ಸಾರಾಂಶ
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚೀಟ್ ಸಿಗುವ ನಿರೀಕ್ಷೆ ಇತ್ತು, ಇಡಿ, ಸಿಬಿಐ, ಐಟಿ ಏನೇ ಬರಲಿ ಎದುರಿಸಲು ಸಿದ್ಧ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೋಲಾರ : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚೀಟ್ ಸಿಗುವ ನಿರೀಕ್ಷೆ ಇತ್ತು, ಇಡಿ, ಸಿಬಿಐ, ಐಟಿ ಏನೇ ಬರಲಿ ಎದುರಿಸಲು ಸಿದ್ಧ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ಎಸ್.ಎನ್.ಆರ್ ಆಸ್ಪತ್ರೆ ಸಭಾಂಗಣದಲ್ಲಿ ಗೃಹ ಆರೋಗ್ಯ ಯೋಜನೆಯ ಪ್ರಗತಿ ಪರಿಶೀಲನೆ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಅನ್ನೋ ನಂಬಿಕೆ ಇತ್ತು, ಮುಡ ಪ್ರಕರಣ ಸಿಬಿಐಗೆ ನೀಡುವ ಬಗ್ಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಪ್ರಕರಣ ಸಿಬಿಐಗೆ ನೀಡಿದೆ, ಒಂದೇ ಒಂದು ಕೇಸ್ ಸಿಬಿಐ ನೀಡಿಲ್ಲ ಎಂದು ಟೀಕಿಸಿದರುಬಿಜೆಪಿಗೆ ಪ್ರತ್ಯೇಕ ಮಾನದಂಡವೇ?
ಬಿಜೆಪಿಗೆ ಒಂದು, ಬೇರೆಯವರಿಗೆ ಒಂದು ಮಾನದಂಡನಾ ಪ್ರಶ್ನಿಸಿದ ಅವರು, ಸಿಎಂ ಹೆಸರಿಗೆ ಕಳಂಕ ತರಲು ಕೇಂದ್ರ ಸರ್ಕಾರದ ಸಂಚಾಗಿದೆ, ಇಡಿ, ಐಟಿ, ಸಿಬಿಐ ನಿಂದ ಬಿಜೆಪಿ ನಾಯಕರ ಮೇಲೆ ದಾಳಿ ಮಾಡಿದ್ದಾರಾ, ಬಿಜೆಪಿ ಯವರಿಗೆ ಭ್ರಷ್ಟರಲ್ಲ ಅಂತ ಸರ್ಟಿಫಿಕೇಟ್ ಕೊಡಲಾಗಿದೀಯಾ ಎಂದು ನುಡಿದರು.ಬಿಜೆಪಿ ನಾಯಕ ಶ್ರೀರಾಮುಲು ಕಾಂಗ್ರೆಸ್ ಗೆ ಸೇರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಒಳ ಜಗಳಕ್ಕೆ ಕಾಂಗ್ರೆಸ್‌ಗೆ ಏಕೆ ತರ್ತೀರಾ, ಬಿಜೆಪಿ ಪಕ್ಷ ಒಡೆದ ಮನೆಯಾಗಿದೆ, ನಾನು ಯಾರನ್ನೂ ಸಂಪರ್ಕ ಮಾಡಿಲ್ಲ ಅಂತ ಶ್ರೀರಾಮುಲು ಹೇಳಿದ್ದಾರೆ, ಜನಾರ್ದನ ರೆಡ್ಡಿನ ಪಕ್ಷಕ್ಕೆ ಏಕೆ ಸೇರ್ಪಡೆ ಮಾಡಿಕೊಂಡೆವೂ ಅನ್ನೋ ಭಾವನೆ ಬಿಜೆಪಿಗೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಹಿರಿಯ, ಕಿರಿಯ ನಾಯಕರು ಯಾರೇ ಬಂದರು ಸ್ವಾಗತ, ಸಂಪುಟ ವಿಸ್ತರಣೆ ನನಗೆ ಗೊತ್ತಿಲ್ಲ, ಸಿಎಂನ ಕೇಳಬೇಕು ಎಂದು ಆರೋಗ್ಯ ಸಚಿವರು ಹೇಳಿದರು.
ನಕಲಿ ಔಷಧ ತಡೆಗೆ ಕ್ರಮ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಒಳ ರೋಗಿಗಳನ್ನು ಹಾಗೂ ಆಸ್ಪತ್ರೆಯಲ್ಲಿನ ಕೊರತೆಗಳನ್ನು ಪರಿಶೀಲಿಸಿದ ಸಚಿವರು, ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಕಳಪೆ ಗುಣಮಟ್ಟದ ಔಷಧಿಗಳು ಪತ್ತೆಯಾಗಿದ್ದು ಅವುಗಳನ್ನು ಹತೋಟಿಗೆ ತರಲು ಸರ್ಕಾರ ಎಲ್ಲಾ ಕ್ರಮವಹಿಸಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯಲ್ಲಿ 93 ಡ್ರಗ್ ಇನ್ಸ್‌ಪೆಕ್ಟರ್‌ಗಳ ಕೊರತೆಯಿದ್ದು ಅವರನ್ನು ನೇಮಕ ಮಾಡಿಕೊಂಡ ಬಳಿಕ ನಕಲಿ ಔಷಧಿಗಳ ನಿಯಂತ್ರಣಕ್ಕೆ ಕಡಿವಾಣ ಬೀಳಲಿದೆ ಎಂದರು.
ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆಪಟ್ಟಣದ ಸಾರ್ವಜನಿಕ ಆಸ್ಪತ್ರೆ ಉತ್ತಮವಾಗಿದೆ ಇನ್ನೂ ಮೇಲ್ದರ್ಜೆಗೆ ಕೊಂಡೊಯ್ಯಬಹುದು. ಈ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸ್ತ್ರೀರೋಗ ತಜ್ಙರಿಲ್ಲದೆ ಅವ್ಯವಸ್ಥೆಯಿಂದ ಕೂಡಿರುವ ಬಗ್ಗೆ ದೂರುಗಳಿಗೆ ಬಂದಿದೆ. ಸರ್ಕಾರ ಈ ಸಮಸ್ಯೆಯನ್ನು ನೀಗಿಸಲು ಯತ್ನಿಸುತ್ತಿದೆ, ಖಾಸಗಿ ಸ್ತ್ರೀರೋಗ ವೈದ್ಯರು ಬಂದು ರೋಗಿಗಳನ್ನು ತಪಾಸಣೆ ಮಾಡಿದರೆ ಅವರು ಎಷ್ಟು ರೋಗಿಗಳಿಗಳನ್ನು ತಪಾಸಣೆ ಮಾಡಿದರೋ ಅಷ್ಟು ಹಣ ನೀಡಲು ಸರ್ಕಾರ ಸಿದ್ದವಾಗಿದೆ ಎಂದು ಹೇಳಿದರು.ಸಚಿವರ ಜೊತೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ,ಟಿಹೆಚ್‌ಒ ಸುನೀಲ್,ಪುರಸಭೆ ಅಧ್ಯಕ್ಷ ಗೋವಿಂದ,ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಪಾರ್ಥಸಾರಥಿ,ಭೂ ಬ್ಯಾಂಕಿನ ಅಧ್ಯಕ್ಷ ರಘುನಾಥ್,ನಗರ ಕಾಂಗ್ರೆಸ್ ಅಧ್ಯಕ್ಷ ಚಂದ್ರುಕುಮಾರ್, ಇತರರು ಇದ್ದರು.