ಕೊಟ್ಟ ಸಾಲ ವಸೂಲಾಗದ್ದಕ್ಕೆ ಸೂರತ್‌ನಲ್ಲಿ 7 ಮಂದಿ ಆತ್ಮಹತ್ಯೆ

| Published : Oct 29 2023, 01:01 AM IST

ಸಾರಾಂಶ

ಕಾಶಿ ವಿಶ್ವನಾಥ ದೇಗುಲದಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷ ನಾಗೇಶ್‌ ಪಾಂಡೆ ತಿಳಿಸಿದ್ದಾರೆ
ವಿಷ ತಿಂದು ಆತ್ಮಹತ್ಯೆ ಮೃತರಲ್ಲಿ ಮೂವರು ಮಕ್ಕಳು ಸೂರತ್‌: ಕೊಟ್ಟಿದ್ದ ಸಾಲ ವಸೂಸಲಾಗಲಿಲ್ಲ ಎಂಬ ಕಾರಣದೆ ನೊಂದಿದ್ದ ಪೀಠೋಪಕರಣಗಳ ಮಾರಾಟಗಾರರ ಕುಟುಂಬವೊಂದರ 7 ಮಂದಿ ಆತ್ಮಹತ್ಯೆಗೆ ಶರಣಾದ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಸಾವಿಗೀಡಾದವರಲ್ಲಿ 3 ಮಂದಿ ಮಕ್ಕಳಾಗಿದ್ದು, 6 ಮಂದಿ ವಿಷ ಸೇವಿಸಿ ಹಾಗೂ ಓರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಕುಟುಂಬ ಹಣಕಾಸಿನ ಸಮಸ್ಯೆಗೆ ಸಿಲುಕಿದ್ದು, ನಮ್ಮಿಂದ ಹಣ ಪಡೆದುಕೊಂಡಿರುವವರು ಮರಳಿ ನೀಡಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್‌ನೋಟ್‌ ಬರೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಸೂರತ್‌ನ ಸಿದ್ದೇಶ್ವರ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಮನೆಯಿಂದ ವಾಸನೆ ಬರುತ್ತಿರುವುದಾಗಿ ನೆರೆಹೊರೆಯವರು ತಿಳಿಸಿದ ಬಳಿಕ ಪೊಲೀಸರು ಮನೆ ಬಾಗಿಲು ಮುರಿದು ಪರಿಶೀಲಿಸಿದಾಗ ಸಾಮೂಹಿಕ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಮನೆಯವರಿಗೆಲ್ಲಾ ವಿಷ ನೀಡಿದ ಬಳಿಕ ಮಹೇಶ್‌ ಸೋಲಂಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಮೃತರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ.