ಬಸ್‌ ದರ ಶೇ.15 ರಷ್ಟು ಹೆಚ್ಚಿಸಿ ದ ರಾಜ್ಯ ಸರ್ಕಾರ : ರೈಲಿಗಿಂತ 3 ಪಟ್ಟು ದುಬಾರಿ

| Published : Jan 06 2025, 02:00 AM IST / Updated: Jan 06 2025, 11:00 AM IST

ಸಾರಾಂಶ

ರಾಜ್ಯ ಸರ್ಕಾರ ಬಸ್‌ ದರವನ್ನು ಶೇ.15 ರಷ್ಟು ಹೆಚ್ಚಿಸಿರುವುದು ಶ್ರೀಸಾಮಾನ್ಯರ ಜೇಬಿಗೆ ದುಬಾರಿಯಾಗಿ ಪರಿಣಮಿಸಿದೆ. ರೈಲು ಪ್ರಯಾಣ ದರಕ್ಕೆ ಹೋಲಿಸಿದರೆ ಪರಿಷ್ಕೃತ ಬಸ್‌ ಪ್ರಯಾಣ ದರ ಸುಮಾರು ಮೂರು ಪಟ್ಟು ಹೆಚ್ಚಾದಂತಾಗಿದೆ. ರೈಲು ಪ್ರಯಾಣವೇ ಸುಖಕರ ಎನ್ನುವಂತಾಗಿದೆ.

 ಬೆಂಗಳೂರು : ರಾಜ್ಯ ಸರ್ಕಾರ ಬಸ್‌ ದರವನ್ನು ಶೇ.15 ರಷ್ಟು ಹೆಚ್ಚಿಸಿರುವುದು ಶ್ರೀಸಾಮಾನ್ಯರ ಜೇಬಿಗೆ ದುಬಾರಿಯಾಗಿ ಪರಿಣಮಿಸಿದೆ. ರೈಲು ಪ್ರಯಾಣ ದರಕ್ಕೆ ಹೋಲಿಸಿದರೆ ಪರಿಷ್ಕೃತ ಬಸ್‌ ಪ್ರಯಾಣ ದರ ಸುಮಾರು ಮೂರು ಪಟ್ಟು ಹೆಚ್ಚಾದಂತಾಗಿದೆ. ರೈಲು ಪ್ರಯಾಣವೇ ಸುಖಕರ ಎನ್ನುವಂತಾಗಿದೆ.

ರೈಲು ಸೌಲಭ್ಯ ಇರುವೆಡೆ ಸಾಮಾನ್ಯ ಜನ ಪ್ರಯಾಣಕ್ಕೆ ಕಡಿಮೆ ದೂರದ ರೈಲುಗಳನ್ನೇ ಆಶ್ರಯಿಸಿದ್ದಾರೆ. ಅದರಲ್ಲೂ ಪ್ಯಾಸೆಂಜರ್‌ ಅಥವಾ ಆರ್ಡಿನರಿ ರೈಲುಗಳ ಮೂಲಕವೇ ಪ್ರಯಾಣಿಸುವವರ ಸಂಖ್ಯೆ ಹೆಚ್ಚು. ತುರ್ತು ಸಂದರ್ಭ ಬಂದರೆ ಮಾತ್ರ ಬಸ್‌ ಪ್ರಯಾಣಕ್ಕೆ ಮುಂದಾಗುವುದು ಸಾಮಾನ್ಯವಾಗಿದೆ. ಹೀಗಿರುವಾಗ ಸರ್ಕಾರ ಈಗ ಶೇ.15 ರಷ್ಟು ಪ್ರಯಾಣ ದರ ಹೆಚ್ಚಿಸಿರುವುದು ಸಾಮಾನ್ಯ ಜನರಿಗೆ ತುಸು ಹೊರೆ ಎನ್ನಬಹುದು. ರೈಲಿನ ಪ್ರಯಾಣ ದರಕ್ಕೆ ಹೋಲಿಸಿದರೆ ದುಪ್ಪಟ್ಟು ಇಲ್ಲವೇ ಮೂರು ಪಟ್ಟು ದರ ಕೊಡಬೇಕಾದ ಸ್ಥಿತಿ ಇದೆ.

ಉದಾಹರಣೆಗೆ ಬೆಂಗಳೂರಿನಿಂದ ತುಮಕೂರಿಗೆ ಸಾಮಾನ್ಯ ಬಸ್‌ ಪ್ರಯಾಣ ದರ ಈ ಹಿಂದೆ 80 ರು. ಇತ್ತು. ಇದೀಗ 91 ರು.ಗೆ ಏರಿಕೆಯಾಗಿದೆ. ಅದೇ ರೀತಿ ಬೆಂಗಳೂರಿನಿಂದ ಮೈಸೂರಿಗೆ ಈ ಹಿಂದೆ 141 ರು. ಇತ್ತು. ಇದೀಗ 162 ರು. ಗೆ ಹೆಚ್ಚಳವಾಗಿದೆ. ಈಗ ಬೆಂಗಳೂರಿನಿಂದ ತುಮಕೂರಿಗೆ ಎಕ್ಸ್‌ಪ್ರೆಸ್‌ ರೈಲು ಪ್ರಯಾಣ ದರ ಕೇವಲ 40 ರು. ಇದೆ. ಇನ್ನು ಪ್ಯಾಸೆಂಜರ್‌/ ಆರ್ಡಿನರಿ ರೈಲು ದರ ಕೇವಲ 20 ರು. ಮಾತ್ರ ಇದೆ. ಇದಕ್ಕೆ ಹೋಲಿಸಿದರೆ ಬಸ್‌ ಪ್ರಮಾಣ ದರ ಶೇ.227 ರಿಂದ ಶೇ.455 ಪಟ್ಟು ಹೆಚ್ಚು.

ಅದೇ ರೀತಿ ಬೆಂಗಳೂರಿನಿಂದ ಮೈಸೂರಿಗೆ ಪರಿಷ್ಕೃತ ಬಸ್ ಪ್ರಮಾಣ ದರ 162 ರು. ಇದೆ. ಅದೇ ಎಕ್ಸ್‌ಪ್ರೆಸ್‌ ರೈಲು ಪ್ರಯಾಣ ದರವು ಕೇವಲ 65 ರು. ಇದೆ. ಇನ್ನು ಪ್ಯಾಸೆಂಜರ್‌/ಆರ್ಡಿನರಿ ರೈಲು ದರ ಕೇವಲ 35ರು. ಮಾತ್ರ ಇದ್ದು, ಬಸ್‌ ದರ ಇದಕ್ಕಿಂತ ಶೇ.250ರಿಂದ ಶೇ.462 ರಷ್ಟು ಅಧಿಕವಾಗಿದೆ.

ಬಸ್‌ ಮತ್ತು ರೈಲು ದರ

ಎಲ್ಲಿಂದ ಎಲ್ಲಿಗೆ? ಬಸ್‌ ದರ ಎಕ್ಸ್‌ಪ್ರೆಸ್‌ ರೈಲು ದರ 

ಆರ್ಡಿನರಿ ರೈಲು ದರ

ಬೆಂಗಳೂರು- ತುಮಕೂರು 91 - 40- 20

ಬೆಂಗಳೂರು-ಮೈಸೂರು162 - 65- 35

ಬೆಂಗಳೂರು-ಶಿವಮೊಗ್ಗ 356 -100 - 60

ಬೆಂಗಳೂರು-ಮಂಗಳೂರು 454 150 - 85

ಬೆಂಗಳೂರು-ಕಲಬುರಗಿ 805  175 - 100

ಬೆಂಗಳೂರು-ಹುಬ್ಬಳ್ಳಿ 563  155 - 90

ಬೆಂಗಳೂರು-ಬೆಳಗಾವಿ 697  190 - 110