ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವವರರು : ಸಂಕ್ಷಿಪ್ತ ಜೀವನ ಚರಿತ್ರೆ

| N/A | Published : May 20 2025, 01:00 AM IST / Updated: May 20 2025, 05:15 AM IST

ಸಾರಾಂಶ

 ಜೆಎಸ್ಎಸ್‌ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಮಹೇಂದ್ರಮೂರ್ತಿ ದೇವನೂರು ‘ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರು’- ಸಂಕ್ಷಿಪ್ತ ಜೀವನ ಚರಿತ್ರೆ ಕೃತಿ ಪ್ರಕಟಿಸಿದ್ದಾರೆ.

 ಮೈಸೂರು : ನಗರದ ಸರಸ್ವತಿಪುರಂ ಜೆಎಸ್ಎಸ್‌ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಮಹೇಂದ್ರಮೂರ್ತಿ ದೇವನೂರು ‘ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರು’- ಸಂಕ್ಷಿಪ್ತ ಜೀವನ ಚರಿತ್ರೆ ಕೃತಿ ಪ್ರಕಟಿಸಿದ್ದಾರೆ.

ಬಸವಣ್ಣನವರ ಜನನ, ಬಾಲ್ಯ, ಶಿಕ್ಷಣ, ಪದವಿಗಳು, ಭಂಡಾರಿ ಬಸವಣ್ಣನವರು, ರಾಜ ಬಿಜ್ಜಳ ಮತ್ತು ಕಲ್ಯಾಣ, ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗಳು, ಬಸವಣ್ಣನವರ ವಚನಗಳುಃ ಸಾಂಸ್ಕೃತಿಕ ಮಹಾಪಠ್ಯಗಳು, ಬಸವಣ್ಣನವರು ಮತ್ತು ವೈಚಾರಿಕತೆ, ಅಂತಿಮ ದಿನಗಳು, ಬಸವಣ್ಣನವರ ಸಂದೇಶ, ಹರಿಹರನ ಬಸವಣ್ಣನವರು, ಬಸವ ಪುರಾಣಗಳಲ್ಲಿ ಬಸವಣ್ಣನವರು- ವಿಚಾರಗಳನ್ನು ಈ ಕೃತಿಯಿಂದ ತಿಳಿಯಬಹುದು. ಈ ಕೃತಿ ಪುಟ್ಟದಾದರೂ ಬಸವಣ್ಣನವರ ಬದುಕು- ಸಾಧನೆಯನ್ನು ಅತ್ಯುತ್ತಮವಾಗಿ ದಾಖಲಿಸಲಾಗಿದೆ.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಶುಭ ಹಾರೈಕೆ, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್‌ ಅವರ ಮುನ್ನುಡಿ, ಡಾ.ಸಿಪಿಕೆ ಅವರ ಬೆನ್ನುಡಿ ಇದ್ದು, ಸಂವಹನ ಪ್ರಕಾಶನ ಪ್ರಕಟಸಿದೆ. ಆಸಕ್ತರು ಪ್ರಕಾಶಕ ಡಿ.ಎನ್‌. ಲೋಕಪ್ಪ, ಮೊ. 99026 39593, ಲೇಖಕ ಡಾ.ಮಹೇಂದ್ರಮೂರ್ತಿ ದೇವನೂರು, ಮೊ. 99802 24546 ಸಂಪರ್ಕಿಸಬಹುದು.

25 ರಂದು ಬಿಡುಗಡೆ:

ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ಮೇ 25 ರಂದು ಸಂಜೆ 4.30ಕ್ಕೆ ಕಲಾಮಂದಿರದಲ್ಲಿ ಬಸವ ಜಯಂತಿ ಸಮಾರೋಪ ಸಮಾರಂಭದಲ್ಲಿ ಡಾ. ಮಹೇಂದ್ರಮೂರ್ತಿ ದೇವನೂರು ಅವರ ‘ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರು’ ಕೃತಿಯನ್ನು ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆ ಮಾಡುವರು.

ಊಟಿಯಲ್ಲಿ ಸಿಲ್ಕ್ ರೂಟ್ ಕೃತಿ ಬಿಡುಗಡೆ

  ಮೈಸೂರು : ಕನ್ನಡ ಸಾಹಿತ್ಯ ಲೋಕಕ್ಕೆ ಜನಪ್ರಿಯ ಲೇಖಕ ಮತ್ತು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್‌ ಅವರ ಸಿಲ್ಕ್ ರೂಟ್ 100ನೇ ಕೃತಿಯನ್ನು ಊಟಿಯ ತೀಟಕಲ್‌ನ ಜೆಎಸ್ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಜೀವನೋತ್ಸಾಹ ಶಿಬಿರದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಡಾ.ಡಿ.ವಿ.ಗುರುಪ್ರಸಾದ್‌ ಮಾತನಾಡಿ, ಈ ಕೃತಿ ಒಂದು ಪ್ರವಾಸ ಕಥನವೂ ಹೌದು ಮತ್ತು ಚಾರಿತ್ರಿಕ ಕೃತಿಯು ಹೌದು. ವಿಶ್ವದ ವಿವಿಧ ಪುರಾತನ ನಾಗರಿಕತೆಗಳನ್ನು ಬೆಸೆದು ಮೂರು ಖಂಡಗಳಿಗೆ ಸಂಪರ್ಕವನ್ನು ಈ ಸಿಲ್ಕ್ ರಸ್ತೆ ನೀಡಿದೆ ಎಂದರು.

ಇದು ಕೇವಲ ವ್ಯಾಪಾರ ಮಾರ್ಗವಾಗಿರಲಿಲ್ಲ. ಈ ರಸ್ತೆಯ ಮೂಲಕವೇ ಭಾರತದ ಹಿಂದೂ ಮತ್ತು ಬೌದ್ಧ ಧರ್ಮಗಳ ಪ್ರಸಾರವಾಗಲು ಸಾಧ್ಯವಾಯಿತು. ಈ ರಸ್ತೆ ಹಾದು ಹೋಗುವ ಹಲವಾರು ದೇಶಕ್ಕೆ ಹೋಗಿ ಸ್ವಾನುಭಾವದಿಂದ ಈ ಕೃತಿ ರಚಿಸಿದ್ದೇನೆ. ನನ್ನ 99ನೇ ಕೃತಿಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳವರ ಅಮೃತ ಹಸ್ತದಿಂದ ಬಿಡುಗಡೆಯಾಗಿದ್ದನ್ನು ನಾನು ಈ ಸಂದರ್ಭದಲ್ಲಿ ಧನ್ಯತೆಯಿಂದ ಸ್ಮರಿಸುತ್ತೇನೆ ಎಂದರು.

ಬಿಳಿಗಿರಿರಂಗನಬೆಟ್ಟದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಆಲಮಟ್ಟಿಯ ಶ್ರೀ ರುದ್ರಮುನಿ ಸ್ವಾಮೀಜಿ, ಸಾಹಿತಿ ಪ್ರೊ.ಕೆ. ಅನಂತರಾಮು ಇದ್ದರು.

Read more Articles on