ಅಮೆಜಾನ್ ಸಂಸ್ಥೆಯು ಸಣ್ಣ ಉದ್ಯಮಿಗಳಿಗೆ ₹1,000ಕ್ಕಿಂತ ಕಡಿಮೆ ಬೆಲೆಯ ಸುಮಾರು 12.5 ಕೋಟಿ ಉತ್ಪನ್ನಗಳ ಮಾರಾಟದ ಮೇಲೆ ಜೀರೋ ರೆಫರಲ್ ಶುಲ್ಕ ವಿಧಿಸಿದೆ. ಈ ಕುರಿತ ವಿವರ ಇಲ್ಲಿದೆ.
ಕನ್ನಡಪ್ರಭವಾರ್ತೆ ಬೆಂಗಳೂರು
ಸಾಮಾನ್ಯವಾಗಿ ಆನ್‌ಲೈನ್ ಮಾರಾಟದ ವೇಳೆ ವಿಧಿಸಲಾಗುವ ವಿವಿಧ ಶುಲ್ಕಗಳು ಸಣ್ಣ ಉದ್ಯಮಿಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದವು. ಇದೀಗ ಸಣ್ಣ ಉದ್ಯಮಿಗಳಿಗೆ ಆನ್ ಲೈನ್ ಮಾರುಕಟ್ಟೆಯಲ್ಲಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಮೆಜಾನ್ ಇಂಡಿಯಾ ಮಹತ್ವದ ನಿರ್ಧಾರ ಕೈಗೊಂಡಿದೆ. ₹1,000ಕ್ಕಿಂತ ಕಡಿಮೆ ಬೆಲೆಯ ಸುಮಾರು 12.5 ಕೋಟಿ ಉತ್ಪನ್ನಗಳ ಮಾರಾಟದ ಮೇಲೆ ‘ಜೀರೋ ರೆಫರಲ್ ಶುಲ್ಕ’ವನ್ನು ವಿಧಿಸುತ್ತಿದೆ. ಈ ಬದಲಾವಣೆಯು ಸಣ್ಣ ವ್ಯಾಪಾರಿಗಳ ಲಾಭಾಂಶವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈಗ ಶುಲ್ಕ ಕಡಿತವಾಗಿರುವುದರಿಂದ, ಮಾರಾಟಗಾರರು ಗ್ರಾಹಕರಿಗೆ ಇನ್ನೂ ಕಡಿಮೆ ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಪನ್ನಗಳನ್ನು ನೀಡಲು ಸಾಧ್ಯವಾಗುತ್ತದೆ. ಮಾರ್ಚ್ 16ರಿಂದ ಜಾರಿಗೆ ಬಂದಿರುವ ಈ ನೂತನ ಯೋಜನೆಯು 1,800ಕ್ಕೂ ಹೆಚ್ಚು ವಿಭಾಗಗಳ ಉತ್ಪನ್ನಗಳಿಗೆ ಅನ್ವಯವಾಗಲಿದೆ. ಇದರೊಂದಿಗೆ ₹300ಕ್ಕಿಂತ ಕಡಿಮೆ ಬೆಲೆಯ ವಸ್ತುಗಳ ''ಈಸಿ ಶಿಪ್'' ಸಾಗಾಣಿಕೆ ಶುಲ್ಕವನ್ನು ಶೇ. 20ಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ. ಈ ಎರಡೂ ಸೌಲಭ್ಯಗಳಿಂದಾಗಿ ಮಾರಾಟಗಾರರು ತಮ್ಮ ಒಟ್ಟು ಮಾರಾಟದ ವೆಚ್ಚದಲ್ಲಿ ಶೇ. 70ರಷ್ಟು ಉಳಿತಾಯ ಮಾಡಲು ಸಾಧ್ಯವಾಗಲಿದೆ.ಶೂನ್ಯ ರೆಫರಲ್ ಶುಲ್ಕವು ಸಣ್ಣ ಉದ್ಯಮಗಳು ಆನ್ ಲೈನ್ ನಲ್ಲಿ ಬೆಳೆಯಲು ಸಹಾಯ ಮಾಡುವ ಏಳು ಮಾರ್ಗಗಳು ಹೀಗಿವೆ:1. ದಿನನಿತ್ಯದ ಉತ್ಪನ್ನಗಳಿಗೆ ಉತ್ತಮ ಬೆಲೆ ನಿಗದಿಇದು ವಿಶೇಷವಾಗಿ ₹1,000 ಕ್ಕಿಂತ ಕಡಿಮೆ ಬೆಲೆಯ ಉತ್ಪನ್ನಗಳಿಗೆ ಬಹಳ ಮುಖ್ಯವಾಗಿದೆ. ಉಡುಪುಗಳು, ಮನೆಯ ಅಗತ್ಯ ವಸ್ತುಗಳು, ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳು, ಆಟಿಕೆಗಳು ಮತ್ತು ಅಡುಗೆಮನೆಯ ಪರಿಕರಗಳಂತಹ ದಿನನಿತ್ಯದ ವಸ್ತುಗಳನ್ನು ಗ್ರಾಹಕರು ಈಗ ಉತ್ತಮ ಬೆಲೆಯಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.2. ಉತ್ಪನ್ನಗಳ ಪಟ್ಟಿಯನ್ನು ಹೆಚ್ಚಿಸಲು ಉತ್ತಮ ಅವಕಾಶಮಾರಾಟದ ವೆಚ್ಚಗಳು ಹೆಚ್ಚು ಇದ್ದಿದ್ದರಿಂದ ಅನಿವಾರ್ಯವಾಗಿ ಸಣ್ಣ ಉದ್ಯಮಗಳು ಆನ್ ಲೈನ್ ನಲ್ಲಿ ಕಡಿಮೆ ಉತ್ಪನ್ನಗಳನ್ನು ಪಟ್ಟಿ ಮಾಡುತ್ತಿದ್ದವು. ಅನೇಕ ಮಾರಾಟಗಾರರು ಕೇವಲ ಬೆರಳೆಣಿಕೆಯಷ್ಟು ಉತ್ಪನ್ನಗಳೊಂದಿಗೆ ವ್ಯವಹಾರ ಪ್ರಾರಂಭಿಸುತ್ತಿದ್ದರು. ಈಗ ಕಡಿಮೆ ಶುಲ್ಕವಿರುವುದರಿಂದ ವ್ಯಾಪಾರ ವಿಸ್ತರಣೆ ಮಾಡುವುದು ಸುಲಭವಾಗಲಿದೆ. ಮಾರಾಟಗಾರರು ಟಿ-ಶರ್ಟ್ ಮತ್ತು ಇಯರ್‌ಫೋನ್‌ಗಳಿಂದ ಹಿಡಿದು ಸೀರೆಗಳು, ಬೆಡ್ ಶೀಟ್‌ಗಳು, ಆಟಿಕೆಗಳು ಮತ್ತು ಅಡುಗೆಮನೆಯ ಉಪಕರಣಗಳವರೆಗೆ ವಿವಿಧ ವಸ್ತುಗಳನ್ನು ಪಟ್ಟಿ ಮಾಡಬಹುದು. ಅನೇಕ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳ ಶ್ರೇಣಿಯನ್ನು ಹೆಚ್ಚಿಸಲು ಇದು ಪೂರಕವಾದ ಮುಂದಿನ ಹೆಜ್ಜೆಯಾಗಿದೆ.3. ಪ್ರತಿ ಯೂನಿಟ್ ಮಾರಾಟದ ಮೇಲೆ ಉತ್ತಮ ಗಳಿಕೆಸಣ್ಣ ಮಾರಾಟಗಾರರಿಗೆ, ಮಾರಾಟವಾಗುವ ಪ್ರತಿಯೊಂದು ವಸ್ತುವೂ ಮುಖ್ಯವಾಗಿರುತ್ತದೆ. ತಿಂಗಳಿಗೆ ನೂರಾರು ಅಥವಾ ಸಾವಿರಾರು ಆರ್ಡರ್ ಗಳು ಬಂದಾಗ ಪ್ರತಿಯೊಂದು ಉತ್ಪನ್ನದ ಮೇಲಾಗುವ ಸಣ್ಣ ಉಳಿತಾಯವೂ ದೊಡ್ಡ ಮೊತ್ತವಾಗಿ ಒಟ್ಟಾಗುತ್ತದೆ. ಕಡಿಮೆ ರೆಫರಲ್ ಶುಲ್ಕ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು ವೈಯಕ್ತಿಕ ಉತ್ಪನ್ನಗಳ ಮೇಲಿನ ಉಳಿತಾಯವನ್ನು ಹೆಚ್ಚಿಸುತ್ತವೆ. ಉದಾಹರಣೆಗೆ, ‘ಫುಲ್‌ಫಿಲ್ಡ್ ಬೈ ಅಮೆಜಾನ್’ (ಎಫ್ ಬಿ ಎ) ಮೂಲಕ ಮಾರಾಟವಾಗುವ ₹798 ಬೆಲೆಯ ಇಯರ್ ಫೋನ್ ಗಳ ಮೇಲೆ ಮಾರಾಟಗಾರರು ಈಗ ಪ್ರತಿ ಯೂನಿಟ್ ಗೆ ₹139 ಉಳಿಸಬಹುದು. ಈ ಮೂಲಕ ಶುಲ್ಕದಲ್ಲಿ ಶೇ. 56ರಷ್ಟು ಕಡಿತ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುವ ಉದ್ಯಮಗಳಿಗೆ, ಇದರಿಂದ ಮಾಸಿಕ ಗಮನಾರ್ಹ ಉಳಿತಾಯಕ್ಕೆ ದಾರಿ ಮಾಡಿಕೊಡಬಹುದು.4. ಶೀಘ್ರ ದಾಸ್ತಾನು ಖಾಲಿಯಾಗುವಿಕೆ ಸ್ಪರ್ಧಾತ್ಮಕ ಬೆಲೆಗಳಿಂದ ಗ್ರಾಹಕರಿಗೆ ಲಾಭ ದೊರಕುವುದು ಮಾತ್ರವಲ್ಲದೆ, ಮಾರಾಟಗಾರರ ಮಾರಾಟ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಉತ್ಪನ್ನಗಳು ವೇಗವಾಗಿ ಮಾರಾಟವಾದಾಗ, ದಾಸ್ತಾನುಗಳು ಬೇಗನೆ ಖಾಲಿಯಾಗುತ್ತವೆ ಮತ್ತು ಮಾರಾಟವಾಗದ ಸ್ಟಾಕ್ ಗಳಲ್ಲಿ ಸಿಲುಕಿಕೊಳ್ಳುವ ಬಂಡವಾಳದ ಪ್ರಮಾಣ ಕಡಿಮೆಯಾಗುತ್ತದೆ. ಒಂದೇ ಪ್ಯಾಕೇಜ್ ನಲ್ಲಿ ಹೆಚ್ಚಿನ ವಸ್ತುಗಳನ್ನು ಕಳುಹಿಸುವ ಪ್ರೋತ್ಸಾಹಕ ಕ್ರಮಗಳು ಈ ವೇಗವನ್ನು ಮತ್ತಷ್ಟು ಹೆಚ್ಚಿಸಬಹುದು. ಮಾರಾಟಗಾರರು ಒಂದೇ ಬಾಕ್ಸ್ ನಲ್ಲಿ ಒಂದಕ್ಕಿಂತ ಹೆಚ್ಚು ವಸ್ತುಗಳನ್ನು ಕಳುಹಿಸಿದಾಗ, ಎರಡನೇ ವಸ್ತುವಿನಿಂದ ಮುಂದಕ್ಕೆ ಮಾರಾಟದ ಶುಲ್ಕದಲ್ಲಿ ಶೇಕಡಾ 90 ರಷ್ಟು ಉಳಿತಾಯ ಮಾಡುವ ಸಾಧ್ಯತೆ ಇರುತ್ತದೆ.5. ಭಾರತದಾದ್ಯಂತ ಗ್ರಾಹಕರನ್ನು ತಲುಪಲು ಸುಲಭ ಹಾದಿಇ- ಕಾಮರ್ಸ್‌ನ ಅತಿದೊಡ್ಡ ಪ್ರಯೋಜನವೆಂದರೆ ದೇಶಾದ್ಯಂತ ಇರುವ ಗ್ರಾಹಕರನ್ನು ತಲುಪುವ ಸಾಮರ್ಥ್ಯ. ‘ಈಸಿ ಶಿಪ್’ ನಂತಹ ಯೋಜನೆಗಳು ಮಾರಾಟಗಾರರು ತಮ್ಮ ಸ್ವಂತ ಸ್ಥಳದಿಂದಲೇ ವ್ಯಾಪಾರ ಮಾಡಲು ಮತ್ತು ದೇಶದಾದ್ಯಂತದ ಗ್ರಾಹಕರನ್ನು ಸುಲಭವಾಗಿ ತಲುಪಲು ಅನುವು ಮಾಡಿಕೊಡುತ್ತವೆ. ಏಕೆಂದರೆ ಅಮೆಜಾನ್ ಉತ್ಪನ್ನಗಳ ಪಿಕಪ್ ಮತ್ತು ವಿತರಣೆಯನ್ನು ಸೊಗಸಾಗಿ ನಿರ್ವಹಿಸುತ್ತದೆ. ಈಗ ₹300 ಕ್ಕಿಂತ ಕಡಿಮೆ ಬೆಲೆಯ ಉತ್ಪನ್ನಗಳಿಗೆ ಈಸಿ ಶಿಪ್ ಶುಲ್ಕವನ್ನು ಶೇಕಡ 20 ಕ್ಕಿಂತ ಹೆಚ್ಚು ಕಡಿತಗೊಳಿಸಿರುವುದರಿಂದ, ಸಾಗಾಣಿಕೆ ವೆಚ್ಚವು ಇನ್ನಷ್ಟು ಕಡಿಮೆಯಾಗಿದೆ. ಇದು ಹೆಚ್ಚಿನ ಉದ್ಯಮಗಳಿಗೆ - ವಿಶೇಷವಾಗಿ ಎರಡನೇ ಮತ್ತು ಮೂರನೇ ಹಂತದ ನಗರಗಳ ವ್ಯಾಪಾರಿಗಳಿಗೆ ಭಾರತದಾದ್ಯಂತ ಗ್ರಾಹಕರನ್ನು ಸುಲಭವಾಗಿ ತಲುಪಲು ಸಹಾಯ ಮಾಡುತ್ತದೆ.6. ಹೊಸ ಮಾರಾಟಗಾರರಿಗೆ ಕಡಿಮೆ ಅಡೆತಡೆಗಳುಆನ್ ಲೈನ್ ವ್ಯವಹಾರವನ್ನು ಪ್ರಾರಂಭಿಸುವುದು ಒಂದು ದೊಡ್ಡ ಸಾಹಸದಂತೆ ಎನಿಸಬಹುದು, ವಿಶೇಷವಾಗಿ ಸೀಮಿತ ಬಂಡವಾಳ ಹೊಂದಿರುವ ಮೊದಲ ಬಾರಿಯ ಉದ್ಯಮಿಗಳಿಗೆ ಇದು ಸವಾಲಿನ ಕೆಲಸವೇ. ಆದರೆ ₹1,000 ವರೆಗಿನ 12.5 ಕೋಟಿಗೂ ಹೆಚ್ಚು ಉತ್ಪನ್ನಗಳಿಗೆ ಶೂನ್ಯ ರೆಫರಲ್ ಶುಲ್ಕವನ್ನು ವಿಧಿಸುತ್ತಿರುವುದು, ಆನ್ ಲೈನ್ ನಲ್ಲಿ ಉತ್ಪನ್ನಗಳನ್ನು ಪಟ್ಟಿ ಮಾಡುವ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದು ಕುಶಲಕರ್ಮಿಗಳು, ಸಣ್ಣ ತಯಾರಕರು ಮತ್ತು ಪ್ರಾದೇಶಿಕ ಬ್ರ್ಯಾಂಡ್ ಗಳು ಸೇರಿದಂತೆ ಹೊಸ ಮಾರಾಟಗಾರರಿಗೆ ಆನ್ ಲೈನ್ ಮಾರಾಟವನ್ನು ಪ್ರಯತ್ನಿಸಲು ಸುಲಭ ಮಾಡಿಕೊಡುತ್ತದೆ. ಇದು ಹೆಚ್ಚಿನ ಸಂಖ್ಯೆಯ ಉದ್ಯಮಿಗಳಿಗೆ ಇ- ಕಾಮರ್ಸ್ ಅನ್ನು ತಮ್ಮ ಬೆಳವಣಿಗೆಯ ದಾರಿಯಾಗಿ ಕಂಡುಕೊಳ್ಳಲು ನೆರವು ಒದಗಿಸುತ್ತದೆ.7. ವ್ಯವಹಾರದಲ್ಲಿ ಮರುಹೂಡಿಕೆ ಮಾಡಲು ಹೆಚ್ಚಿನ ಅವಕಾಶಕಡಿಮೆ ರೆಫರಲ್ ಶುಲ್ಕಗಳು ಹೆಚ್ಚಿನ ಉಳಿತಾಯಕ್ಕೆ ಕಾರಣವಾಗಬಹುದು ಮತ್ತು ಇದು ಮಾರಾಟಗಾರರು ತಮ್ಮ ಸ್ವಂತ ಬೆಳವಣಿಗೆಯ ಮೇಲೆ ಮರುಹೂಡಿಕೆ ಮಾಡಲು ಶಕ್ತಿ ನೀಡುತ್ತದೆ. ಅನೇಕರು ಈ ಉಳಿತಾಯವನ್ನು ಪ್ಯಾಕೇಜಿಂಗ್ ಸುಧಾರಿಸಲು, ಜಾಹೀರಾತು ಅಭಿಯಾನಗಳನ್ನು ನಡೆಸಲು, ತಮ್ಮ ಉತ್ಪನ್ನ ಶ್ರೇಣಿಯನ್ನು ಹೆಚ್ಚಿಸಲು ಅಥವಾ ಹೆಚ್ಚಿನ ದಾಸ್ತಾನು ಇಟ್ಟುಕೊಳ್ಳಲು ಬಳಸುತ್ತಾರೆ. ಕಳೆದ ವರ್ಷದ ಶುಲ್ಕ ಕಡಿತದಿಂದ ಆರ್ಥಿಕ ಲಾಭಗಳು ಹೆಚ್ಚಿದಾಗ, ಮಾರಾಟಗಾರರು ತಮ್ಮ ಬೆಳವಣಿಗೆಗೆ ಹೆಚ್ಚು ಆತ್ಮವಿಶ್ವಾಸದಿಂದ ಮತ್ತಷ್ಟು ಹೂಡಿಕೆ ಮಾಡುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದೆ.