ಸಾರಾಂಶ
ಕನ್ನಡಪ್ರಭವಾರ್ತೆ
ಉದ್ಯಮಗಳ ಡಿಜಿಟಲ್ ಬದಲಾವಣೆಗೆ ನೆರವಾಗುವ ಸಂಸ್ಥೆಯಾಗಿರುವ ಸರ್ವಿಸ್‌ನೌ ತನ್ನ ಹೊಸ ಸಂಶೋಧನಾ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ ಭಾರತದ ಶೇ.80ರಷ್ಟು ಕಂಪನಿಗಳು ಗ್ರಾಹಕ ಸೇವಾ ವಿಭಾಗದಲ್ಲಿ ಎಐ ಚಾಟ್ ಬಾಟ್ ಗಳನ್ನು ಬಳಸುತ್ತಿದ್ದಾರೆ. ಆರು ಜನರಲ್ಲಿ ಐದು ಮಂದಿ ಪ್ರಶ್ನೆಗಳಿಗೆ ಉತ್ತರ ನೀಡಲು ಎಐ ಟೂಲ್‌ಗಳನ್ನು ಬಳಸುತ್ತಿದ್ದಾರೆ.ಎಐ ಅಥವಾ ಕೃತಕ ಬುದ್ಧಿಮತ್ತೆ ಎಲ್ಲರ ದೈನಂದಿನ ಜೀವನದಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತಿದ್ದರೂ ಎಐನ ಸಮಯ ಉಳಿಸುವ ಸಾಮರ್ಥ್ಯವು ಗ್ರಾಹಕ ಸೇವೆಯ ಕಾಯುವ ಸಮಯವನ್ನು ಮಾತ್ರ ಕಡಿಮೆ ಮಾಡುತ್ತಿಲ್ಲ. ಸರ್ವಿಸ್‌ನೌ ಸಂಸ್ಥೆಯು ಗ್ರಾಹಕ ಅನುಭವ ವರದಿಯ ಪ್ರಕಾರ, ಭಾರತೀಯ ಗ್ರಾಹಕರು ಕಳೆದ ವರ್ಷ 15 ಬಿಲಿಯನ್ ಗಂಟೆಗಳಷ್ಟು ಸಮಯವನ್ನು ಗ್ರಾಹಕ ಪ್ರತಿನಿಧಿಗಾಗಿ ಫೋನ್‌ನಲ್ಲಿ ಕಾಯುವಿಕೆಯಲ್ಲಿ ಕಾದಿದ್ದಾರೆ.
ಈ ಸಂಶೋಧನಾ ವರದಿಯ ಪ್ರಕಾರ ಎಐ ಈಗ ಭಾರತೀಯ ಗ್ರಾಹಕರ ದೈನಂದಿನ ಜೀವನದಲ್ಲಿ ಗಾಢವಾಗಿ ಬೇರೂರಿದೆ.•ಶೇ.84ರಷ್ಟು ಜನರು ಶಾಪಿಂಗ್ ರೆಕಮಂಡೇಷನ್ ಗಳಿಗಾಗಿ ಎಐ ಬಳಸುತ್ತಾರೆ.
•ಶೇ.82ರಷ್ಟು ಜನರು ಆಹಾರ ಮತ್ತು ಊಟದ ಜಾಗದ ಕುರಿತು ಸಲಹೆ ಪಡೆಯಲು ಎಐ ಬಳಸುತ್ತಾರೆ.•ಸುಮಾರು ಶೇ.78ರಷ್ಟು ಜನರು ಹೂಡಿಕೆ ಆಯ್ಕೆಗಳನ್ನು ಪರಿಶೀಲಿಸಲು ಎಐ ಚಾಟ್ ಬಾಟ್ ಗಳನ್ನು ಬಳಸುತ್ತಾರೆ. ಸರ್ವಿಸ್‌ನೌ ಸಂಶೋಧನಾ ವರದಿಯ ಪ್ರಕಾರ, ಉದ್ಯಮಗಳು ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಲು ವಾರಕ್ಕೆ ಸರಾಸರಿ ಒಂದು ದಿನಕ್ಕಿಂತ ಕಡಿಮೆ ಸಮಯವನ್ನು ಬಳಕೆ ಮಾಡುತ್ತವೆ. ಉಳಿದ ನಾಲ್ಕು ದಿನಗಳನ್ನು ತಂಡಗಳ ಪ್ರತಿಕ್ರಿಯೆಗಾಗಿ ಕಾಯುವುದು, ಆಡಳಿತ ಕೆಲಸಗಳು, ಪ್ರಮೋಷನಲ್ ಆಫರ್‌ಗಳು, ತರಬೇತಿ ಮತ್ತು ವಿರಾಮಗಳು ಇತ್ಯಾದಿಗಳಲ್ಲಿ ವ್ಯಯಿಸುತ್ತವೆ. ಈ ಕೆಲಸಗಳಲ್ಲಿಯೇ ಗ್ರಾಹಕ ಪ್ರತಿನಿಧಿಗಳು ತಮ್ಮ ಸಮಯವನ್ನು ಕಳೆಯುತ್ತಾರೆ. ಆಧುನಿಕ ಎಐ ಉತ್ಪನ್ನಗಳನ್ನು ಬಳಸಿದರೆ ಈ ಕೆಲಸಗಳನ್ನೆಲ್ಲಾ ವೇಗವಾಗಿ ಮುಗಿಸಬಹುದಾಗಿದೆ.ಈ ಕುರಿತು ಮಾತನಾಡುವ ಸರ್ವಿಸ್‌ನೌ ಇಂಡಿಯಾ ಸಂಸ್ಥೆಯ ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸುಮೀತ್ ಮಾಥುರ್ ಅವರು , ‘ಭಾರತವು ಜಗತ್ತಿನ ಮೂರನೇ ಅತಿ ದೊಡ್ಡ ಗ್ರಾಹಕ ಮಾರುಕಟ್ಟೆಯಾಗಲಿದ್ದು, ಇದು ಉದ್ಯಮಗಳಿಗೆ ದೊಡ್ಡ ಅವಕಾಶಗಳನ್ನು ಒದಗಿಸುತ್ತಿದೆ. ಶೇ.82ರಷ್ಟು ಗ್ರಾಹಕರು ಹೊಸ ಎಐ ಟೂಲ್ ಗಳು ತಮ್ಮ ಗ್ರಾಹಕ ಸೇವೆಯ ನಿರೀಕ್ಷೆಗಳನ್ನು ಹೆಚ್ಚಿಸಿವೆ ಎಂದು ಹೇಳಿದ್ದಾರೆ. ಈ ವಿಚಾರದಿಂದ ಎಐ ಆಧರಿತ ಗ್ರಾಹಕ ಸೇವೆಗೆ ಗ್ರಾಹಕರು ಸಿದ್ಧರಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ವೇಗ, ವೈಯಕ್ತೀಕರಣ ಮತ್ತು ಸಾಮರ್ಥ್ಯ ಹೆಚ್ಚಳಕ್ಕೆ ಉಂಟಾಗಿರುವ ಬೇಡಿಕೆಗಳನ್ನು ಪೂರೈಸಲು ಬದಲಾವಣೆಯ ಹಾದಿಯಲ್ಲಿ ಸಾಗಲು ಸಿದ್ಧವಾಗಿರುವ ಉದ್ಯಮ ಒಂದು ಮಹತ್ವದ ಆಯ್ಕೆ ಮಾಡುವ ಸಮಯ ಈಗ ಎದುರಾಗಿದೆ. ಆ ಅಯ್ಕೆ ಏನೆಂದರೆ ಒಂದೋ ಎಐ ಆಧರಿತ ಪರಿಹಾರೋತ್ಪನ್ನಗಳನ್ನು ಅಳವಡಿಸಿಕೊಳ್ಳುವುದು ಅಥವಾ ಗ್ರಾಹಕರ ನಿಷ್ಠೆಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುವುದು’ ಎಂದು ಹೇಳಿದರು.