ಹಬ್ಬದ ಅವಧಿಯಲ್ಲಿ ಗ್ರಾಹಕರ ಸಂಪೂರ್ಣ ಶಾಪಿಂಗ್ ಹಂತಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಗಳು (ಎಸ್ ಎಂ ಬಿಗಳು) ವಾಟ್ಸಾಪ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

ಕನ್ನಡಪ್ರಭವಾರ್ತೆ ಬೆಂಗಳೂರು

ರಾತ್ರಿ 11 ಗಂಟೆಯ ಸಮಯ. ಗ್ರಾಹಕರೊಬ್ಬರು ನೀಲಿ ಬಣ್ಣದ ಕುರ್ತಾ ಲಾರ್ಜ್ ಅಳತೆಯಲ್ಲಿ ಲಭ್ಯವಿದೆಯೇ, ದೀಪಾವಳಿಗೆ ಮುಂಚಿತವಾಗಿ ತಲುಪಲಿದೆಯೇ ಮತ್ತು ಅದಕ್ಕೆ ರಿಯಾಯಿತಿ ಇದೆಯೇ ಎಂದು ಆನ್‌ಲೈನ್‌ನಲ್ಲಿ ಹುಡುಕುತ್ತಾರೆ ಎಂದಿಟ್ಟುಕೊಳ್ಳಿ. ಆಮೇಲೆ ಇಂತಹ ನೂರಾರು ವಿಚಾರಣೆಗಳು ಏಕಕಾಲಕ್ಕೆ ಬಂದರೆ ಹೇಗಿರಬಹುದು ಎಂದು ಊಹಿಸಿಕೊಳ್ಳಿ. ಭಾರತದ ಸಣ್ಣ ವ್ಯಾಪಾರಗಳಿಗೆ ಇದು ಹಬ್ಬದ ಸೀಸನ್. ಇಲ್ಲಿ ಬೇಡಿಕೆಯ ಕೊರತೆಯಿಲ್ಲ, ಆದರೆ ಆ ಕ್ಷಿಪ್ರ ಬೇಡಿಕೆಗೆ ತಕ್ಕಂತೆ ವೇಗವಾಗಿ ಸ್ಪಂದಿಸುವುದೇ ವ್ಯಾಪಾರಿಗಳ ಮುಂದಿರುವ ಅತಿದೊಡ್ಡ ಸವಾಲು.ಹಬ್ಬದ ಅವಧಿಯಲ್ಲಿ ಗ್ರಾಹಕರ ಸಂಪೂರ್ಣ ಶಾಪಿಂಗ್ ಹಂತಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಗಳು (ಎಸ್ ಎಂ ಬಿಗಳು) ವಾಟ್ಸಾಪ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ತಜ್ಞರು ನೀಡಿರುವ ಆರು ಪ್ರಮುಖ ಮಾರ್ಗಗಳು ಇಲ್ಲಿವೆ:1. ಉತ್ಪನ್ನ ಹುಡುಕಾಟವನ್ನು ನೇರ ಸಂಭಾಷಣೆಯನ್ನಾಗಿ ಪರಿವರ್ತಿಸಿ

ಗ್ರಾಹಕರು ವ್ಯಾಪಾರಿಗಳನ್ನು ನೇರವಾಗಿ ಸಂಪರ್ಕಿಸುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಬೇಕಾದ ಉತ್ಪನ್ನಗಳನ್ನು ಹುಡುಕುತ್ತಾರೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ನೇರವಾಗಿ ವಾಟ್ಸಾಪ್ ಚಾಟ್ ಆರಂಭಿಸುವಂತಹ ಕ್ಲಿಕ್-ಟು-ವಾಟ್ಸಾಪ್ ಜಾಹೀರಾತುಗಳು ಇದಕ್ಕೆ ನೆರವಾಗುತ್ತವೆ. ಉದಾಹರಣೆಗೆ, ಹಬ್ಬದ ಸಂಗ್ರಹವನ್ನು ಪ್ರಚಾರ ಮಾಡುವ ಆಭರಣ ಸಂಸ್ಥೆಯೊಂದು, ಗ್ರಾಹಕರನ್ನು ಬೇರೆ ವೆಬ್‌ಸೈಟ್‌ಗೆ ಕಳುಹಿಸಿ ಕಳೆದುಕೊಳ್ಳುವ ಬದಲು, ಆ ಕ್ಷಣದಲ್ಲೇ ವಾಟ್ಸಾಪ್‌ನಲ್ಲಿ ಅವರ ವಿನ್ಯಾಸ, ಬೆಲೆ ಮತ್ತು ಲಭ್ಯತೆಯ ಕುರಿತ ಪ್ರಶ್ನೆಗಳಿಗೆ ತಕ್ಷಣ ಉತ್ತರಿಸಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಬಹುದು.2. ಎಚ್ಚರವಾಗಿರದೆ ಮಧ್ಯರಾತ್ರಿಯಲ್ಲೂ ಗ್ರಾಹಕರಿಗೆ ಉತ್ತರಿಸಿ

ಸಣ್ಣ ವ್ಯಾಪಾರಿಗಳು ಪ್ರತಿಯೊಂದು ಗ್ರಾಹಕರ ಸಂದೇಶಕ್ಕೂ ತಾವೇ ಸ್ವತಃ ಜಾಗೃತರಾಗಿ ಉತ್ತರಿಸಬೇಕಿಲ್ಲದ ಮೊದಲ ಹಬ್ಬದ ಸೀಸನ್ ಇದಾಗಿದೆ. ಹಬ್ಬದ ದಿನಗಳಲ್ಲಿ ಗ್ರಾಹಕರು ಯಾವುದೇ ಸಮಯದಲ್ಲಿ ಬೇಕಾದರೂ ಉತ್ಪನ್ನ ವಿಚಾರಿಸುತ್ತಾರೆ ಮತ್ತು ತಕ್ಷಣವೇ ಬೆಲೆ ಹೋಲಿಕೆ ಮಾಡುತ್ತಾರೆ. ವಾಟ್ಸಾಪ್‌ಗೆ ಸಂಪರ್ಕಿಸುವ ಜಾಹೀರಾತುಗಳು ಹಠಾತ್ ಸಂದೇಶಗಳ ಮಹಾಪೂರವನ್ನೇ ಹರಿಸುವುದರಿಂದ, ಮರುದಿನ ಬೆಳಿಗ್ಗೆ ನೀಡುವ ಉತ್ತರ ಗ್ರಾಹಕರನ್ನು ಸೆಳೆಯಲು ತೀರಾ ತಡವಾಗಬಹುದು. ಅರ್ಹ ಸಣ್ಣ ಉದ್ದಿಮೆಗಳು ಈಗ ಮೆಟಾ ಬಿಸಿನೆಸ್ ಏಜೆಂಟ್ ಅನ್ನು ಬಳಸಿಕೊಂಡು ದಿನದ 24 ಗಂಟೆಯೂ ನಿರಂತರ ಸಂಭಾಷಣೆ ನಡೆಸಬಹುದು. ಇದು ವ್ಯಾಪಾರದ ಉತ್ಪನ್ನಗಳು, ದರ ಹಾಗೂ ಡೆಲಿವರಿ ವಿವರಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ನಿರರ್ಗಳವಾಗಿ ವ್ಯವಹರಿಸುವ ಇದು, ಮಾಲೀಕರ ವೈಯಕ್ತಿಕ ಗಮನ ಅಗತ್ಯವೆನಿಸಿದ ತಕ್ಷಣವೇ ಚಾಟ್ ಅನ್ನು ಅವರಿಗೆ ಹಸ್ತಾಂತರಿಸಲು ಸದಾ ಸಿದ್ಧವಾಗಿರುತ್ತದೆ.3. ಖರೀದಿಸುವ ಮುನ್ನ ಪೂರ್ಣ ಮಾಹಿತಿ ವೀಕ್ಷಿಸಲು ಅವಕಾಶ ನೀಡಿ

ಹಬ್ಬದ ಗ್ರಾಹಕರು ಮೂಲತಃ ವಿಂಡೋ-ಶಾಪಿಂಗ್ ಇಷ್ಟಪಡುವ ಮನಸ್ಥಿತಿಯವರು. ಅವರು ಬಣ್ಣಗಳನ್ನು ಕಣ್ತುಂಬಿಕೊಳ್ಳಲು, ಅಳತೆಗಳನ್ನು ತಾಳೆ ನೋಡಲು ಹಾಗೂ ಬೆಲೆಗಳನ್ನು ಅಳೆದು ತೂಗಲು ಬಯಸುತ್ತಾರೆ. ವಾಟ್ಸಾಪ್ ಕ್ಯಾಟಲಾಗ್ ಸೌಲಭ್ಯವು ಕೇವಲ ಚಾಟ್ ಸಂದೇಶಗಳಲ್ಲಿ ಹುಡುಕಾಡುವ ಬದಲಿಗೆ ಗ್ರಾಹಕರಿಗೆ ಸುಲಭವಾಗಿ ಸರಕುಗಳನ್ನು ವೀಕ್ಷಿಸುವ ಅಂಗಡಿಯ ಕಿಟಕಿಯಂತೆಯೇ ಕಾರ್ಯನಿರ್ವಹಿಸುತ್ತದೆ. ಉಡುಗೊರೆ ವ್ಯಾಪಾರಿಗಳು ಸಾಧಾರಣದಿಂದ ಹಿಡಿದು ಐಷಾರಾಮಿ ಗಿಫ್ಟ್ ಹ್ಯಾಂಪರ್‌ಗಳವರೆಗೆ ಎಲ್ಲವನ್ನೂ ಕ್ರಮವಾಗಿ ಜೋಡಿಸಬಹುದು. ಫ್ಯಾಷನ್ ವ್ಯಾಪಾರಿ ತಮ್ಮ ಇಡೀ ಹಬ್ಬದ ವಸ್ತ್ರಶ್ರೇಣಿಯನ್ನೇ ಇಲ್ಲಿ ಪ್ರದರ್ಶಿಸಬಹುದು. ಉತ್ಪನ್ನಗಳನ್ನು ವೀಕ್ಷಿಸುವುದು ಎಷ್ಟು ಸುಲಭವಾಗುತ್ತದೆಯೋ, "ನಿಮ್ಮಲ್ಲಿ ಏನೇನಿದೆ? " ಎಂಬ ವಿಚಾರಣೆಯಿಂದ "ನನಗೆ ಇದು ಬೇಕು, ಆರ್ಡರ್ ಮಾಡಿ " ಎಂಬ ಖರೀದಿಯ ನಿರ್ಧಾರಕ್ಕೆ ಬರುವ ಸಮಯ ಅಷ್ಟೇ ಕಡಿಮೆಯಾಗುತ್ತದೆ.4. "ಖರೀದಿಸುತ್ತೇನೆ " ಎಂದ ಕ್ಷಣದಿಂದ ಹಣ ಪಾವತಿಯ ಹಾದಿಯನ್ನು ಸುಲಭಗೊಳಿಸಿ

ಒಮ್ಮೆ ಖರೀದಿಸಲು ನಿರ್ಧರಿಸಿದ ಗ್ರಾಹಕನನ್ನು ನಿರ್ವಹಿಸುವುದು ಅತ್ಯಂತ ಸುಲಭ—ಆದರೆ ಪಾವತಿ ಮಾಡಲು ಅವರನ್ನು ಬೇರೆ ಯಾವುದೋ ಆ್ಯಪ್ ಅಥವಾ ಲಿಂಕ್‌ಗೆ ಕಳುಹಿಸುವವರೆಗೆ ಮಾತ್ರ. ವಾಟ್ಸಾಪ್ ಬಿಸಿನೆಸ್ ಪೇಮೆಂಟ್ಸ್ ವ್ಯವಸ್ಥೆಯು ಹಣ ಪಾವತಿಯನ್ನೂ ಚಾಟ್ ಒಳಗಡೆಯೇ ಪೂರ್ಣಗೊಳಿಸಲು ನೆರವಾಗುತ್ತದೆ. ಕೇವಲ ಒಂದೇ ಟ್ಯಾಪ್‌ನಲ್ಲಿ ಕ್ಯೂಆರ್ ಕೋಡ್ ಹಂಚಿಕೊಳ್ಳುವ ಮೂಲಕ, ಹೋಮ್ ಬೇಕರ್ ಒಬ್ಬರು ಹಬ್ಬದ ಹ್ಯಾಂಪರ್ ಆರ್ಡರ್ ಖಚಿತಪಡಿಸಿಕೊಂಡು ಅದೇ ಚಾಟ್‌ನಲ್ಲಿ ನೇರವಾಗಿ ಹಣವನ್ನೂ ಪಡೆಯಬಹುದು. ಇದೀಗ ಮೆಟಾ ಬಿಸಿನೆಸ್ ಏಜೆಂಟ್ ಚಾಟ್ ಸಂಭಾಷಣೆಯ ಒಳಗಡೆಯೇ ಯುಪಿಐ ಪಾವತಿಗಳನ್ನು ನಿಭಾಯಿಸುವ ಸಾಮರ್ಥ್ಯವನ್ನೂ ಪಡೆದುಕೊಂಡಿದೆ.5. ಹಳೆಯ ಗ್ರಾಹಕರು ನಿಮ್ಮ ಬಳಿಗೇ ಮರಳಲು ಸಕಾರಣ ನೀಡಿ

ಹಬ್ಬದ ಅವಧಿಯಲ್ಲಿ ನಿಮ್ಮ ಅತ್ಯುತ್ತಮ ಗ್ರಾಹಕರೆಂದರೆ ಈಗಾಗಲೇ ನಿಮ್ಮ ಸಂಸ್ಥೆಯ ಪರಿಚಯವಿರುವ ಹಳೆಯ ಗ್ರಾಹಕರೇ ಆಗಿರುತ್ತಾರೆ. ಬಿಸಿನೆಸ್ ಬ್ರಾಡ್‌ಕಾಸ್ಟ್ ಸಂದೇಶದ ಮೂಲಕ ಕಳುಹಿಸುವ ವೈಯಕ್ತಿಕ ಸಂದೇಶಗಳು ನಿಜಕ್ಕೂ ಅತ್ಯುಪಯುಕ್ತ ಮಾಹಿತಿಯನ್ನು ಒದಗಿಸುತ್ತವೆ. ಉದಾಹರಣೆಗೆ, ಜನದಟ್ಟಣೆ ಆರಂಭವಾಗುವ ಮುನ್ನವೇ ಸಲೂನ್‌ಗಳು ಮುಂಗಡ ಬುಕಿಂಗ್ ಮಾಡಲು ನೆನಪಿಸುವುದು, ಬೇಕರಿಗಳು ಹಬ್ಬದ ಆರ್ಡರ್ ಸ್ವೀಕರಿಸುವ ಅಂತಿಮ ಗಡುವನ್ನು ಎಚ್ಚರಿಸುವುದು, ಅಥವಾ ವಸ್ತ್ರ ಮಳಿಗೆಗಳು ಹೊಸ ಕಲೆಕ್ಷನ್ ಹಾಗೂ ಹಬ್ಬದ ರಿಯಾಯಿತಿ ಮಾರಾಟದ ಮಾಹಿತಿ ರವಾನಿಸುವುದು. ಸಕಾಲಿಕ ಮತ್ತು ಸೂಕ್ತವಾದ ಒಂದು ಸಣ್ಣ ಸಂದೇಶವು ಯಾಂತ್ರಿಕವಾಗಿ ಕಳುಹಿಸುವ ನೂರಾರು ಸಾಮಾನ್ಯ ಜಾಹೀರಾತುಗಳಿಗಿಂತ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.6. ಪ್ರತಿಯೊಂದು ಸಂಭಾಷಣೆಯಿಂದಲೂ ಕಲಿಯಿರಿ ಮತ್ತು ವ್ಯವಹಾರ ಸುಧಾರಿಸಿ

ಗ್ರಾಹಕರೊಂದಿಗೆ ನಡೆಯುವ ಪ್ರತಿಯೊಂದು ಸಂಭಾಷಣೆಯೂ ವ್ಯಾಪಾರಕ್ಕೆ ಮಹತ್ವದ ದಿಕ್ಸೂಚಿಯಾಗಿದೆ. ಡೆಲಿವರಿ ಕುರಿತಾಗಿ ಪದೇಪದೇ ಬರುವ ಪ್ರಶ್ನೆಗಳು ಅಸ್ಪಷ್ಟ ಸಾಗಾಣಿಕೆ ಮಾಹಿತಿಯನ್ನು ಬಿಂಬಿಸುತ್ತವೆ. ಒಂದು ನಿರ್ದಿಷ್ಟ ಉತ್ಪನ್ನ ಅಥವಾ ಬೆಲೆಯ ಬಗ್ಗೆ ಮರುಕಳಿಸುವ ಬೇಡಿಕೆಗಳು ಮುಂದಿನ ಸೀಸನ್‌ನ ಸರಕು ಸಂಗ್ರಹವನ್ನು ಹೇಗೆ ರೂಪಿಸಬೇಕೆಂಬುದಕ್ಕೆ ಮುನ್ಸೂಚನೆ ನೀಡುತ್ತವೆ. ಭಾರತದಲ್ಲಿ ಇಂಟರ್ನೆಟ್ ಬಳಸುವ ಶೇ. 91ರಷ್ಟು ವಯಸ್ಕರು ಪ್ರತಿ ವಾರವೂ ಯಾವುದಾದರೂ ವ್ಯಾಪಾರ ಸಂಸ್ಥೆಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸುವುದರಿಂದ, ಹಬ್ಬದ ದಿನಗಳ ಚಾಟ್ ಇನ್‌ಬಾಕ್ಸ್ ಕೇವಲ ಮಾರಾಟದ ಮಾರ್ಗವಷ್ಟೇ ಅಲ್ಲ, ಅದೊಂದು ನೇರ ಮಾರುಕಟ್ಟೆ ಸಂಶೋಧನಾ ವೇದಿಕೆಯೂ ಆಗಿದೆ. ಮೆಟಾ ಬಿಸಿನೆಸ್ ಏಜೆಂಟ್ ಈ ಎಲ್ಲಾ ಒಳನೋಟಗಳನ್ನು ನೇರವಾಗಿ ವ್ಯಾಪಾರಿಗಳಿಗೆ ತಲುಪಿಸಲು ನೆರವಾಗುತ್ತದೆ.ವ್ಯಾಪಾರಿಗಳಿಗೆ ಹಬ್ಬದ ಒಳನೋಟ

ಗ್ರಾಹಕರ ಸಂಖ್ಯೆ ಹೆಚ್ಚಿದಂತೆ ವ್ಯಾಪಾರದ ನಿರ್ವಹಣೆಯ ಸಂಕೀರ್ಣತೆಯೂ ಹೆಚ್ಚುತ್ತದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ ಇರುವ ಅತ್ಯುತ್ತಮ ಅವಕಾಶವೆಂದರೆ, ವಾಟ್ಸಾಪ್ ಅನ್ನು ಕೇವಲ ಉತ್ಪನ್ನ ಪ್ರಚಾರ ಮಾಡುವ ಮತ್ತೊಂದು ಜಾಹೀರಾತು ಜಾಗವಾಗಿ ನೋಡದೆ, ಉತ್ಪನ್ನ ಹುಡುಕಾಟದಿಂದ ಹಿಡಿದು, ಪಾವತಿ ಹಾಗೂ ಮರು ಆರ್ಡರ್‌ವರೆಗಿನ ಸಂಪೂರ್ಣ ಗ್ರಾಹಕ ವಹಿವಾಟು ನಡೆಯುವ ಪ್ರಮುಖ ವ್ಯಾಪಾರ ವೇದಿಕೆಯನ್ನಾಗಿ ಬಳಸಿಕೊಳ್ಳುವುದಾಗಿದೆ.