ಪವನ್‌ ಸೋಲಿಸುವ ಪಣ ಸೋತು ಹೆಸರು ಬದಲಿಸಿಕೊಂಡ ನಾಯಕ

| Published : Jun 22 2024, 12:47 AM IST / Updated: Jun 22 2024, 04:30 AM IST

ಪವನ್‌ ಸೋಲಿಸುವ ಪಣ ಸೋತು ಹೆಸರು ಬದಲಿಸಿಕೊಂಡ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗಷ್ಟೇ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್‌ ವಿರುದ್ಧ ಪಕ್ಷದ ಅಭ್ಯರ್ಥಿ ಗೆಲ್ಲಿಸುವಲ್ಲಿ ವಿಫಲವಾಗಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಮುದ್ರಗಡ ಪದ್ಮನಾಭಂ ತಮ್ಮ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ.

ಅಮರಾವತಿ: ಇತ್ತೀಚೆಗಷ್ಟೇ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್‌ ವಿರುದ್ಧ ಪಕ್ಷದ ಅಭ್ಯರ್ಥಿ ಗೆಲ್ಲಿಸುವಲ್ಲಿ ವಿಫಲವಾಗಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಮುದ್ರಗಡ ಪದ್ಮನಾಭಂ ತಮ್ಮ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ.

ಪೀಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಸವಾಲು ಹಾಕಿದ್ದ ಪದ್ಮನಾಭಂ, ಒಂದು ವೇಳೆ ನಾನು ಪವನ್‌ ಕಲ್ಯಾಣ್‌ ಸೋಲನ್ನ ಖಚಿತಪಡಿಸದೇ ಹೋದಲ್ಲಿ ನನ್ನ ಹೆಸರನ್ನೇ ಬದಲಿಸಿಕೊಳ್ಳುತ್ತೇನೆ ಎಂದಿದ್ದರು. ಚುನಾವಣೆಯಲ್ಲಿ ಪವನ್‌ 70000ಕ್ಕೂ ಹೆಚ್ಚು ಮತಗಳ ಅಂತರರಿಂದ ಗೆದ್ದಿದ್ದರು.

ಈ ಹಿನ್ನೆಲೆಯಲ್ಲಿ ಇದೀಗ ಮುದ್ರಗಡ ಪದ್ಮನಾಭಂ ಅವರು ತಮ್ಮ ಹೆಸರನ್ನು ಪದ್ಮನಾಭ ರೆಡ್ಡಿ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು‘ಚುನಾವಣಾ ಸಂದರ್ಭದಲ್ಲಿ ಮಾಡಿರುವ ವಾಗ್ದಾನದಂತೆ ನಾನು ನನ್ನ ಹೆಸರನ್ನು ಬದಲಿಸಿಕೊಂಡಿದ್ದೇನೆ. ನನ್ನನ್ನು ಯಾರೂ ಒತ್ತಾಯಿಸಿಲ್ಲ’ ಎಂದು ಹೇಳಿದ್ದಾರೆ.