ಭ್ರಷ್ಟಾಚಾರ ವಿರೋಧಿಸಿ ಅರಿವು ಸಪ್ತಾಹ ಕಾರ್ಯಕ್ರಮ
KannadaprabhaNewsNetwork | Published : Nov 04 2023, 12:32 AM IST
ಭ್ರಷ್ಟಾಚಾರ ವಿರೋಧಿಸಿ ಅರಿವು ಸಪ್ತಾಹ ಕಾರ್ಯಕ್ರಮ
ಸಾರಾಂಶ
ಬ್ಯಾಂಕ್ ಆಫ್ ಬರೋಡ ಭಾರತೀನಗರ ಶಾಖೆ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ಬ್ಯಾಂಕ್ ಆಫ್ ಬರೋಡ ಜಾಗೃತಿ ಇಲಾಖೆ ಮುಖ್ಯ ವ್ಯವಸ್ಥಾಪಕ ಪ್ರಹ್ಲಾದ್ ಕುಮಾರ್ ಗುಪ್ತ ಚಾಲನೆ ನೀಡಿ ಮಾತನಾಡಿ, ಬ್ಯಾಂಕಿನಲ್ಲಿ ಸಾಲ ಪಡೆದವರು ಸಕಾಲಕ್ಕೆ ಹಣ ಪಾವತಿಸಿದರೆ ಬ್ಯಾಂಕುಗಳು ಸಹ ಅಭಿವೃದ್ದಿ ಕಾಣುವ ಜೊತೆಗೆ ಗ್ರಾಹಕರಿಗೂ ಅನುಕೂಲವಾಗಲಿದೆ ಎಂದರು.
ಪ್ರಹ್ಲಾದ್ ಕುಮಾರ್ ಗುಪ್ತ ಚಾಲನೆ ಕನ್ನಡಪ್ರಭ ವಾರ್ತೆ ಭಾರತೀನಗರ ಕೆ.ಶೆಟ್ಟಹಳ್ಳಿಯಲ್ಲಿ ಭ್ರಷ್ಟಾಚಾರ ವಿರೋಧಿಸಿ ರಾಷ್ಟ್ರಕ್ಕೆ ಬದ್ಧರಾಗುವಂತೆ ಅರಿವು ಸಪ್ತಾಹ ನಡೆಯಿತು. ಬ್ಯಾಂಕ್ ಆಫ್ ಬರೋಡ ಭಾರತೀನಗರ ಶಾಖೆ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ಬ್ಯಾಂಕ್ ಆಫ್ ಬರೋಡ ಜಾಗೃತಿ ಇಲಾಖೆ ಮುಖ್ಯ ವ್ಯವಸ್ಥಾಪಕ ಪ್ರಹ್ಲಾದ್ ಕುಮಾರ್ ಗುಪ್ತ ಚಾಲನೆ ನೀಡಿ ಮಾತನಾಡಿ, ಬ್ಯಾಂಕಿನಲ್ಲಿ ಸಾಲ ಪಡೆದವರು ಸಕಾಲಕ್ಕೆ ಹಣ ಪಾವತಿಸಿದರೆ ಬ್ಯಾಂಕುಗಳು ಸಹ ಅಭಿವೃದ್ದಿ ಕಾಣುವ ಜೊತೆಗೆ ಗ್ರಾಹಕರಿಗೂ ಅನುಕೂಲವಾಗಲಿದೆ ಎಂದರು. ಇದೇ ವೇಳೆ ಬ್ಯಾಂಕಿನಲ್ಲಿ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡಿದಂತಹ ಮಹಿಳಾ ಗುಂಪುಗಳನ್ನು ಗುರುತಿಸಿ ಸನ್ಮಾನಿಸಿ ಅಭಿನಂದನಾ ಪತ್ರ ವಿತರಣೆ ಮಾಡಿದರು. ನಂತರ ಗ್ರಾಮದಲ್ಲಿ ಬ್ಯಾಂಕ್ ಸೌಲಭ್ಯಗಳ ಬಗ್ಗೆ ಮತ್ತು ಮರುಪಾವತಿ ಬಗ್ಗೆ ಜಾಗೃತಿ ಜಾಥಾ ನಡೆಸಿದರು. ಬ್ಯಾಂಕ್ ಬರೋಡ ಭಾರತೀನಗರ ಶಾಖೆ ಹಿರಿಯ ವ್ಯವಸ್ಥಾಪಕ ಉದಯ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ವರುಣ್, ಹಿರಿಯ ವ್ಯವಸ್ಥಾಪಕ ಸಂತೋಷ್‌ಕುಮಾರ್, ಬೆಂಗಳೂರು ವಲಯದ ಹಿರಿಯ ವ್ಯವಸ್ಥಾಪಕ ನಾಗೇಶ್‌ಕುಮಾರ್, ಅಭಿಷೇಕ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಪೂರ್ಣಿಮಾಕೃಷ್ಣ, ಸದಸ್ಯರಾದ ತಮ್ಮೇಗೌಡ, ಶಿವಲಿಂಗಯ್ಯ, ಕಾರ್ಯದರ್ಶಿ ಯಮುನ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕರಡಕೆರೆ ವಸಂತ, ಖಜಾಂಚಿ ಶೋಭಾ, ಕಾರ್ಯದರ್ಶಿ ಪದ್ಮಾರಾಮಣ್ಣ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಪದ್ಮಶ್ರೀನಿವಾಸ್, ಸಮೂಹ ಮೇಲ್ವಿಚಾಕ ಅಮೃತ್, ರಾಮಚಂದ್ರೇಗೌಡ, ಅನನ್ಯ ಸಂಸ್ಥೆಯ ಅಧ್ಯಕ್ಷೆ ಅನುಪಮ, ಮುಖಂಡ ಶಿವರಾಜು ಸೇರಿದಂತೆ ಹಲವರಿದ್ದರು. ---------- 3ಕೆಎಂಎನ್ ಡಿ14 ಭ್ರಷ್ಟಾಚಾರ ವಿರೋಧಿಸಿ ಅರಿವು ಸಪ್ತಾಹಕ್ಕೆ ಪ್ರಹ್ಲಾದ್ ಕುಮಾರ್ ಗುಪ್ತ ಚಾಲನೆ ನೀಡಿದರು.