹ್ಯಾಕ್‌ ಆಗಿರಬಹುದು: ಬ್ಯಾಲಟ್ ಪೇಪರ್ ಸೂಕ್ತ

| Published : Nov 25 2024, 09:42 AM IST

Dr G Parameshwara

ಸಾರಾಂಶ

ಚುನಾವಣೆಗಳಲ್ಲಿ ಇವಿಎಂ ಎಲ್ಲಾ ಕಡೆ ಹ್ಯಾಕ್‌ ಮಾಡಿದ್ದಾರೆ ಎಂದೇನಲ್ಲ. ಆದರೆ ಕೆಲವು ಕಡೆ ಆಗಿರಬಹುದು. ಹೀಗಾಗಿ ಇವಿಎಂ ಬದಲು ಬ್ಯಾಲಟ್ ಪೇಪರ್ ತರುವುದು ಸೂಕ್ತ. ಇವಿಎಂ ತೆಗೆದು ಬ್ಯಾಲಟ್‌ ಪೇಪರ್‌ ಮೂಲಕ ಚುನಾವಣೆ ಮಾಡಲು ಏನು ಸಮಸ್ಯೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರಶ್ನಿಸಿದ್ದಾರೆ.

ಬೆಂಗಳೂರು : ಚುನಾವಣೆಗಳಲ್ಲಿ ಇವಿಎಂ ಎಲ್ಲಾ ಕಡೆ ಹ್ಯಾಕ್‌ ಮಾಡಿದ್ದಾರೆ ಎಂದೇನಲ್ಲ. ಆದರೆ ಕೆಲವು ಕಡೆ ಆಗಿರಬಹುದು. ಹೀಗಾಗಿ ಇವಿಎಂ ಬದಲು ಬ್ಯಾಲಟ್ ಪೇಪರ್ ತರುವುದು ಸೂಕ್ತ. ಇವಿಎಂ ತೆಗೆದು ಬ್ಯಾಲಟ್‌ ಪೇಪರ್‌ ಮೂಲಕ ಚುನಾವಣೆ ಮಾಡಲು ಏನು ಸಮಸ್ಯೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರಶ್ನಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂ ಬದಲು ಬ್ಯಾಲಟ್ ಪೇಪರ್ ತರುವುದು ಸೂಕ್ತ ಎಂಬುದು ನನ್ನ ಅನಿಸಿಕೆ. ಕಳೆದ 15 ವರ್ಷಗಳಿಂದ ‌ನಾವು ಇವಿಎಂ ಬೇಡ ಎಂದು ಹೇಳುತ್ತಿದ್ದೇವೆ. ಅಮೆರಿಕದಲ್ಲೂ ಇವಿಎಂ ಬೇಡ ಎನ್ನುತ್ತಿದ್ದಾರೆ. ಇವಿಎಂ ತೆಗೆದು ಬ್ಯಾಲಟ್‌ ಪೇಪರ್ ಮೂಲಕ ಚುನಾವಣೆ ಮಾಡಲು ಏನಾಗುತ್ತದೆ? ಮೊದಲೆಲ್ಲ ಬ್ಯಾಲಟ್​ ಪೇಪರ್ ಮೂಲಕ ಚುನಾವಣೆ ಮಾಡಿಲ್ಲವೇ ಎಂದು ಪ್ರಶ್ನಿಸಿದರು.

ಈಗ ವ್ಯವಸ್ಥೆ ಅವರ‌ (ಬಿಜೆಪಿ) ಕೈನಲ್ಲಿದೆ‌‌. ನಾವು ಏನೂ ಮಾಡಲಾಗುವುದಿಲ್ಲ. ಅವರಲ್ಲೂ ಅನೇಕರು ಇವಿಎಂ‌ ವಿರೋಧಿಸಿದ್ದಾರೆ‌. ಎಲ್ಲವನ್ನೂ‌ ಹ್ಯಾಕ್ ಮಾಡಿದ್ದಾರೆ ಎಂದು ಹೇಳುವುದಿಲ್ಲ. ಆದರೆ ಕೆಲವೊಂದು ಕಡೆ ಹ್ಯಾಕ್ ಆಗಿರಬಹುದು ಎಂದು ಅನುಮಾನವಿದೆ ಎಂದು ಹೇಳಿದರು.