ಹೊಸ ಲ್ಯಾಪ್‌ಟಾಪ್, ಮೊಬೈಲ್ ಅಥವಾ ಮನೆಗೆ ಬೇಕಾದ ಫರ್ನಿಚರ್ ಖರೀದಿಸಬೇಕಾದರೆ, ಆನ್‌ಲೈನ್‌ನಲ್ಲಿ ಏನು ಆಫರ್ ಇದೆ ಅಂತ ಕೈ ಮೊದಲು ಸವರುವುದು ಮೊಬೈಲ್ ಸ್ಕ್ರೀನ್ ಅನ್ನು. ಆನ್‌ಲೈನ್ ಶಾಪಿಂಗ್‌ನಲ್ಲಿ ಹಣ ಉಳಿಸಲು ಸಹಾಯ ಮಾಡುವ 6 ಟಿಪ್ಸ್ ಇಲ್ಲಿವೆ.
ಹೊಸ ಲ್ಯಾಪ್‌ಟಾಪ್, ಮೊಬೈಲ್ ಅಥವಾ ಮನೆಗೆ ಬೇಕಾದ ಫರ್ನಿಚರ್ ಖರೀದಿಸಬೇಕಾದರೆ, ಆನ್‌ಲೈನ್‌ನಲ್ಲಿ ಏನು ಆಫರ್ ಇದೆ ಅಂತ ಕೈ ಮೊದಲು ಸವರುವುದು ಮೊಬೈಲ್ ಸ್ಕ್ರೀನ್ ಅನ್ನು. ಹೀಗೆ ಕಡಿಮೆ ಬೆಲೆಗೆ ಬೆಸ್ಟ್ ಪ್ರಾಡಕ್ಟ್ ಶಾಪಿಂಗ್ ಮಾಡಬೇಕು ಎಂಬ ಮನಸ್ಥಿತಿ ಇರುವವರಿಗೆ ಆನ್‌ಲೈನ್ ಶಾಪಿಂಗ್‌ನಲ್ಲಿ ಹಣ ಉಳಿಸಲು ಸಹಾಯ ಮಾಡುವ 6 ಟಿಪ್ಸ್ ಇಲ್ಲಿವೆ.
1. ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳು ಮೆಂಬರ್‌ಶಿಪ್ ಆಫರ್‌ಗಳು
ಆನ್‌ಲೈನ್‌ನಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತಾದಂತಹ ಹಲವು ಕಂಪನಿಗಳು ಮೆಂಬರ್‌ಶಿಪ್ ಮತ್ತು ಲಾಯಲ್ಟಿ ಪ್ರೋಗ್ರಾಂ ನೀಡುತ್ತವೆ. ಈ ಮೂಲಕ ಉಚಿತ ಡೆಲಿವರಿ, ವಿಶೇಷ ಆಫರ್ ಒದಗಿಸುತ್ತವೆ. ಜೊತೆಗೆ ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡಿದರೆ ಹೆಚ್ಚಿನ ಡಿಸ್ಕೌಂಟ್ ಸಿಗುತ್ತದೆ. ಆರ್ಡರ್ ಕ್ಯಾನ್ಸಲ್ ಮಾಡಿದರೆ, ಕ್ರೆಡಿಟ್ ಕಾರ್ಡ್‌ಗಳಿಗೆ ಬೇಗನೆ ಹಣ ವಾಪಸ್ ಬರುತ್ತದೆ.
2. ಆನ್‌ಲೈನ್ ವ್ಯಾಲೆಟ್ ಆಫರ್‌ಗಳು
ಪೇಟಿಎಂ ಮತ್ತು ಮೊಬಿಕ್ವಿಕ್‌ನಂತಹ ಆನ್‌ಲೈನ್ ವ್ಯಾಲೆಟ್‌ಗಳನ್ನು ಸರಿಯಾಗಿ ಬಳಸಿಕೊಂಡರೆ ಸಾಕಷ್ಟು ಹಣ ಉಳಿಸಬಹುದು. ಈ ವ್ಯಾಲೆಟ್‌ಗಳ ಮೂಲಕ ಹಣ ಪಾವತಿಸಿದಾಗ ನಮಗೆ ಕ್ಯಾಶ್‌ಬ್ಯಾಕ್ ಸಿಗುತ್ತದೆ. ವೆಬ್‌ಸೈಟ್‌ಗಳಲ್ಲಿ ಇರುವ ವ್ಯಾಲೆಟ್ ಆಫರ್‌ಗಳನ್ನು ನೋಡಿ, ಪೇಮೆಂಟ್ ಮಾಡುವಾಗ ಇವುಗಳನ್ನು ಬಳಸಿಕೊಳ್ಳುವುದು ಜಾಣತನ.
3. ಕೂಪನ್ ಕೋಡ್ ಮತ್ತು ಕ್ಯಾಶ್‌ಬ್ಯಾಕ್
ಆನ್‌ಲೈನ್ ವೆಬ್‌ಸೈಟ್‌ಗಳು ಆಗಾಗ ಪ್ರೊಮೋಷನಲ್ ಆಫರ್ ಮತ್ತು ಕೂಪನ್ ಕೋಡ್‌ಗಳನ್ನು ನೀಡುತ್ತಿರುತ್ತವೆ. ಕೆಲವು ರೀಟೇಲರ್‌ಗಳು ನೇರವಾಗಿ ತಮ್ಮ ವೆಬ್‌ಸೈಟ್‌ಗಳ ಮೂಲಕ ಶಾಪಿಂಗ್ ಮಾಡಿದರೆ ಕ್ಯಾಶ್‌ಬ್ಯಾಕ್ ನೀಡುತ್ತವೆ. ಆದರೆ ಇವುಗಳ ಉತ್ಪನ್ನಗಳ ಗುಣಮಟ್ಟ ಹೇಗಿರುತ್ತದೆ ಅಂತ ಮೊದಲು ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ. ವಿಶ್ವಾಸ ಬಂದರೆ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.
4. ಬೇಕಾದ ವಸ್ತುಗಳನ್ನು ಕಾರ್ಟ್‌ನಲ್ಲಿ ಎತ್ತಿಟ್ಟಿರಿ
ನಿಮಗೆ ಯಾವುದೋ ವಸ್ತುವನ್ನು ಕೊಳ್ಳಬೇಕು ಅನಿಸಿರುತ್ತದೆ. ಆದರೆ ಅದರ ಬೆಲೆ ನಿಮ್ಮ ಬಜೆಟ್‌ಗಿಂತ ಜಾಸ್ತಿ ಇರುತ್ತದೆ. ಇಂಥಾ ಸಮಯದಲ್ಲಿ ಅದನ್ನು ಸುಮ್ಮನೆ ಕಾರ್ಟ್‌ಗೆ ಸೇರಿಸಿ ಹಾಗೇ ಬಿಟ್ಟುಬಿಡಿ. ಕೆಲವು ದಿನಗಳ ನಂತರ ಕಂಪನಿಯವರು ಆ ವಸ್ತುವಿನ ಬೆಲೆ ಕಡಿಮೆ ಮಾಡಿ ಮೆಸೇಜ್ ಅಥವಾ ಇಮೇಲ್ ಕಳುಹಿಸುವ ಸಾಧ್ಯತೆ ಇರುತ್ತದೆ.
5. ಆ್ಯಪ್‌ಗಳಿಗೆ ಮಾತ್ರ ಇರುವ ಆಫರ್‌ಗಳು
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳು ತಮ್ಮ ಮೊಬೈಲ್ ಆ್ಯಪ್‌ಗಳ ಮೂಲಕ ಮಾತ್ರ ವಿಶೇಷ ಡಿಸ್ಕೌಂಟ್‌ಗಳನ್ನು ನೀಡುತ್ತವೆ. ಯಾವುದೇ ವಸ್ತುವನ್ನು ಕೊಳ್ಳುವ ಮುನ್ನ ವೆಬ್‌ಸೈಟ್ ಮತ್ತು ಆ್ಯಪ್ ಎರಡರಲ್ಲೂ ಬೆಲೆಯನ್ನು ಹೋಲಿಸಿ ನೋಡಿ. ಕೆಲವೊಮ್ಮೆ ಇವುಗಳಲ್ಲಿ ಕ್ಯಾಶ್‌ಬ್ಯಾಕ್ ಆಫರ್‌ಗಳೂ ಇರುತ್ತವೆ.
6. ಪ್ರೊಮೋಷನಲ್ ಕೋಡ್+ ಬ್ಯಾಂಕ್ ಆಫರ್+ ಕ್ಯಾಶ್‌ಬ್ಯಾಕ್
ಕೂಪನ್ ಕೋಡ್, ಬ್ಯಾಂಕ್ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಈ ಮೂರನ್ನೂ ಒಟ್ಟಿಗೆ ಬಳಸಿಕೊಂಡರೆ ಬಹಳಷ್ಟು ಹಣ ಉಳಿಸಬಹುದು. ಹೀಗೆ ಮಾಡುವುದರಿಂದ ಸಿಗುವ ಕ್ಯಾಶ್‌ಬ್ಯಾಕ್ ಅನ್ನು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್ ಆಗಿ ಬದಲಾಯಿಸಿಕೊಳ್ಳಬಹುದು ಅಥವಾ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

