ಸಾರಾಂಶ
ಉಗ್ರರ ಪರ ಹೇಳಿಕೆ ಕೊಟ್ಟ ವಾದ್ರಾಗೆ ಗುಂಡಿಕ್ಕಿ: ಶಾಸಕ ಚನ್ನಬಸಪ್ಪ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾಂಗ್ರೆಸ್ ಸಂಸದೆ ಪ್ರಿಯಾಂಕ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಉಗ್ರರಿಗೆ ಶಕ್ತಿ ತುಂಬುವ ಹೇಳಿಕೆ ನೀಡಿದ್ದು, ಅವರನ್ನು ಬಂಧಿಸಬೇಕು. ಇಲ್ಲವೇ ಗುಂಡಿಕ್ಕಿ ಕೊಲ್ಲಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಹಲ್ಗಾಂನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಮಡಿದವರಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಈ ಸಮಯದಲ್ಲಿ ವಾದ್ರಾ ನೀಡಿರುವ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ಉಗ್ರವಾದಿಗಳಿಗೆ ಶಕ್ತಿ ತುಂಬುವ ಹೇಳಿಕೆ ನೀಡಿದ ವಾದ್ರಾ ಒಬ್ಬ ದೇಶ ದ್ರೋಹಿಯಾಗಿದ್ದು, ದೇಶದಲ್ಲಿ ಬದುಕಲು ನಾಲಾಯಕ್ಕು. ನರಮೇಧ ನಡೆಯುತ್ತಿರುವ ಈ ಹೊತ್ತಿನಲ್ಲಿ ದೇಶವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಕಾಂಗ್ರೆಸ್ ನಾಯಕರು ಒಂದೆಡೆ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕುಟುಂಬದೊಡನೆ ನಾವಿದ್ದೇವೆ ಎನ್ನುತ್ತಾರೆ. ಇನ್ನೊಂದೆಡೆ ಈ ಘಟನೆಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ಈ ಸಂದರ್ಭದಲ್ಲಿ ಇಂಥಹ ನರೆಟಿವ್ ಸೆಟ್ ಮಾಡುವುದು ದೇಶದ್ರೋಹದ ಕಾರ್ಯ ಎಂದು ಕಿಡಿಕಾರಿದರು.ಭಯೋತ್ಪಾದಕರ ದಾಳಿಗೆ ರಾಜ್ಯದ ಮೂವರು ಮೃತಪಟ್ಟಿದ್ದು, ಭಯೋತ್ಪಾದಕರಿಗೆ ಮನುಷ್ಯತ್ವ ಇರುವುದಿಲ್ಲ. ಇಂಥ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಕೊಲ್ಲಬೇಕು. ಹಾಗೆಯೇ ಪಾಕಿಸ್ತಾನಕ್ಕೆ ಬಾಂಬ್ ಹಾಕಿ ಭಾರತ ಮಾತೆಗೆ ಹೂವು ಹಾಕಿ ಎಂಬ ಘೋಷಣೆಗಳು ಕಾರ್ಯಗತವಾಗಬೇಕು ಎಂದರು.