ದೇಶದ ಮೂರನೇ ಅತಿ ಜನನಿಬಿಡ ಏರ್ಪೋರ್ಟ್‌ ಟರ್ಮಿನಲ್‌ - 2 ಗೆ ಭಾರತದ ಮೊದಲ 5 ಸ್ಟಾರ್‌!

| N/A | Published : Apr 10 2025, 02:01 AM IST / Updated: Apr 11 2025, 07:16 AM IST

ಸಾರಾಂಶ

ದೇಶದ ಮೂರನೇ ಅತಿ ಜನನಿಬಿಡ ವಿಮಾನ ನಿಲ್ದಾಣವಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಗರಿಯೊಂದು ಲಭಿಸಿದೆ.

ಬೆಂಗಳೂರು: ದೇಶದ ಮೂರನೇ ಅತಿ ಜನನಿಬಿಡ ವಿಮಾನ ನಿಲ್ದಾಣವಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಗರಿಯೊಂದು ಲಭಿಸಿದೆ. ಇಲ್ಲಿನ ಟರ್ಮಿನಲ್‌ 2 ಭಾರತದ ಮೊದಲ 5 ಸ್ಟಾರ್‌ ರೇಟಿಂಗ್‌ ಪಡೆದ ಟರ್ಮಿನಲ್‌ ಆಗಿ ಹೊರಹೊಮ್ಮಿದೆ. ನಾಗರಿಕ ವಿಮಾನ ಕ್ಷೇತ್ರದ ಮಹತ್ವದ ಏಜೆನ್ಸಿ ಸ್ಕೈಟ್ರ್ಯಾಕ್ಸ್‌ ಈ ರೇಟಿಂಗ್‌ ನೀಡಿದೆ.

ಟರ್ಮಿನಲ್‌ ವಿನ್ಯಾಸ, ಸ್ವಚ್ಛತೆ, ಭದ್ರತೆ, ಡಿಜಿಟಲ್‌ ಬಳಕೆ, ಆತಿಥ್ಯ, ಒಳಗೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಸೇರಿ 30ಕ್ಕೂ ಹೆಚ್ಚು ವಿಭಾಗಗಳಲ್ಲಿ 800ಕ್ಕೂ ಹೆಚ್ಚು ಪ್ರಯಾಣಿಕರ ಅಭಿಪ್ರಾಯ ಮತ್ತು ಅಧ್ಯಯನದ ಬಳಿಕ 5 ಸ್ಟಾರ್‌ ರೇಟಿಂಗ್ ನೀಡಲಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಬೆಂಗಳೂರು ವಿಮಾನ ನಿಲ್ದಾಣದ ಎಂಡಿ ಮತ್ತು ಸಿಇಓ ಹರಿ ಮರರ್‌, ಈ ಮೈಲುಗಲ್ಲು ಬೆಂಗಳೂರನ್ನು ಜಾಗತಿಕ ವೈಮಾನಿಕ ಕ್ಷೇತ್ರದಲ್ಲಿ ಉತ್ತುಂಗದಲ್ಲಿ ಇಡಲಿದೆ. ನಮ್ಮ ಪ್ರಯಾಣಿಕರು, ಸಿಬ್ಬಂದಿ ಮತ್ತು ಪಾಲುದಾರರಿಗೆ ಕೃತಜ್ಞತೆಗಳು ಎಂದು ಹೇಳಿದ್ದಾರೆ.

ಈ ಪುರಸ್ಕಾರದೊಂದಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 5 ಸ್ಟಾರ್‌ ರೇಟಿಂಗ್‌ ಪಡೆದ ಮೊದಲ ಏರ್ಪೋರ್ಟ್‌ ಎಂಬ ಖ್ಯಾತಿ ಗಳಿಸಿದೆ. ಇದು ಏರ್‌ಪೋರ್ಟ್‌ಗಳಿಗೆ ಲಭಿಸಿರುವ ಉನ್ನತ ಗೌರವವಾಗಿದೆ.

- ಎಡ್ವರ್ಡ್‌ ಪ್ಲೈಸ್ಟೆಡ್‌, ಸ್ಕೈಟ್ರ್ಯಾಕ್ಸ್‌ ಸಿಇಓ