ಸಾರಾಂಶ
ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ಮನೆ ಮನೆ ಜನರಿಗೆ ತಲುಪಿಸುವ ಕಾರ್ಯ ಆಗಬೇಕು ತಾಲೂಕಿನಲ್ಲಿ ಪ್ರತಿಯೊಂದು ಯೋಜನೆಗಳು ಸಂಪೂರ್ಣವಾಗಿ ಜನರಿಗೆ ಸಿಗುತ್ತಿದ್ದು ಇನ್ನೂ ಕೆಲವರಿಗೆ ಸಿಗುವಂತೆ ಆಗಬೇಕು
ಕನ್ನಡಪ್ರಭ ವಾರ್ತೆ ಟೇಕಲ್
ಟೇಕಲ್‌ನಲ್ಲಿ ಮಾ. 11ರ ಸೋಮವಾರ ಸರ್ಕಾರದ 5 ಗ್ಯಾರಂಟಿಗಳ ಯೋಜನೆ ಫಲಾನುಭವಿಗಳ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಈ ಸಮಾವೇಶಕ್ಕೆ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಂಗವಿಕಲರ, ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಳಾಕರ್ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.ಅವರು ಟೇಕಲ್‌ನ ಹುಣಸಿಕೋಟೆ ಗ್ರಾಮದಲ್ಲಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಮುಖಂಡರು ಕಾರ್ಯಚಟುವಟಿಕೆ ಪ್ರಾರಂಭಿಸಬೇಕು ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ಮನೆ ಮನೆ ಜನರಿಗೆ ತಲುಪಿಸುವ ಕಾರ್ಯ ಆಗಬೇಕು ತಾಲೂಕಿನಲ್ಲಿ ಪ್ರತಿಯೊಂದು ಯೋಜನೆಗಳು ಸಂಪೂರ್ಣವಾಗಿ ಜನರಿಗೆ ಸಿಗುತ್ತಿದ್ದು ಇನ್ನೂ ಕೆಲವರಿಗೆ ಸಿಗುವಂತೆ ಆಗಬೇಕು ಎಂದರು.ಕಾಂಗ್ರೆಸ್‌ಗೆ ಬಹುಮತ ನಿರೀಕ್ಷೆ
ನಾನು ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಲೂರು ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತ್ಯಂತ ಹೆಚ್ಚು ಬಹುಮತದಿಂದ ಪ್ರೋತ್ಸಾಹಿಸಬೇಕೆಂದರು. ಪ್ರತಿಯೊಂದು ಕಡೆ ಗ್ರಾಮಗಳಲ್ಲಿ ಉತ್ತಮ ಸ್ಪಂಧನೆ ಸಿಗುತ್ತಿದ್ದು ಈ ಬಾರಿ ಅತ್ಯಂತ ಬಹುಮತ ಸಿಗುವ ನಿರೀಕ್ಷೆ ಇದೆ ಎಂದರು.ಈ ಸಂದರ್ಭದಲ್ಲಿ ಕೆ.ಜಿ. ಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಸ್.ಆರ್. ಯಲ್ಲಪ್ಪ, ಟೇಕಲ್ ಗ್ರಾ.ಪಂ. ಅಧ್ಯಕ್ಷ ಎಸ್. ಸಂದೀಪ್, ಕೆ.ಎಸ್. ವೆಂಕಟೇಶಗೌಡ, ಕೆ.ವೈ. ಈರೇಗೌಡ, ಹೇಮಾಮಾಲಿನಿ ನಾರಾಯಣಸ್ವಾಮಿ, ಬ್ಲಾಕ್‌ನ ಕಾಂಗ್ರೆಸ್‌ನ ವಿಜಯನರಸಿಂಹ, ವಿನೋದ್‌ಗೌಡ, ಸತೀಶ್‌ರಾಜಣ್ಣ, ಪ್ರಗತಿ ಶ್ರೀನಿವಾಸ, ಎಸ್.ಜಿ. ರಾಮಮೂರ್ತಿ, ಸತೀಶ್‌ಬಾಬು, ಕುಟಂನಹಳ್ಳಿ ವೆಂಕಟೇಶಗೌಡ, ಮಾಜಿ ಅಧ್ಯಕ್ಷ ಮಂಜುನಾಥ, ಅಧ್ಯಕ್ಷೆ ಅರ್ಚನ ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.