ನಿವೃತ್ತಿ ಯೋಜನೆ ಮಾಡಲು ಪ್ರೇರೇಪಿಸುವ ಅಭಿಯಾನ ಶುರು ಮಾಡಿದ ಹೆಚ್‌ಡಿಎಫ್‌ಸಿ ಲೈಫ್‌

| Published : Dec 05 2024, 12:31 AM IST

ನಿವೃತ್ತಿ ಯೋಜನೆ ಮಾಡಲು ಪ್ರೇರೇಪಿಸುವ ಅಭಿಯಾನ ಶುರು ಮಾಡಿದ ಹೆಚ್‌ಡಿಎಫ್‌ಸಿ ಲೈಫ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಕಾಲದಲ್ಲಿ ನಿವೃತ್ತಿ ಯೋಜನೆ ಮಾಡುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಹೆಚ್‌ಡಿಎಫ್‌ಸಿ ಲೈಫ್‌ ಸಂಸ್ಥೆಯು ನಿವೃತ್ತಿ ಯೋಜನೆ ಮಾಡಲು ಪ್ರೇರೇಪಿಸುವ ಅಭಿಯಾನ ಪ್ರಾರಂಭಿಸಿದೆ.

ಹೆಚ್‌ಡಿಎಫ್‌ಸಿ ಲೈಫ್ ಭಾರತದ ಪ್ರಮುಖ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದು. ಈ ಕಂಪನಿಯು ಇದೀಗ ನಿವೃತ್ತಿ ಪ್ಲಾನ್ ಮಾಡಲು ಸೂಚಿಸುವ ಹೊಸತೊಂದು ಜಾಹೀರಾತು ಅಭಿಯಾನ ಶುರು ಮಾಡಿದೆ. ಈ ಅಭಿಯಾನದ ಮೂಲಕ ನಿವೃತ್ತಿ ಪ್ಲಾನ್ ಮಾಡಲು ಇದುವೇ ಸೂಕ್ತ ಸಮಯ ಎಂದು ಸಾರಿದೆ. ಅದಕ್ಕೆ ಕಾರಣವೂ ಇದೆ.

ಭಾರತದಲ್ಲಿ ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚುತ್ತಿರುವುದನ್ನು ಕೆಲವು ಅಧ್ಯಯನಗಳು ಹೇಳಿವೆ. ಜೊತೆಗೆ ಈಗ ಅತ್ಯಾಧುನಿಕ ಆರೋಗ್ಯ ಸೇವೆ ಇರುವುದರಿಂದ ಜೀವಿತಾವಧಿ ಕೂಡ ಹೆಚ್ಚು ಎಂದೂ ಅಧ್ಯಯನಗಳು ತಿಳಿಸಿವೆ. ನಿವೃತ್ತರಾದ ಮೇಲೆ ಬಹುಕಾಲ ಜೀವಿತಾವಧಿ ಇರುವುದರಿಂದ, ಆ ಅವಧಿಯಲ್ಲಿ ನೆಮ್ಮದಿಯುತ ಜೀವನ ಸಾಗಿಸುವುದು ಅವಶ್ಯವಾದ್ದರಿಂದ ಅದಕ್ಕೆ ನಿವೃತ್ತಿ ಉಳಿತಾಯ ಯೋಜನೆ ಇರಬೇಕು. ನಿವೃತ್ತಿಗೆ ಅಂತಲೇ ಸ್ವಲ್ಪ ದುಡ್ಡು ಕೂಡಿಡುತ್ತಾ ಬಂದರೆ ಬೇರೆಯವರಿಗೆ ಡಿಪೆಂಡ್‌ ಆಗಬೇಕಾಗಿಲ್ಲ.

ಸಾಮಾನ್ಯವಾಗಿ ಈಗ ಎಲ್ಲರಿಗೂ ನಿವೃತ್ತಿ ಯೋಜನೆ ಮಾಡುವ ಮನಸ್ಸಿದೆ. ಆದರೆ ತಮ್ಮ ಜವಾಬ್ದಾರಿಗಳಿಂದ ಸೂಕ್ತ ನಿವೃತ್ತಿ ಯೋಜನೆ ಮಾಡಲು ಸಾಧ್ಯವಾಗಿರುವುದಿಲ್ಲ. ಮತ್ತೆ ಪ್ಲಾನ್ ಮಾಡಲು ಹೊರಡುವಾಗ ಸಮಯ ಆಗಿರುತ್ತದೆ. ಹಾಗಾಗಿ ಹೆಚ್‌ಡಿಎಫ್‌ಸಿ ಲೈಫ್‌ ಸಂಸ್ಥೆಯು ಹೊಸತಾಗಿ ಜಾಹೀರಾತು ಬಿಡುಗಡೆ ಮಾಡಿದ್ದು, ಈಗಲೇ ನಿವೃತ್ತಿ ಯೋಜನೆ ಮಾಡಲು ಪ್ರೇರೇಪಣೆ ನೀಡಿದೆ. ಯೂಟ್ಯೂಬ್‌ನಲ್ಲಿ ಈ ಜಾಹೀರಾತನ್ನು ಆಸಕ್ತರು ನೋಡಬಹುದಾಗಿದೆ. ಈ ಅಭಿಯಾನವನ್ನು ಹೆಚ್‌ಡಿಎಫ್‌ಸಿ ಲೈಫ್‌ನ ಗ್ರೂಪ್ ಹೆಡ್ ಸ್ಟ್ರಾಟಜಿ ಮತ್ತು ಚೀಫ್ ಮಾರ್ಕೆಟಿಂಗ್ ಆಫೀಸರ್ ಆಗಿರುವ ವಿಶಾಲ್ ಸುಭರ್ವಾಲ್ ಬಿಡುಗಡೆ ಮಾಡಿದ್ದಾರೆ.