ಸಾರಾಂಶ
ಐಟೆಲ್ ಹೊಸತಾಗಿ ಎರಡು ಯಿಯರ್ ಬಡ್‌ಗಳನ್ನು ಮತ್ತು ಒಂದು ನೆಕ್‌ಬ್ಯಾಂಡ್ ಅನ್ನು ಬಿಡುಗಡೆ ಮಾಡಿದ್ದು, ಈ ಕುರಿತ ವಿವರವನ್ನು ಇಲ್ಲಿ ನೋಡಬಹುದು.
ಜಗತ್ತು ಬದಲಾದ ಹಾಗೆ ಜನರು ಕೂಡ ಬದಲಾವಣೆಗೆ ಹೊಂದಿಕೊಳ್ಳುತ್ತಾರೆ ಅನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಯಿಯರ್ ಬಡ್‌ಗಳು. ವರ್ಷಗಳ ಹಿಂದೆ ಬಹಳ ಅಪರೂಪಕ್ಕೆ ಕಾಣಿಸುತ್ತಿದ್ದ ಯಿಯರ್‌ಬಡ್‌ಗಳು ಎಲ್ಲಾ ಕಡೆ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಪೂರಕವಾಗಿ ಕಂಪನಿಗಳು ಕೂಡ ಹೊಸ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುತ್ತವೆ.
ಇದೀಗ ಭಾರತದ ಪ್ರಮುಖ ಕಂಪನಿ ಐಟೆಲ್ ಮೂರು ರೀತಿಯ ಯಿಯರ್ ಬಡ್‌ಗಳನ್ನು ಬಿಡುಗಡೆ ಮಾಡಿದೆ. ಆ ಉತ್ಪನ್ನಗಳ ಹೆಸರು ಹೀಗಿವೆ- ಬಡ್ಸ್ ಏಸ್ 2, ಬಡ್ಸ್ ಏಸ್ ಎಎನ್‌ಸಿ ಮತ್ತು ರೋರ್ 54 ಪ್ರೊ.ಅತ್ಯಾಧುನಿಕ ಆಡಿಯೋ ಗುಣಮಟ್ಟವನ್ನು ಈ ಯಿಯರ್ ಬಡ್ ಮತ್ತು ಯಿಯರ್ ಫೋನ್ ಹೊಂದಿವೆ ಎಂದು ಕಂಪನಿ ಹೇಳಿದೆ. ಅದರಲ್ಲೂ ವಿಶೇಷವಾಗಿ ಕಂಪನಿಯು ಆರಂಭಿಕ ಕೊಡುಗೆಯಾಗಿ ಶೇ.70ರವರೆಗೆ ರಿಯಾಯಿತಿ ನೀಡುತ್ತಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ಉತ್ಪನ್ನಗಳನ್ನು ನೀವೊಮ್ಮೆ ನೋಡಬಹುದು.
ಬಡ್ಸ್ ಏಸ್ ಎಎನ್‌ಸಿ ರೂ.1499, ಬಡ್ಸ್ ಏಸ್ 2 ರೂ.1199 ಮತ್ತು ರೋರ್ 54 ಪ್ರೊ ಬೆಲೆ ರೂ.799ಗೆ ದೊರೆಯಲಿದೆ.ಬಡ್ಸ್ ಏಸ್ ಎಎನ್‌ಸಿ
ಐಟೆಲ್ ಬಡ್ಸ್ ಏಸ್ ಎಎನ್‌ಸಿ ಎಂಬ ವೈರ್‌ಲೆಸ್ ಇಯರ್ ಬಡ್‌ಗಳು ನಾಯ್ಸ್ ಕ್ಯಾನ್ಸಲೇಷನ್ ಫೀಚರ್ ಹೊಂದಿವೆ. ಜೊತೆಗೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ. ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 180 ನಿಮಿಷಗಳ ಕಾಲ ಇದನ್ನು ಬಳಸಬಹುದು.ಬಡ್ಸ್ ಏಸ್ 2 ಉತ್ಪನ್ನವು 50 ಗಂಟೆಗಳ ಬ್ಯಾಟರಿ ಬಾಳಿಕೆ ಬರುವುದು ವಿಶೇಷ. ಇದು ಕೂಡ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದ್ದು, 10 ನಿಮಿಷ ಚಾರ್ಜ್ ಮಾಡಿದರೆ 120 ಕಾಲ ಬಳಸಬಹುದು.
ರೋರ್ 54 ಪ್ರೊ ಉತ್ಪನ್ನವು ನೆಕ್ ಬ್ಯಾಂಡ್ ಆಗಿದ್ದು, ನೆಕ್ ಬ್ಯಾಂಡ್ ಇಷ್ಟಪಡುವವರು ಗಮನಿಸಬಹುದು.