ಗಮನ ಸೆಳೆಯುತ್ತಿರುವ 14 ವರ್ಷದ ಕ್ರೀಡಾ ಪಾಡ್‌ಕಾಸ್ಟರ್‌ ಮನನ್‌ ಪೆರಿವಾಲ್‌

| N/A | Published : Nov 19 2025, 12:23 PM IST

Manan
ಗಮನ ಸೆಳೆಯುತ್ತಿರುವ 14 ವರ್ಷದ ಕ್ರೀಡಾ ಪಾಡ್‌ಕಾಸ್ಟರ್‌ ಮನನ್‌ ಪೆರಿವಾಲ್‌
Share this Article
  • FB
  • TW
  • Linkdin
  • Email

ಸಾರಾಂಶ

  14 ವರ್ಷದ ಬಾಲಕನೊಬ್ಬ ಕ್ರೀಡಾ ಪಾಡ್‌ಕಾಸ್ಟ್‌ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಮಲ್ಲಯ್ಯ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಓದುತ್ತಿರುವ ಮನನ್‌ ಪೆರಿವಾಲ್‌   ‘ಮೈಕ್‌ ಆ್ಯಂಡ್‌ ಮ್ಯಾಜಿಕ್‌ ವಿತ್ ಮನನ್’ ಎಂಬ ಪಾಡ್‌ಕಾಸ್ಟ್‌ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ

 ಸೆಲೆಬ್ರಿಟಿಗಳೇ ಪಾಡ್‌ಕಾಸ್ಟ್‌ ಕ್ಷೇತ್ರದಲ್ಲಿ ಮಿಂಚುತ್ತಿರುವ ವೇಳೆಯಲ್ಲಿ ಕೇವಲ 14 ವರ್ಷದ ಬಾಲಕನೊಬ್ಬ ಕ್ರೀಡಾ ಪಾಡ್‌ಕಾಸ್ಟ್‌ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಬೆಂಗಳೂರಿನ ಮಲ್ಲಯ್ಯ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಓದುತ್ತಿರುವ ಮನನ್‌ ಪೆರಿವಾಲ್‌ ಎಂಬ ಈ ವಿದ್ಯಾರ್ಥಿ ‘ಮೈಕ್‌ ಆ್ಯಂಡ್‌ ಮ್ಯಾಜಿಕ್‌ ವಿತ್ ಮನನ್’ ಎಂಬ ಪಾಡ್‌ಕಾಸ್ಟ್‌ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಮತ್ತು ಜನಮನ್ನಣೆ ಗಳಿಸಿದ್ದಾರೆ.

ನೇಹಾ ಸೋಂತಾಲಿಯಾ ಪೆರಿವಾಲ್‌ ಅವರ ಪುತ್ರ

ನೇಹಾ ಸೋಂತಾಲಿಯಾ ಪೆರಿವಾಲ್‌ ಅವರ ಪುತ್ರ ಮತ್ತು ಮನೋಜ್‌ಕುಮಾರ್‌ ಸೋಂತಾಲಿಯಾ ಅವರ ಮೊಮ್ಮಗನಾಗಿರುವ ಇವರು ಚಿಕ್ಕ ವಯಸ್ಸಿನಲ್ಲಿಯೇ ಪಾಡ್‌ಕಾಸ್ಟ್‌ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳ ಸಂದರ್ಶನ ಮಾಡುತ್ತಿರುವ ಅವರು ಈ ಮೂಲಕ ಯುವ ಜನತೆಗೆ ಸ್ಫೂರ್ತಿ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಈವರೆಗೆ ಬೆಂಗಳೂರಿನ ಖ್ಯಾತ ಪ್ಯಾರಾ ಸ್ವಿಮ್ಮರ್ ತೇಜಸ್ ನಂದಕುಮಾರ್‌, ಎಫ್4 ರೇಸಿಂಗ್‌ ಪ್ರತಿಭೆ ಶ್ರೀಯಾ ಲೋಹಿಯಾ, ಟ್ರಯಾಥ್ಲಾನ್ ಕೋಚ್ ಟಿಮ್‌ ಟಿಮ್‌ ಶರ್ಮಾ ಮುಂತಾದವರ ಜೊತೆ ಮಾತುಕತೆ ನಡೆಸಿದ್ದಾರೆ.

ಮೈಕ್‌ ಆ್ಯಂಡ್‌ ಮ್ಯಾಜಿಕ್‌ ವಿತ್ ಮನನ್

ಯೂಟ್ಯೂಬ್‌, ಸ್ಪೋಟಿಫೈ, ಆ್ಯಪಲ್‌ ಪಾಡ್‌ಕಾಸ್ಟ್‌, ಜಿಯೋ ಸಾವನ್ ಮುಂತಾದ ಆ್ಯಪ್‌ನಲ್ಲಿ ಇವರ ‘ಮೈಕ್‌ ಆ್ಯಂಡ್‌ ಮ್ಯಾಜಿಕ್‌ ವಿತ್ ಮನನ್’ ಪಾಡ್‌ಕಾಸ್ಟ್‌ ಅನ್ನು ಆನಂದಿಸಬಹುದಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡುತ್ತಿರುವ ಅವರ ಪ್ರತಿಭೆಯನ್ನು ಗಣ್ಯ ವ್ಯಕ್ತಿಗಳು ಮೆಚ್ಚಿಕೊಂಡಿದ್ದಾರೆ.

 

Read more Articles on