ಜನವರಿ 21 ರಿಂದ ಜನವರಿ 27ರವರೆಗಿನ ವಾರಫಲ

| Published : Jan 21 2024, 01:31 AM IST / Updated: Jan 21 2024, 11:55 AM IST

horoscope

ಸಾರಾಂಶ

ಜನವರಿ 21 ರಿಂದ ಜನವರಿ 27ರವರೆಗಿನ ವಾರ ಫಲ

1. ಮೇಷರಾಶಿ: ನಿಮ್ಮ ಆರ್ಥಿಕತೆಯನ್ನು ಸುಧಾರಿಸಲು ದೃಢವಾದ ನಿರ್ಧಾರ ಮಾಡಬಹುದು. ಆದರೂ ಅನಿರೀಕ್ಷಿತ ಖರ್ಚುಗಳು ಧೃತಿಗೆಡಿಸುತ್ತವೆ. ಈ ಬಗ್ಗೆ ಎಚ್ಚರ ಇರಲಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ.ಈ ವಾರ ಶುಭಫಲಗಳನ್ನು ನಿರೀಕ್ಷಿಸಬಹುದು.‌ ನೀವು ಅಂದುಕೊಂಡ ಶುಭಕಾರ್ಯಗಳು, ಕೆಲಸಗಳು ಸುಲಲಿತವಾಗಿ ನಡೆಯುತ್ತವೆ. ಗ್ರಹಗತಿಗಳು ನಿಮ್ಮ ಭಾಗ್ಯವನ್ನು ಹೆಚ್ಚಿಸುತ್ತವೆ. ಕೊಂಚ ಖರ್ಚು ಹೆಚ್ಚು ಇದ್ದರೂ ಲಾಭ ಸ್ಥಾನದ ಶನಿಯಿಂದ ಧನಾಗಮನ ಚೆನ್ನಾಗಿದೆ. ಸಹೋದರಿಗೆ ಸಹಾಯ ಮಾಡುತ್ತೀರಿ. ತಂದೆಯ ಆರೋಗ್ಯ ಉತ್ತಮವಾಗಿರುತ್ತದೆ. ಕೌಟುಂಬಿಕ ನೆಮ್ಮದಿ ಇದೆ.

2. ವೃಷಭರಾಶಿ: ಸಂಬಂಧ ಮತ್ತು ನಿಮ್ಮ ಸಂವಹನ ಮಾರ್ಗಗಳನ್ನು ಸುಧಾರಿಸಿ. ಮನೆಯವರ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಬದ್ಧರಾಗಿರಲು ಸಾಕಷ್ಟು ಪ್ರಯತ್ನವನ್ನು ಮಾಡಬಹುದು. ವೃತ್ತಿಯಲ್ಲಿ ಹಾಗೂ ಕೌಟುಂಬಿಕವಾಗಿ ಕೊಂಚ ಕಿರಿಕಿರಿ ಇರುತ್ತದೆ. ಹಣದ ಹರಿವು ಉತ್ತಮವಾಗಿದೆ. ಒಂದಿಷ್ಟು ಜವಾಬ್ದಾರಿಗಳು ಹೆಗಲೇರಬಹುದು. ಆದರೆ ಒಂದು ಬಹುದೊಡ್ಡ ಒತ್ತಡದಿಂದ ನಿಮಗೆ ಮುಕ್ತಿ ಸಿಗಲಿದೆ. ಆಫೀಸ್‌ನಲ್ಲಿ ಬಾಸ್‌, ಹಿರಿಯ ಸಹೋದ್ಯೋಗಿಗಳಿಂದ ಮೆಚ್ಚುಗೆ. ಕೌಟುಂಬಿಕ ವಾಗಿ ನೆಮ್ಮದಿ ಇದೆ. 

3. ಮಿಥುನರಾಶಿ: ಯಾವುದಾದರೊಂದು ಬದಲಾವಣೆಗೆ ಸಿದ್ಧರಾಗಿ. ನೌಕರಿಯಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಔಷಧಿ ವ್ಯಾಪಾರಸ್ಥರಿಗೆ ಲಾಭ. ತಾಯಿಯ ಅನಾರೋಗ್ಯ ನಿಮ್ಮ ಒತ್ತಡ ಹೆಚ್ಚಿಸಬಹುದು. ಈ ತಿಂಗಳು ಗುರುಬಲ ಇರುವುದರಿಂದ ನಿಮಗೆ ಅನುಕೂಲಗಳು ಸಾಕಷ್ಟಿವೆ. ವಿದೇಶ ಪ್ರಯಾಣ ಯೋಗ ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಇದೆ. ಆದರೆ ಹೊಸ ವಾಹನ ಕೊಳ್ಳಲು ಈಗ ಸಕಾಲ ಅಲ್ಲ. ಆಸ್ತಿ ಖರೀದಿಯೂ ಈಗ ಬೇಡ. ಹೊಸ ಆಫೀಸು ಆರಂಭಕ್ಕೂ ಇದು ಸಕಾಲವಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಕಷ್ಟು ಯೋಚಿಸಿ. 

4. ಕಟಕರಾಶಿ: ಮಾನಸಿಕ ಒತ್ತಡ, ಗೊಂದಲ ನಿವಾರಣೆ ಆಗುತ್ತದೆ. ಈ ವಾರಾಂತ್ಯ ಅಥವಾ ಈ ತಿಂಗಳಾಂತ್ಯಕ್ಕೆ ನಿಮ್ಮ ಬದುಕಿನಲ್ಲಿ ಒಂದು ಬದಲಾವಣೆ ಬರಬಹುದು. ಜೊತೆಗೆ ಭವಿಷ್ಯದ ಬಗ್ಗೆ ನಿಮಗೊಂದು ಸ್ಪಷ್ಟತೆ ಬರಬಹುದು. ಸದ್ಯ ನಿಮ್ಮ ಗ್ರಹಗತಿಗಳು ಪೂರಕವಾಗಿವೆ. ಮೂರು ಗ್ರಹಗಳ ಸಂಯೋಗದ ಕಾರಣ ಯಾವ ಕೆಲಸ ಮಾಡಿದರೂ ಜಯ ಲಭಿಸುತ್ತದೆ. ಅಷ್ಟಮ ಶನಿಯ ಬಿಸಿಯ ನಡುವೆಯೂ ತಾತ್ಕಾಲಿಕ ಉಪಶಮನ ಸಿಗುತ್ತದೆ.‌ ಈವರೆಗೆ ನಿಮ್ಮನ್ನು ಬೆಂಬಿಡದೆ ಕಾಡಿದ ಸಮಸ್ಯೆಗಳು ನಿವಾರಣೆ ಆಗಬಹುದು. ಹೆಚ್ಚೆಚ್ಚು ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಿ.

5. ಸಿಂಹರಾಶಿ: ಕೆಲಸಕ್ಕೆ ಸಂಬಂಧಿಸಿದ ಸವಾಲು, ವೈಯಕ್ತಿಕ ಜೀವನದ ಸಮಸ್ಯೆಗಳಿರಲಿ, ತಾಳ್ಮೆ ಮತ್ತು ತಿಳುವಳಿಕೆಯಿಂದ ಅವುಗಳನ್ನು ಜಯಿಸುವಲ್ಲಿ ನೀವು ಯಶಸ್ವಿಯಾಗಬಹುದು. ವ್ಯವಹಾರದಲ್ಲಿಯೂ ಸಹ, ನೀವು ಕಷ್ಟಕರವೆಂದು ಭಾವಿಸಿದ ಗುರಿಯು ನಿಮ್ಮ ಕಡೆಯ ಸ್ವಲ್ಪ ಪ್ರಯತ್ನದಿಂದ ಸಾಧಿಸಲ್ಪಡುವುದನ್ನು ನೀವು ನೋಡುತ್ತೀರಿ. ಸಂತಾನ ಭಾಗ್ಯವಿದೆ. ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಶುಭಫಲಗಳಿವೆ. ಒಂಬತ್ತನೇ ಮನೆಯ ಗುರುವಿನ ಜೊತೆ ಐದನೇ ಮನೆಯಲ್ಲಿ ಬುಧ-ಶುಕ್ರ-ಕುಜರು ಸಹ ತಮ್ಮ ಬಲವನ್ನು ಸೇರಿಸಿ ನಿಮಗೆ ರಾಜಯೋಗವನ್ನುಂಟು ಮಾಡುತ್ತಾರೆ.

6. ಕನ್ಯಾರಾಶಿ: ದೀರ್ಘಕಾಲದ ಕೌಟುಂಬಿಕ ವಿವಾದ ಬಗೆಹರಿಯುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ. ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ನಿರ್ದಿಷ್ಟ ಗುರಿಯನ್ನು ಸಾಧಿಸಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಕೆಲಸಕ್ಕೆ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಪ್ರಚಾರದ ಜೊತೆಗೆ ನಿಮ್ಮ ಕೆಲಸದ ವ್ಯಾಪ್ತಿಯೂ ಹೆಚ್ಚಾಗಬಹುದು. ಯಶಸ್ಸು, ಧನಲಾಭವಿದೆ. ಕೊಂಚ ಆರೋಗ್ಯದ ಸಮಸ್ಯೆ ಬರಬಹುದು. ಗುರುವನ್ನು ಸ್ಮರಿಸಿ. 

7. ತುಲಾರಾಶಿ: ಉದ್ಯೋಗಿಗಳ ಮೇಲೆ ಹೆಚ್ಚುವರಿ ಕೆಲಸದ ಹೊರೆ ಇರುವುದಿಲ್ಲ. ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಹಣ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯಿದೆ. ಸದ್ಯ ಯಾವುದೇ ಬಗೆಯಲ್ಲಿ ಹಣವನ್ನು ಹೂಡಿಕೆ ಮಾಡಬೇಡಿ. ಪ್ರೇಮ ಜೀವನದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಆದರೆ ನಿಮ್ಮ ಮನೋದೃಢತೆ ನಿಮ್ಮನ್ನು ಕಾಯುತ್ತದೆ. ರಾಹು ಬಲ ಇದೆ ಗುರು ಬಲ ಇದೆ. ಹಣಕಾಸಿನ‌ ಹರಿವು ಉತ್ತಮವಾಗಿದೆ. ಮಕ್ಕಳ ಪ್ರಗತಿ ಖುಷಿ ಕೊಡುತ್ತದೆ. 

8. ವೃಶ್ಚಿಕ ರಾಶಿ: ಯಾವುದೇ ತೀರ್ಮಾನಕ್ಕೆ ಬರುವ ಮೊದಲು ವಾಸ್ತವವನ್ನು ಅರಿಯಲು ಮರೆಯದಿರಿ. ಇಲ್ಲದಿದ್ದರೆ ನಂತರ ವಿಷಾದಿಸಬೇಕಾಗಬಹುದು. ನಿಮ್ಮ ಪ್ರೀತಿಯ ಜೀವನವನದಲ್ಲಿ ನಿರ್ಲಕ್ಷ್ಯ ತೋರಿಸುವುದನ್ನು ತಪ್ಪಿಸಿ. ನಿಮ್ಮ ಸಂಬಂಧಕ್ಕೆ ಸಮಸ್ಯೆಯಾಗಬಹುದಾದ ಯಾವುದನ್ನಾದರೂ ಬಹಿರಂಗವಾಗಿ ಹೇಳಿಕೊಳ್ಳದಿರಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಈಗ ಸ್ವಲ್ಪ ಒತ್ತಡಗಳ ಸಮಯ. ಆದರೂ ಖುಷಿ ಇದೆ. ನೆಮ್ಮದಿ ಇದೆ. ಹೊಸ ನೌಕರಿಯ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಇದೆ. ಕಾರ್ಯ ನಿಮಿತ್ತ ವಿದೇಶ ಪ್ರವಾಸ ಇದೆ.

9. ಧನಸ್ಸುರಾಶಿ: ಯಾವುದೇ ವ್ಯಾಪಾರ ಸಂಬಂಧಿತ ಡೀಲ್‌ಗಳನ್ನು ಪೂರ್ಣಗೊಳಿಸುವಾಗ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆಯಿಂದಿರಿ. ವ್ಯಾಪಾರ ಉದ್ದೇಶಗಳಿಗಾಗಿ ವಿದೇಶ ಪ್ರವಾಸ ಇರಬಹುದು. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚು ಯೋಚಿಸಬೇಡಿ, ಹಣಕಾಸು ಮತ್ತು ಸಂಬಂಧವನ್ನು ಮ್ಯಾನೇಜ್‌ ಮಾಡಿ. ನಿಮ್ಮ ಆರೋಗ್ಯವು ಹಾನಿಗೊಳಗಾಗಬಹುದು. ಮನೆಯ ಅಲಂಕಾರ ಮತ್ತು ನಿಮಗಾಗಿ ಐಷಾರಾಮಿ ಖರ್ಚು ಮಾಡುತ್ತೀರಿ. ಮಕ್ಕಳಿಗೆ ಪ್ರಗತಿ‌ ಇದೆ. ಯಾರೊಂದಿಗೂ ಕಟುವಾಗಿ‌ ಮಾತನಾಡಬೇಡಿ. 

10. ಮಕರರಾಶಿ: ಈ ವಾರ ನಿಮ್ಮ ಪ್ರಣಯ ಜೀವನವು ಉತ್ತಮವಾಗಿ ಬದಲಾಗಬಹುದು. ಸಂಗಾತಿ ನಿಮ್ಮೊಂದಿಗೆ ಸಾಕಷ್ಟು ಭಾವನಾತ್ಮಕವಾಗಿರಬಹುದು. ಹೊಸ ಆರ್ಥಿಕ ಅವಕಾಶಗಳು ಬರಬಹುದು. ನಿಮ್ಮ ಸಾಮರ್ಥ್ಯಗಳನ್ನು ಸುಧಾರಿಸಲು ಇದು ಒಂದು ಅವಕಾಶ. ಯಾರಾದರೂ ನಿಮಗೆ ಹೊಸ ಮಾರ್ಗದರ್ಶನವನ್ನು ನೀಡಬಹುದು. ಹಲ್ಲು ಮುಖ ಇವುಗಳ ಅಂದಕ್ಕಾಗಿ ಖರ್ಚು ಮಾಡುವಿರಿ. ಕೆಲವೇ ದಿನಗಳಲ್ಲಿ ಗುರುಬಲ ಬಂದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅವಕಾಶಗಳ ಬಾಗಿಲು ತೆರೆಯುತ್ತದೆ. ನೀವು ಕೂಡ ಮೈಕೊಡವಿ ಮುನ್ನುಗ್ಗಬೇಕು.

11. ಕುಂಭರಾಶಿ: ಉದ್ವಿಗ್ನ ಸಂದರ್ಭಗಳಲ್ಲಿ, ನಿಮ್ಮ ಉದ್ವೇಗವನ್ನು ನಿಯಂತ್ರಿಸಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ. ಅವಿವಾಹಿತರು ಸರಿಯಾದ ಸಂಗಾತಿಯನ್ನು ಕಂಡುಕೊಳ್ಳಬಹುದು. ಸದ್ಯದಲ್ಲೇ ನವವಿವಾಹಿತರಿಗೆ ಸಂತಸದ ಸುದ್ದಿ ಬರಲಿದೆ. ನೀವು ಕೆಲಸದಲ್ಲಿ ಬದಲಾವಣೆಗಳನ್ನು ಗಮನಿಸಬಹುದು. ಇದು ಅನುಕೂಲಕರ ಪರಿಣಾಮಗಳನ್ನು ಉಂಟುಮಾಡಬಹುದು. ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ನಿಮ್ಮ ಸಂವಹನ ಯಾವಾಗಲೂ ಸ್ನೇಹಪರವಾಗಿರುವಂತೆ ನೋಡಿಕೊಳ್ಳಿ. ಅನಿರೀಕ್ಷಿತ ದೂರ ಪ್ರಯಾಣ ಒದಗಿ ಬರುತ್ತದೆ. ಕೆಲಸ ಕಾರ್ಯಗಳು ನಿಧಾನ.

12. ಮೀನ ರಾಶಿ: ವ್ಯಾಪಾರದಲ್ಲಿ ಅಪಾಯ ಎದುರಾಗಬಹುದು. ಉತ್ತಮ ಆಲೋಚನೆಯಿಂದ ಯಶಸ್ಸನ್ನು ಪಡೆಯುತ್ತೀರಿ. ವಾಣಿಜ್ಯ ವ್ಯವಹಾರಗಳು ಮತ್ತು ಪಾಲುದಾರಿಕೆಗಳಿಗಾಗಿ ಹೊಚ್ಚ ಹೊಸ ಅವಕಾಶಗಳನ್ನು ಪಡೆಯಿರಿ. ಗುರುಬಲ ಇದೆ. ಒಂದು ಒಳ್ಳೆಯ ಸುದ್ದಿ ನಿಮ್ಮನ್ನು ಹುಡುಕಿ ಬರುತ್ತದೆ. ವಿವಾಹ ಯೋಗ ಕೂಡಿ ಬರಬಹುದು. ಧನಾಗಮನ ಚೆನ್ನಾಗಿದೆ. ಆದರೆ ಖರ್ಚು ವಿಪರೀತ ಇರುತ್ತದೆ. ವಿದ್ಯಾರ್ಥಿಗಳಿಗೆ ಶುಭ. ವೃತ್ತಿಯಲ್ಲಿ ಪ್ರಶಂಸೆ ಇದೆ. ಧನಲಾಭವಿದೆ. ಸರ್ಕಾರದಿಂದ ಲಾಭ ಇದೆ. ಆದರೆ ಅನಿರೀಕ್ಷಿತ ಸಮಸ್ಯೆಗಳಿಂದ ಗಲಿಬಿಲಿಗೆ ಒಳಗಾಗುವ ಸಾಧ್ಯತೆ ಇದೆ.