ಸಾರಾಂಶ
ಅಕ್ಷಯಪಾತ್ರ ಸಂಸ್ಥೆಯು 25ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಈಕುರಿತ ವಿವರ ಇಲ್ಲಿದೆ.
ಕನ್ನಡಪ್ರಭವಾರ್ತೆ
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸುತ್ತಿರುವ ಮಹತ್ವದ ಸಂಸ್ಥೆಯಾಗಿರುವ ಅಕ್ಷಯ ಪಾತ್ರ ಫೌಂಡೇಶನ್ ನವೆಂಬರ್ 11ರಂದು 25ನೇ ವಾರ್ಷಿಕೋತ್ಸವ ಸಂಭ್ರಮವನ್ನು ಆಚರಿಸಿಕೊಂಡಿದೆ. 2000ನೇ ಇಸವಿಯಲ್ಲಿ ಕೆಲವು ಸನ್ಯಾಸಿಗಳು ಮತ್ತು ವೃತ್ತಿಪರರು ಸೇರಿಕೊಂಡು ಯಾವುದೇ ಮಗು ಕೂಡ ಹಸಿವಿನ ಕಾರಣಕ್ಕೆ ಶಿಕ್ಷಣ ವಂಚಿತವಾಗಬಾರದು ಎಂಬ ಉದ್ದೇಶದಿಂದ ಈ ಮಹೋನ್ನತ ಕಾರ್ಯವನ್ನು ಆರಂಭಿಸಿದ್ದು, ಇದೀಗ ಅಕ್ಷಯ ಪಾತ್ರ ಸಂಸ್ಥೆಯು ಎನ್.ಜಿ.ಓ ನಡೆಸುವ ವಿಶ್ವದ ಅತಿದೊಡ್ಡ ಊಟದ ಯೋಜನೆ ಎಂಬ ಹೆಗ್ಗಳಿಕೆ ಗಳಿಸಿದೆ.ಅಕ್ಷಯ ಪಾತ್ರ ಬೆಂಗಳೂರಿನ 5 ಶಾಲೆಗಳ 1,500 ಮಕ್ಕಳಿಗೆ ಊಟ ಒದಗಿಸುವುದರ ಮೂಲಕ ಪ್ರಾರಂಭವಾಯಿತು. ಅದು ಈಗ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ 25,000 ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ದಿನಕ್ಕೆ 2.35 ಮಿಲಿಯನ್ ನಷ್ಟು ಮಧ್ಯಾಹ್ನದ ಊಟಗಳನ್ನು ಒದಗಿಸುವಷ್ಟು ಬೃಹತ್ತಾಗಿ ಬೆಳೆದಿದೆ. ಜೊತೆಗೆ ಸಂಸ್ಥೆಯು ದಿನಕ್ಕೆ 1 ಮಿಲಿಯನ್ ಬೆಳಗಿನ ಉಪಾಹಾರವನ್ನೂ ಒದಗಿಸುತ್ತಿದೆ. ಈ ಪ್ರಯತ್ನದ ಫಲವಾಗಿ ಕಳೆದ 25 ವರ್ಷಗಳಲ್ಲಿ ಸುಮಾರು 5 ಬಿಲಿಯನ್ ಊಟಗಳನ್ನು ವಿತರಿಸಲಾಗಿದೆ. ಅಕ್ಷಯ ಪಾತ್ರ ಫೌಂಡೇಶನ್ ಇದೀಗ ಭಾರತ ಸರ್ಕಾರದ ಮಧ್ಯಾಹ್ನದ ಊಟ ಯೋಜನೆಯ (ಈಗ ಪಿಎಂ ಪೋಷಣ್ ಯೋಜನೆ) ಪ್ರಮುಖ ಪಾಲುದಾರನಾಗಿದೆ. ಸರ್ಕಾರ ಶೇ.54ರಷ್ಟು ಸಂಪನ್ಮೂಲಗಳನ್ನು ಒದಗಿಸಿದರೆ, ಅಕ್ಷಯ ಪಾತ್ರ ಫೌಂಡೇಶನ್ ಸಮಾನ ಮೊತ್ತವನ್ನು ಸಂಗ್ರಹಿಸಿ ಊಟ ಒದಗಿಸುವ ಕಾರ್ಯವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದೆ. ಈ ಮೂಲಕ ಸರಕಾರದ ಜೊತೆಗೆ ಕೈಜೋಡಿಸಿಕೊಂಡು ಸಾಗುತ್ತಿದ್ದು, ಹೆಚ್ಚು ಮಕ್ಕಳಿಗೆ ಊಟ ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ.ಈ ಫೌಂಡೇಶನ್ ಅನ್ನು ಶ್ರೀ ಮಧು ಪಂಡಿತ ದಾಸ ಮತ್ತು ಶ್ರೀ ಚಂಚಲಪತಿ ದಾಸ (ಐ.ಐ.ಟಿ ಮತ್ತು ಐ.ಐ.ಎಸ್.ಸಿ ಪದವೀಧರರು) ಎಂಬ ಇಬ್ಬರು ಸನ್ಯಾಸಿಗಳು ಸ್ಥಾಪಿಸಿದ್ದು, ಈ ಸಂಸ್ಥೆಗೆ ಕಾರ್ಪೊರೇಟ್ ಶಿಸ್ತು ತಂದಿದ್ದಾರೆ. ಅದರಿಂದಾಗಿಯೇ ಯಶಸ್ವಿಯಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸುವುದು ಸಾಧ್ಯವಾಗಿದೆ.ವಿಶೇಷವೆಂದರೆ ಅಕ್ಷಯ ಪಾತ್ರ ಸಂಸ್ಥೆಯ ಮಾದರಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಜಾರಿಗೆ ಬಂದಿದೆ. ಕೀನ್ಯಾ, ಇಂಡೋನೇಷ್ಯಾ ಮತ್ತು ಶ್ರೀಲಂಕಾದ ಸಂಸ್ಥೆಗಳು ಅಕ್ಷಯ ಪಾತ್ರದ ಅಡುಗೆಮನೆ ವ್ಯವಸ್ಥೆ ಮತ್ತು ಸಾಗಾಣಿಕೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿವೆ. ಅಕ್ಷಯ ಪಾತ್ರ ಸಂಸ್ಥೆಯು 2030ರ ವೇಳೆಗೆ ದಿನಕ್ಕೆ 6 ಮಿಲಿಯನ್ ಊಟಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.ಅಕ್ಷಯ ಪಾತ್ರ ಸಂಸ್ಥೆಯ ವಿಶೇಷತೆಗಳು - ಕಸ್ಟಮೈಸ್ಡ್ ತಂತ್ರಜ್ಞಾನ: ಸಂಸ್ಥೆಯು ಅಮೃತಸರದ ಗೋಲ್ಡನ್ ಟೆಂಪಲ್ ಅಡುಗೆಮನೆಯಿಂದ ಸ್ಫೂರ್ತಿ ಪಡೆದು, ಪೀಟಾ ಬ್ರೆಡ್ ಮೇಕರ್ ಅನ್ನು ರೊಟ್ಟಿ ಮಾಡುವ ಯಂತ್ರವಾಗಿ ಪರಿವರ್ತಿಸಿದೆ. ಆ ಮೂಲಕ ಗಂಟೆಗೆ 10,000 ರೊಟ್ಟಿಗಳನ್ನು ಮಾಡುವ ಯಂತ್ರವನ್ನು ಆರಂಭದಲ್ಲಿ ಸ್ಥಾಪಿಸಲಾಗಿತ್ತು. ನಂತರ ಸಂಸ್ಥೆಯ ಎಂಜಿನಿಯರ್ ಗಳು ತಂತ್ರಜ್ಞಾನವನ್ನು ಸುಧಾರಿಸಿ ಗಂಟೆಗೆ 40,000 ಮತ್ತು 60,000 ರೊಟ್ಟಿಗಳನ್ನು ಮಾಡುವ ಮಾದರಿಗಳನ್ನು ರಚಿಸಿದ್ದಾರೆ. - ಉನ್ನತ ಮಟ್ಟದ ಬೆಂಬಲ: ಈ ಸಂಸ್ಥೆಗೆ ಎಪಿಜೆ ಅಬ್ದುಲ್ ಕಲಾಂ ಅವರು ವೈಯಕ್ತಿಕ ಚೆಕ್ ಬರೆದು ಶುಭ ಕೋರಿದ್ದರು. 2012ರಲ್ಲಿ ಶ್ರೀ ರತನ್ ಟಾಟಾ ಅವರು ಹುಬ್ಬಳ್ಳಿ ಅಡುಗೆಮನೆಗೆ ಭೇಟಿ ನೀಡಿ ಸೂಕ್ತ ಬೆಂಬಲ ನೀಡಿದ್ದರು. - ಆಡಳಿತ ಮತ್ತು ಜವಾಬ್ದಾರಿ: ಸಮರ್ಥ, ಪಾರದರ್ಶಕ ಮತ್ತು ತಂತ್ರಜ್ಞಾನ ಆಧರಿತ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆಯು ಇಂಡಿಯಾ ಇಂಕ್ ನ ಮೆಚ್ಚಿನ ಎನ್ ಜಿ ಓ ಆಗಿದೆ. 2020ರಲ್ಲಿ ಬಿಗ್ ಫೋರ್ ಕಂಪನಿ ನಡೆಸಿದ ಫೊರೆನ್ಸಿಕ್ ಆಡಿಟ್ ನಲ್ಲಿ ಯಾವುದೇ ಆರ್ಥಿಕ ಅಕ್ರಮ ಅಥವಾ ಹಣದ ದುರ್ಬಳಕೆ ನಡೆದಿಲ್ಲ ಎಂಬುದು ಸಾಬೀತಾಗಿದೆ.)
)
;Resize=(128,128))
;Resize=(128,128))
;Resize=(128,128))