ಕನ್ನಡಪ್ರಭ ವಾರ್ತೆ ಮೈಸೂರು

ಹುಣಸೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ನೀ.ಗೂ. ರಮೇಶ್‌ ಅವರು ‘ಗಾಂಧೀಮರ’ ಕವಿತೆಗಳ ಸಂಕಲನ ಹೊರತಂದಿದ್ದಾರೆ. ಇದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಕೃತಿ.

ಇಲ್ಲಿ ವಿಭಿನ್ನ ವಸ್ತುಗಳನ್ನೊಳಗೊಂಡ 77 ಕವಿತೆಗಳಿವೆ. ಕವಿತೆಗಳು ಭಾವಪ್ರಧಾನ, ವರ್ಣನೆ ಪ್ರಧಾನ, ಕಲ್ಪನಾ ವಿಲಾಸವೋ ಆಗಿರುವುದು ಅಥವಾ ಎಲ್ಲವೂ ಮೇಳೈಸುವುದು ಸಾಮಾನ್ಯ. ಆದರೆ ಇಲ್ಲಿ ಕವಿಯೇ ಹೇಳಿಕೊಂಡಂತೆ ಅವರ ಕವನಗಳೆಲ್ಲವು ವಿಚಾರ ಪ್ರಧಾನವಾದವು. ಏಕೆಂದರೆ ಸಾಮಾಜಿಕ ಸಂದರ್ಭಗಳು ಮಾನವ ಸ್ವಭಾವದ ವೈರುಧ್ಯಗಳನ್ನು ನಿರೂಪಿಸುವ ಕವಿತೆಗಳೇ ಹೆಚ್ಚಿವೆ. ಕನಕ ಎಂಬ ಬೆಳ‘ಕಿಂಡಿ’! ಸೇರಿದಂತೆ ಗೌತಮಬುದ್ಧ, ಬಾಹುಬಲಿ, ಬಸವಣ್ಣ ಮೊದಲಾದ ವೈಚಾರಿಕ ಲಹರಿಯ ಕವನಗಳು ಈ ಸಂಕಲನದಲ್ಲಿವೆ.

ಕವನ ಸಂಕಲನದ ಶೀರ್ಷಿಕೆಯ ಕವಿತೆಯಾದ ‘ಗಾಂಧೀಮರ’ದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧೀಜಿ ಅವರ ಮಹತ್ವವನ್ನು ಸಾರುತ್ತದೆ. ಕವಿಯನ್ನು ಗಾಂಧಿ ಎಷ್ಟು ಪ್ರಭಾವಿಸಿದ್ದಾರೆ ಎಂದರೇ ಗಾಂಧಿ ಮತ್ತು ಪಿತೃಪಕ್ಷ!, ಗಾಂಧಿಯ ಹುಡುಕೋಣ, ವಾರಸುದಾದರೇ ಇಲ್ಲದವನು,,!, ಮೊದಲಾದ ಕವನಗಳನ್ನು ಗಮನಿಸಬಹುದು.

ಬೇಲಿ ಹಾಕಬೇಡಿ


ಮಹಾ ಚೇತನಗಳಿಗೆ

ಜಾತಿ, ಮತ, ಧರ್ಮಗಳೆಂಬಃ

ಇದ್ದಂತೆಯೇ ಇರಲಿ ಬಿಡಿಟಬೇಗೆ ಇದ್ದರೂ

ಅವು ದೀಪಸ್ತಂಭ

ಎಂಬ ಸಾಲುಗಳನ್ನು ಗಮನಿಸಿದಾಗ ಮಹಾಪುರುಷರನ್ನು ಆಯಾ ಜಾತಿ, ಮತ, ವರ್ಗಕ್ಕೆ ಸೀಮಿತಗೊಳಿಸುತ್ತಿರುವುದರ ವಿರುದ್ಧದ ಆಕ್ರೋಶ ಎದ್ದು ಕಾಣುತ್ತದೆ.

‘ಚಿಲ್ಲರೆಯ ಚೀಟಿ! ಕವನವಂತೂ ನಿತ್ಯ ಬಸ್ಸುಗಳಲ್ಲಿ ಕಂಡಕ್ಟರ್‌ ಮತ್ತು ಪ್ರಯಾಣಿಕರ ನಡುವೆ ನಡೆಯುವ ಕಿರಿಕಿರಿಯ ವಿಡಂಬನೆ ಎನಿಸುತ್ತದೆ. ನಾಯಿಬೇಧ ನೀತಿ! ಯೂ ವರ್ಣಬೇಧ ನೀತಿಯನ್ನು ಪ್ರತಿಬಿಂಬಿಸುತ್ತದೆ. ‘ಯುಗದ ಕನ್ನಡಿ’ ಕವಿತೆಯು ಯುಗದ ಕವಿ, ಜಗದ ಕವಿ ಕುವೆಂಪು ಅವರನ್ನು ಕುರಿತದ್ದು.

ಕೆಲವರ್ಷಗಳ ಹಿಂದೆ ಇಡೀ ವಿಶ್ವವನ್ನು ಕಾಡಿದ ಕೋರನಾ ಕುರಿತ ಸುದೀರ್ಘ ಕವನವೊಂದು ಕೂಡ ಇದೆ. ಇದಲ್ಲದೇ ಸೂತಕದ ಮನೆಯ ಸೂತ್ರದಾರರು! ಕೂಡ ಇದೆ.

ಬಹುತೇಕ ಕವನಗಳ ಶೀರ್ಷಿಕೆಗಳಿಗೆ ಆಶ್ಚರ್ಯಕರ ಚಿಹ್ನೆಗಳನ್ನು ಬಳಸಿದ್ದಾರೆ. ಇದನ್ನು ಕಡಿಮೆ ಮಾಡಬಹುದಿತ್ತು!. ಇದನ್ನು ಹೊರತುಪಡಿಸಿದರೆ ಉಳಿದಂತೆ ಇಡೀ ಸಂಕಲನದ ಕವನಗಳು ವಿಚಾರಪ್ರದವೂ ಬೋಧಪ್ರವವೂ ಆಗಿವೆ. ಸಾಮಾಜಿಕ ವೈರುಧ್ಯಗಳನ್ನು ಅನಾವರಣ ಮಾಡುತ್ತಾ, ಆಷಾಢಭೂತಿಗಳಿವೆ ಚಾಟಿಏಟು ನೀಡುವಂತಿವೆ.

ರೇಖಾ ಪ್ರಕಾಶನ ಪ್ರಕಟಿಸಿದ್ದು, ಮಡಿಕೇರಿ ಬಿಇಒ ಡಾ.ಬಿ.ಸಿ. ದೊಡ್ಡೇಗೌಡ, ಡಾ. ಶುಭಶ್ರೀ ಪ್ರಸಾದ್, ಉ,ಮ., ರೇವಣ್ಣ ಸಿಂಗಪುರ ಅವರ ಮುನ್ನುಡಿ,

ಐಪಿಎಸ್‌ ಅಧಿಕಾರಿ ಡಾ.ಧರಣಿದೇವಿ ಮಾಲಗತ್ತಿ ಅವರ ಬೆನ್ನುಡಿ ಇದೆ ಆಸಕ್ತರು ಡಾ.ನೀ.ಗೂ. ರಮೇಶ್‌, ಮೊ. 82966 98801 ಸಂಪರ್ಕಿಸಬಹುದು.