ಸಾರಾಂಶ
ಹಾಕಿ ಇಂಡಿಯಾ ಅಧ್ಯಕ್ಷ, ಮಾಜಿ ರಾಜ್ಯಸಭಾ ಸಂಸದ ದಿಲೀಪ್ ಟಿರ್ಕಿ ಮತ್ತು ಮಾಜಿ ಭಾರತೀಯ ಹಾಕಿ ತಂಡ ನಾಯಕ ಪ್ರಬೋಧ್ ಟಿರ್ಕಿ ಚುನಾವಣಾ ಸ್ಪರ್ಧೆಗೆ ಇಳಿದಿದ್ದಾರೆ.
ಭುವನೇಶ್ವರ: ಹಾಕಿ ಇಂಡಿಯಾ ಅಧ್ಯಕ್ಷ, ಮಾಜಿ ರಾಜ್ಯಸಭಾ ಸಂಸದ ದಿಲೀಪ್ ಟಿರ್ಕಿ ಮತ್ತು ಮಾಜಿ ಭಾರತೀಯ ಹಾಕಿ ತಂಡ ನಾಯಕ ಪ್ರಬೋಧ್ ಟಿರ್ಕಿ ಚುನಾವಣಾ ಸ್ಪರ್ಧೆಗೆ ಇಳಿದಿದ್ದಾರೆ.
ಒಡಿಶಾದ ಸುಂದರ್‌ಗಢ (ಎಸ್ಟಿ) ಲೋಕಸಭಾ ಕ್ಷೇತ್ರದ ಬಿಜು ಜನತಾದಳ ಅಭ್ಯರ್ಥಿಯಾಗಿ ದಿಲೀಪ್ ಟಿರ್ಕಿ, ಸುಂದರ್‌ಗಢ ಜಿಲ್ಲೆಯ ತಲ್ಸಾರಾ (ಎಸ್ಟಿ) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಭಾರತ ಹಾಕಿ ನಾಯಕ ಪ್ರಬೋಧ್ ಟಿರ್ಕಿ ಸ್ಪರ್ಧಿಸುತ್ತಿದ್ದಾರೆ. ದಿಲೀಪ್ ಟಿರ್ಕಿ ಮಾಜಿ ಕೇಂದ್ರ ಸಚಿವ, ಹಾಲಿ ಬಿಜೆಪಿ ಸಂಸದ ಜುಯಲ್ ಓರಾಮ್ ವಿರುದ್ಧ ಕಣಕ್ಕಿಳಿದಿದ್ದಾರೆ.