ಸಾರಾಂಶ
ಮೈಸೂರು ಹನುಮ ಹಬ್ಬದ ಪ್ರಚಾರ ರಥ ಉದ್ಘಾಟನೆ, ನಗರದಲ್ಲಿ ಡಿ.30 ರಂದು ನಡೆಯಲಿರುವ ಮೈಸೂರು ಹನುಮ ಹಬ್ಬ ಕಾರ್ಯಕ್ರಮದ ಪ್ರಚಾರ ರಥವನ್ನು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಮಾಜ ಸೇವಕ ಡಿ.ಟಿ. ಪ್ರಕಾಶ್ ಉದ್ಘಾಟಿಸಿದರು.
ಫೋಟೋ- 19ಎಂವೈಎಸ್45
----ಕನ್ನಡಪ್ರಭ ವಾರ್ತೆ ಮೈಸೂರು
ನಗರದಲ್ಲಿ ಡಿ.30 ರಂದು ನಡೆಯಲಿರುವ ಮೈಸೂರು ಹನುಮ ಹಬ್ಬ ಕಾರ್ಯಕ್ರಮದ ಪ್ರಚಾರ ರಥವನ್ನು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಮಾಜ ಸೇವಕ ಡಿ.ಟಿ. ಪ್ರಕಾಶ್ ಉದ್ಘಾಟಿಸಿದರು. ನಂತರ ಡಿ.ಟಿ. ಪ್ರಕಾಶ್ ಮಾತನಾಡಿ, ಹಿಂದು ಸಮಾಜದಲ್ಲಿ ರಾಜಕೀಯವಾಗಿ, ಜಾತಿ- ವಿಜಾತಿಯಾಗಿ ಅನೇಕ ಭಿನ್ನಾಭಿಪ್ರಾಯಗಳಿವೆ. ಈ ರೀತಿ ಒಡಕುಗಳನ್ನು ಬದಿಗಿಟ್ಟು ಧಾರ್ಮಿಕವಾಗಿ ಒಂದಾಗಬೇಕಾಗಿದೆ. ಮೈಸೂರು ಹನುಮ ಹಬ್ಬದಂತಹ ಕಾರ್ಯಕ್ರಮಗಳು ಹಿಂದೂ ಸಮಾಜವನ್ನು ಒಗ್ಗೂಡಿಸಿ ಕರೆದೊಯ್ಯುವ ಕೆಲಸಕ್ಕೆ ಸಹಕಾರಿಯಾಗಿದೆ. ಹೀಗಾಗಿ ಎಲ್ಲರೂ ಈ ಹಬ್ಬದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.ಇದೇ ವೇಳೆ ಪ್ರಚಾರ ಸಾಮಗ್ರಿಗಳನ್ನು ವಾಹನಗಳ ಮೇಲೆ ಅಂಟಿಸುವ ಮೂಲಕ ಪ್ರಚಾರಕ್ಕೆ ಸಮಾಜ ಸೇವಕ ಎಸ್.ಕೆ. ದಿನೇಶ್ ಚಾಲನೆ ನೀಡಿದರು.
ಮೈಸೂರು ಹನುಮಂತ್ಯುತ್ಸವ ಸಮಿತಿಯ ಸಂಜಯ್, ಜೀವನ್ ಕುಮಾರ್, ಸಂತೋಷ ಶಂಭು, ರಾಕೇಶ್ ಭಟ್, ಹೇಮಂತ್, ಮಾರ್ಬಳ್ಳಿ ಕುಮಾರ್, ಮನು ಶೈವ, ಯಶ್ವಂತ್, ಕಡಕೋಳ ಜಗದೀಶ್, ಕಿರಣ್, ರಮೇಶ್ ಮೊದಲಾದವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))