ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಅನಂತ ಎಮ್.ತಾಮ್ಹನ್ಕರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಕಂಡ ಹಾಸ್ಯ ಪ್ರಸಂಗಗಳನ್ನು ‘ಒಂದು ಬ್ಯಾಂಕ್ ಸ್ಪೆಷಲ್ ಊಟ’ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವರ ಮೂವತ್ತೇಳು ಕಾಲು ವರ್ಷ ಬ್ಯಾಂಕ್ ಸೇವೆಯಲ್ಲಿ ಇಪ್ಪತ್ತೇಳು ವರ್ಷಗಳಷ್ಟು ಸುದೀರ್ಘ ಕಾಲ ಉತ್ತರ ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸಿದ್ದಾರೆ
ಕನ್ನಡಪ್ರಭ ವಾರ್ತೆ ಮೈಸೂರು
ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಅನಂತ ಎಮ್.ತಾಮ್ಹನ್ಕರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಕಂಡ ಹಾಸ್ಯ ಪ್ರಸಂಗಗಳನ್ನು ‘ಒಂದು ಬ್ಯಾಂಕ್ ಸ್ಪೆಷಲ್ ಊಟ’ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವರ ಮೂವತ್ತೇಳು ಕಾಲು ವರ್ಷ ಬ್ಯಾಂಕ್ ಸೇವೆಯಲ್ಲಿ ಇಪ್ಪತ್ತೇಳು ವರ್ಷಗಳಷ್ಟು ಸುದೀರ್ಘ ಕಾಲ ಉತ್ತರ ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಸೇವೆಯಲ್ಲಿ ಇದ್ದಾಗ ಅನುಭವಿಸಿದ ರಸನಿಮಿಷಗಳು, ಹಾಸ್ಯ ಪ್ರಸಂಗಗಳು, ಪೇಚಿನ ಸನ್ನಿವೇಶಗಳನ್ನು ಅವರಿಲ್ಲಿ ದಾಖಲಿಸಿದ್ದಾರೆ. ಬಾಲ್ಯದ ಕೆಲವು ವಿಶೇಷ ನೆನಪುಗಳು ಇವೆ.
ಉತ್ತರ ಕರ್ನಾಟಕದಲ್ಲಿ ಖಾನಾವಳಿಗಳೇ ಹೆಚ್ಚು. ಸ್ವಲ್ಪ ಖಾರ ಹೆಚ್ಚು. ದಕ್ಷಿಣ ಕನ್ನಡಕ್ಕೆ ಸೇರಿದ ತಾಮ್ಹನ್ಕರ್‌ಗೆ ಅದು ಹೊಂದಾಣಿಕೆ ಆಗುತ್ತಿರಲಿಲ್ಲ. ಮೊದಲ ದಿನದ ಖಾರ ಅನುಭವದಿಂದ ಹೋಟೆಲ್‌ನವರ ಬಳಿ ಮನವಿ ಮಾಡಿಕೊಂಡು ಹೀಗಾಗಿ ಎರಡು ಕಪ್ ಅನ್ನ, ಎರಡು ಕಪ್ ಮೊಸರು, ಸ್ವಲ್ಪ ಉಪ್ಪು ಹಾಗೂ ಉಪ್ಪಿನಕಾಯಿ ಮಾತ್ರ ತೆಗೆದುಕೊಳ್ಳುತ್ತಿದ್ದರು. ಮುಂದೆ ಇದೇ ಬ್ಯಾಂಕ್ ಸ್ಪೆಷಲ್ ಊಟ ಎಂದು ಆ ಹೋಟೆಲ್‌ನಲ್ಲಿ ಫೇಮಸ್ ಆಯ್ತು. ಅದೇ ಶೀರ್ಷಿಕೆಯನ್ನು ಈ ಹಾಸ್ಯ ಸಂಕಲನಕ್ಕೆ ಇಟ್ಟಿದ್ದಾರೆ.ಇಲ್ಲಿ ಒಟ್ಟು 72 ಪ್ರಸಂಗಗಳಿವೆ. ಒಂದಕ್ಕಿಂತ ಒಂದು ಚೆನ್ನಾಗಿವೆ. ಓದಿದಾಗ ಮುಖದಲ್ಲಿ ನಗೆ ಮೂಡಿಸುತ್ತವೆ.
ಈ ಕೃತಿಯನ್ನು ಅನನ್ಯ ಪ್ರಕಾಶನ ಪ್ರಕಟಿಸಿದ್ದು, ಸುಬ್ರಹ್ಮಣ್ಯ ಬರ್ವೆ ಮುನ್ನುಡಿ, ತ್ರಿವಿಕ್ರಮ ಹೆಬ್ಬಾರ್ ಬೆನ್ನುಡಿ, ವ್ಯಂಗ್ಯ ಚಿತ್ರಕಾರ ಎನ್.ಆರ್. ಬೊಮ್ನಳ್ಳಿ ಅವರು ಸನ್ನಿವೇಶಕ್ಕೆ ತಕ್ಕ ಚಿತ್ರಗಳನ್ನು ಬರೆದಿದ್ದಾರೆ. ಆಸಕ್ತರು ಸಂಸ್ಕೃತಿ ಸುಬ್ರಹ್ಮಣ್ಯ, ಮೊ. 94480 37762 ಸಂಪರ್ಕಿಸಬಹುದು.ಮುಕ್ತಕ ಮಂಜರಿಅನಂತ ಎಮ್. ತಾಮ್ಹನ್ಕರ್ ‘ಮುಕ್ತಕ ಮಂಜರಿ’ ಎಂಬ ಮುಕ್ತಕಗಳ ಸಂಕಲನವನ್ನು ಸಹ ಹೊರತಂದಿದ್ದಾರೆ. ಇದರಲ್ಲಿ 660ಕ್ಕೂ ಹೆಚ್ಚು ಮುಕ್ತಕಗಳು ಅರ್ಥಸಹಿತ ಇವೆ.
ಸಿಂಹ ಪ್ರಾಸ, ಗಜ ಪ್ರಾಸ, ಹಯ ಪ್ರಾಸ, ಶರಭ ಪ್ರಾಸ, ವೃಷಭ ಪ್ರಾಸ, ಅಜ ಪ್ರಾಸಗಳಿವೆ.ಇದನ್ನು ಸಂಸ್ಕೃತಿ ಬುಕ್ ಏಜನ್ಸೀಸ್ ಪ್ರಕಟಿಸಿದೆ. ಕೆ.ಟಿ.ಶ್ರೀಮತಿ ಮುನ್ನುಡಿ, ಮಹೇಶಕುಮಾರ ಹನಕೆರೆ ಬೆನ್ನುಡಿ, ಶೋಭಾ ಭಟ್ಟ, ಪಿ.ಸಿ. ದಾಕ್ಷಾಯಿಣಿ, ಕೃಷ್ಣ ದತ್ತಾತ್ರೇಯ ಪದಕಿ, ಡಿ. ಹೃಷಿಕೇಶ ಹೆಬ್ಬಾರ್ ಆಶಯ ನುಡಿ ಬರೆದಿದ್ದಾರೆ. ಆಸಕ್ತರು ಅನಂತ ಎಮ್. ತಾಮನ್ಕರ್, ಮೊ. 94488 99321, ಸಂಸ್ಕೃತಿ ಬುಕ್ ಏಜೆನ್ಸೀಸ್, ಮೊ. 99459 66979