‘ಕನ್ನಡ ಭಾಷೆಯನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ’

| Published : Nov 04 2023, 12:31 AM IST

‘ಕನ್ನಡ ಭಾಷೆಯನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ’
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದ ಆತ್ಮಜ್ಯೋತಿ ಬೆಳಗಿಸಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವಾಗಲಿ. ಕನ್ನಡವನ್ನು ಬೆಳೆಸುವುದು ಕನ್ನಡಿಗರಾಗಿ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಧೆ ಬಿ.ಕೆ. ದಾನೇಶ್ವರಿ ತಿಳಿಸಿದರು.
ಜೈ ಹಿಂದ್ ಪ್ರತಿಷ್ಠಾನದ ವತಿಯಿಂದ ರಾಜ್ಯೋತ್ಸವ ಆಚರಣೆ । ಈಶ್ವರಿ ವಿವಿಯ ಮುಖ್ಯಸ್ಥೆ ದಾನೇಶ್ವರಿ ಅಭಿಮತ ಕನ್ನಡಪ್ರಭ ವಾರ್ತೆ ಚಾಮರಾಜನಗರ ಕನ್ನಡದ ಆತ್ಮಜ್ಯೋತಿ ಬೆಳಗಿಸಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವಾಗಲಿ. ಕನ್ನಡವನ್ನು ಬೆಳೆಸುವುದು ಕನ್ನಡಿಗರಾಗಿ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಧೆ ಬಿ.ಕೆ. ದಾನೇಶ್ವರಿ ತಿಳಿಸಿದರು. ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ನಗರದ ಜೈಹಿಂದ್ ಕಟ್ಟೆಯಲ್ಲಿ ಕನ್ನಡಾಂಬೆಗೆ ಕನ್ನಡದಾರತಿ, ಕನ್ನಡ ರಂಗೋಲಿ, ಕನ್ನಡದ ಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡತನ, ಕನ್ನಡದ ಚಿಂತನೆ, ಕನ್ನಡದ ಯೋಚನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಭಾಷೆ ಉನ್ನತವಾಗಿ ಬೆಳೆಯಲಿದೆ. ಭಾಷೆಗೆ ಬಳಕೆ ಮುಖ್ಯ. ಬಳಕೆಯಾಗದೆ ಇದ್ದಾಗ ಭಾಷೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಮನೆ ಮನೆಯಲ್ಲೂ ಕನ್ನಡದ ಆತ್ಮ ಜ್ಯೋತಿಯನ್ನು ಬೆಳಗಿಸುವ ಮೂಲಕ ಕನ್ನಡದ ಭಾಷೆಯನ್ನು ನಾವು ಬಳಸೋಣ ಎಂದರು. ನಿವೃತ್ತ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಮಾತನಾಡಿ, ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕದಂಬರು, ಗಂಗರು ಹೊಯ್ಸಳರು ಆಳಿದ ನಾಡು. ಜ್ಞಾನಪೀಠ ಪ್ರಶಸ್ತಿಗಳ ನಾಡು ಕರ್ನಾಟಕವಾಗಿದೆ. ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಭೈರಪ್ಪನವರು ನಮ್ಮ ಕರ್ನಾಟಕದವರು ಎಂಬುದು ಹೆಮ್ಮೆ. ಸಾಹಿತ್ಯವೇ ಜೀವನ . ಪುಸ್ತಕಗಳ ಅಧ್ಯಯನದ ಮೂಲಕ ಕನ್ನಡ ಸಾಹಿತ್ಯವನ್ನು ಉಳಿಸೋಣ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ, ಚಾಮರಾಜನಗರ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡವನ್ನು ಬಳಸುವ ಜಿಲ್ಲೆಗಳಲ್ಲಿ ಒಂದಾಗಿದೆ. ಚಾಮರಾಜನಗರ ಗಡಿ ಜಿಲ್ಲೆಯಾಗಿದ್ದರೂ ಕನ್ನಡದ ಸಂಸ್ಕೃತಿ, ಪರಂಪರೆ, ಹಬ್ಬ, ಉತ್ಸವ ಹಾಗೂ ಎಲ್ಲವನ್ನು ಆಚರಿಸಿಕೊಂಡು ಕನ್ನಡದ ವಾತಾವರಣವನ್ನು ಸೃಷ್ಟಿಸಿದೆ. ಕನ್ನಡವೇ ನಮ್ಮ ಉಸಿರು ಎಂಬಂತೆ ಕನ್ನಡದ ವಾತಾವರಣವನ್ನು ಸೃಷ್ಟಿಸೋಣ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಾಟ್ಯಕಲಾ ಸರಸ್ವತಿ ಸಂಸ್ಥೆಯ ಅಧ್ಯಕ್ಷರಾದ ಡಾ. ಅಕ್ಷತಾ ಜೈನ್, ಜೈಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಮಾಲ ,ನಾಗಶ್ರೀ, ಋಗ್ವೇದಿ. ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಋಗ್ವೇದಿ, ಸಾನಿಕ, ಮಾಲತಿ, ಶ್ರಾವ್ಯ ಬಿಕೆ, ಆರಾಧ್ಯ, ಶ್ರಾವ್ಯ, ಸಿಂಚನ, ಇದ್ದರು. ------------ 3ಸಿಎಚ್‌ಎನ್‌15 ಚಾಮರಾಜನಗರದ ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ನಗರದ ಜೈಹಿಂದ್ ಕಟ್ಟೆಯಲ್ಲಿ ಕನ್ನಡಾಂಬೆಗೆ ಕನ್ನಡದಾರತಿ ,ಕನ್ನಡ ರಂಗೋಲಿ, ಕನ್ನಡದ ಜ್ಯೋತಿ ಕಾರ್ಯಕ್ರಮ ನಡೆಯಿತು.