ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿವಿ ಮತ್ತು ಚೀನಾದ ಸಿಂಘುವಾ ಬರ್ಕ್ಲಿ- ಶೆನ್ಜೆನ್ ಸಂಸ್ಥೆಯು ಕ್ಯಾನ್ಸರ್ ಔಷಧ ಕ್ರಿಜೊಟಿನಿಬ್ ಸಂಯೋಜನೆಯೊಂದಿಗೆ ಹೊಸ ಕೀಮೋ ಆವಿಷ್ಕಾರಿಸಿದ್ದು, ಮಹಿಳೆಯರಲ್ಲಿನ ಸ್ತನ- ಕ್ಯಾನ್ಸರ್ ಗುಣಪಡಿಸುವಲ್ಲಿ ಒಂದು ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಪ್ರೊ.ಪೀ. ಲೋಬಿ, ಡಾ. ಬಸಪ್ಪ, ಡಾ.ವಿ.ಪಾಂಡೆ ಅವರ ತಂಡವು ತುಂಬಾ ಆಕ್ರಮಣಕಾರಿಯಾದ ಹಾಗೂ ಈಸ್ಟ್ರೋಜಿನ್, ಪ್ರೊಜೆಸ್ಟರಾನ್ ಮತ್ತು ಹೆರ್ 2 ಹಾರ್ಮೋನ್ ರಹಿತ ಸ್ತನ- ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಅನ್ವೇಷಣೆಯಲ್ಲಿ ಅದ್ಭುತ ಆವಿಷ್ಕಾರವನ್ನು ಪರಿಚಯಿಸಿದ್ದಾರೆ. ಪ್ರಸ್ತುತ ಇವರು ಕೃತಕ ಬುದ್ಧಿಮತ್ತೆ ಉಪಯೋಗಿಸಿ ನೂರಾರು ಸ್ತನ- ಕ್ಯಾನ್ಸರ್ ಗುಣಪಡಿಸುವ ಔಷಧಗಳನ್ನು ಎನ್.ಸಿ.ಕೆ ಜೊತೆ ಪರೀಕ್ಷಿಸಿ, ಒಂದು ಉತ್ತಮ ಸಂಯೋಜನೆಯಾದ ಕ್ರಿಜೊಟಿನಿಬ್ಜೊತೆಗೆ ಸಾಟಿಯಿಲ್ಲದ ಪರಿಣಾಮಕಾರಿತ್ವದೊಂದಿಗೆ ಮೊದಲ ಬಾರಿಗೆ ಔಷಧ ವಿಜ್ಞಾನ ಕ್ಷೇತ್ರಕ್ಕೆ ನೀಡಿದೆ.
ಈ ಅನ್ವೇಷಣೆಯ ಆರ್.ಟಿ.ಕೆ ಎಂಬ ರಿಸೆಪ್ಟರ್ ನಂತಹ ಸಾಮಾನ್ಯ ಕ್ಯಾನ್ಸರ್ ಉಂಟುಮಾಡುವ ಮಾರ್ಗಗಳನ್ನು ಅಡ್ಡಿಪಡಿಸುವುದು ಮತ್ತು ಕ್ಯಾನ್ಸರ್ ಕಾರಕ ಬಿಎಡಿ ಜೀನ್ ಅನ್ನು ಮಾರ್ಪಾಡು ಮಾಡುತ್ತದೆ. ಸಮಗ್ರ ಅಧ್ಯಯನವು ಎನ್.ಸಿ.ಕೆಯ ಸಾಮರ್ಥ್ಯವನ್ನು ಬಿಚ್ಚಿಡುತ್ತದೆ, ಟಿ.ಎನ್.ಬಿ.ಸಿ ಚಿಕಿತ್ಸೆಯ ಸವಾಲಿನ ಭೂ ದೃಶ್ಯದಲ್ಲಿ ಭರವಸೆಯ ದಾರಿ ದೀಪ ನೀಡುತ್ತದೆ.
ಮೂರು ರಿಸೆಪ್ಟರ್ ಗಳ ಕೊರತೆಯಿಂದಾಗಿ ಎನ್.ಟಿ.ಬಿ.ಸಿ ಈ ಜಗತ್ತಿನ ಭೀಕರ ಕ್ಯಾನ್ಸರ್. ಇದಕ್ಕೆ ಕೀಮೋಥೆರಪಿ ಒಂದೇ ವ್ಯವಸ್ಥಿತ ಚಿಕಿತ್ಸೆ. ನಮ್ಮ ಸಂಶೋಧನೆಯು ಎನ್.ಸಿ.ಕೆ ಮತ್ತು ಕ್ರಿಜೊಟಿನಿಬ್ ಸಂಯೋಜನೆಯ ಕಾರ್ಯವಿಧಾನದ ಬಗ್ಗೆ ವಿವರವಾದ ತಿಳುವಳಿಕೆ ನೀಡುವ ಉದ್ದೇಶ ಹೊಂದಿದೆ. ಕ್ಯಾನ್ಸರ್ ಕಾರಕ ಪ್ರೊಟೀನ್ ಗಳಾದ ಪಿ13ಕೆ, ಎಕೆಟಿ, ಎಂಎಪಿಕೆ ಮತ್ತು ಆರ್.ಟಿ.ಕೆಗಳು ಟಿ.ಎನ್.ಬಿ.ಸಿಯಲ್ಲಿ ವ್ಯತಿರಿಕ್ತವಾಗಿರುತ್ತದೆ.
ಆದ್ದರಿಂದ ಬ್ಯಾಡ್ಜೀನ್ ನನ್ನ ನಿಯಂತ್ರಣಗೊಳಿಸಲು ಎನ್.ಸಿ.ಕೆ ಔಷಧ ಬೀಜವನ್ನು ಕ್ರಿಜೊಟಿನಿಬ್ ಜೊತೆ ಸೇರಿಸಿ ಕಾಂಬಿನೇಷನ್ ಥೆರಪಿಯನ್ನು ಅಭಿವೃದ್ಧಿಪಡಿಸಿ ಯಶಸ್ವಿಯಾಗಿದ್ದೇವೆ.
ಈ ಅತ್ಯುತ್ತಮ ಸಂಶೋಧನೆಯು ನೇಚರ್ ಪ್ರಿಸಿಶನ್ ಆಂಕೊಲಾಜಿ ಜರ್ನಲ್ ನಲ್ಲಿ ರಿಸೆಪ್ಟರ್ ಟೈರೋಸಿನ್ಕೈನೇಸ್ಗಳ ಎಂಬ ಎಂಬ ಮಾರ್ಗ ಪ್ರತಿಬಂಧ ಮತ್ತು ಟ್ರಿಪಲ್ ನೆಗಟಿವ್ ಸ್ತನ ಕ್ಯಾನ್ಸರ್ ನಲ್ಲಿ ಸಿನರ್ಜಿಸ್ಟಿಕ್ ಎಪಿಕಸಿಯೊಂದಿಗೆ ಬಿಎಡಿ ಶೀರ್ಷಿಕೆಯಡಿ ಪ್ರಕಟಿಸಲಾಗಿದೆ. ಈ ಸಂಶೋಧನೆಗೆ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಧನ ಸಹಾಯ ನೀಡಿದೆ ಎಂದು ಪ್ರೊ.ಬಸಪ್ಪ ತಿಳಿಸಿದ್ದಾರೆ.