ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಹೌಸ್ಲಾ 2.0 ಅಭಿಯಾನಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಕನ್ನಡರ್ರಭವಾರ್ತೆ ಬೆಂಗಳೂರು: ಕೋಟಕ್ ಮಹೀಂದ್ರಾ ಬ್ಯಾಂಕ್, ತನ್ನ ಬಹುದೊಡ್ಡ ಬ್ರ್ಯಾಂಡ್ ಅಭಿಯಾನದ ಎರಡನೇ ಆವೃತ್ತಿಯಾದ ಹೌಸ್ಲಾ 2.0ಗೆ ಅದ್ಧೂರಿ ಚಾಲನೆ ನೀಡಿದೆ. ಕಳೆದ ವರ್ಷ ಬ್ಯಾಂಕ್ ಯಶಸ್ವಿಯಾಗಿ ಹಮ್ಮಿಕೊಂಡಿದ್ದ ಹೌಸ್ಲಾ ಹೈ ತೋ ಹೋ ಜಾಯೇಗಾ (ಧೈರ್ಯವಿದ್ದರೆ ಎಲ್ಲವೂ ಸಾಧ್ಯ) ಎಂಬ ತತ್ವದ ಮುಂದುವರಿದ ಭಾಗವಾಗಿ ಈ ನೂತನ ಯೋಜನೆಯನ್ನು ರೂಪಿಸಲಾಗಿದೆ.

ಕೋಟಕ್ ಬ್ಯಾಂಕ್ ಕಳೆದ 2025ರಲ್ಲಿ ಈ ಅಭಿಯಾನಕ್ಕೆ ನಾಂದಿ ಹಾಡಿದಾಗ, ಅದು ಆಧುನಿಕ ಭಾರತದ ಅದಮ್ಯ ಚೇತನ ಮತ್ತು ಜನರ ಮಹತ್ವಾಕಾಂಕ್ಷೆಯನ್ನು ಬಿಂಬಿಸುವಂತೆ ಮೂಡಿಬಂದಿತ್ತು. ಇಂದು ದೇಶದ ಪ್ರಗತಿಯಲ್ಲಿ ಜನರ ಆಶೋತ್ತರಗಳೇ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿವೆ. ಪ್ರಸ್ತುತ ಭಾರತದ ವಿವಿಧ ವೃತ್ತಿರಂಗ, ಮಹಾನಗರಗಳು ಹಾಗೂ ಯುವ ಪೀಳಿಗೆಯು ಹಿಂದಿನ ತಲೆಮಾರುಗಳು ಊಹಿಸಲೂ ಸಾಧ್ಯವಾಗದಂತಹ ಬೃಹತ್ ಕನಸುಗಳನ್ನು ಕಾಣುತ್ತಿವೆ. ಯುವ ಭಾರತದ ಇಂತಹ ಉನ್ನತ ಗುರಿ ಹಾಗೂ ಧೈರ್ಯದ ಹೆಜ್ಜೆಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಕೋಟಕ್ ಬ್ಯಾಂಕ್ ಈ ಮಹತ್ವದ ಹೆಜ್ಜೆಯನ್ನಿಟ್ಟಿದೆ.ಹೌಸ್ಲಾ 2.0 ಅಭಿಯಾನದ ಮೂಲಕ ಕೋಟಕ್ ಬ್ಯಾಂಕ್, ಸಾರ್ವಜನಿಕರು ಈಗಾಗಲೇ ಹೊಂದಿರುವ ಕನಸುಗಳನ್ನು ಬೆನ್ನಟ್ಟಲು ಅಗತ್ಯವಿರುವ ಧೈರ್ಯ ಮತ್ತು ಅಚಲ ನಂಬಿಕೆಯ ಬಗ್ಗೆ ಮಾತನಾಡುತ್ತದೆ. ಇಂದು ದೇಶದಲ್ಲಿ ಮಹತ್ವಾಕಾಂಕ್ಷೆಗಳಿಗೆ ಕೊರತೆಯಿಲ್ಲ, ಆದರೆ ಆ ಆಶೋತ್ತರಗಳು ಸಾರ್ಥಕ ಪ್ರಗತಿಯಾಗಿ ಬದಲಾಗಬೇಕಾದರೆ ಅವುಗಳನ್ನು ಕಾರ್ಯರೂಪಕ್ಕೆ ತರುವ ಧೈರ್ಯ ಬೇಕಾಗುತ್ತದೆ. ಜನರಿಗೆ ಇನ್ನೂ ದೊಡ್ಡ ಕನಸುಗಳ ಅಗತ್ಯವಿಲ್ಲ, ಬದಲಿಗೆ ಇರುವ ಕನಸುಗಳನ್ನು ಸಾಕಾರಗೊಳಿಸುವ ಧೈರ್ಯ ಮತ್ತು ದೃಢ ವಿಶ್ವಾಸದ ಅಗತ್ಯವಿದೆ ಎಂಬುದು ಕೋಟಕ್‌ ನ ಆಶಯವಾಗಿದೆ. ಈ ನಿಟ್ಟಿನಲ್ಲಿ, ಹೌಸ್ಲಾ ಎಂಬುದು ಕೇವಲ ಆಸೆಯಾಗಿ ಉಳಿಯದೆ ಅದನ್ನು ಕಾರ್ಯರೂಪಕ್ಕೆ ತರುವ ಒಂದು ಪ್ರಮುಖ ಸೇತುವೆಯಾಗಿದೆ.ಈ ವಿಶೇಷ ಅಭಿಯಾನದ ಕುರಿತು ಮಾತನಾಡಿದ ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ಬಿಸಿನೆಸ್ ಬ್ಯಾಂಕಿಂಗ್ ಮುಖ್ಯಸ್ಥ ಹಾಗೂ ಚೀಫ್ ಮಾರ್ಕೆಟಿಂಗ್ ಆಫೀಸರ್ ರೋಹಿತ್ ಭಾಸಿನ್ ಅವರು, ‘ಕೋಟಕ್ ಸಂಸ್ಥೆಯು ಜನರ ಮಹತ್ವಾಕಾಂಕ್ಷೆಗಳಿಗೆ ಸದಾ ಆರ್ಥಿಕ ಭದ್ರತೆ ನೀಡುತ್ತದೆ. ಉದ್ಯಮ ರಂಗದಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಪ್ರಗತಿಯ ಗುರಿ ಹೊಂದಿರುವವರ ಕಠಿಣ ಸವಾಲುಗಳಿಗೆ ಬೆಂಬಲ ನೀಡಲು ನಾವು ಬಯಸುತ್ತೇವೆ. ಏಕೆಂದರೆ, ಇಂತಹ ಸಾಹಸೀ ನಿರ್ಧಾರಗಳೇ ಭವಿಷ್ಯದಲ್ಲಿ ಅರ್ಥಪೂರ್ಣವಾದದ್ದನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುತ್ತವೆ. ಭಾರತೀಯರು ತಮ್ಮ ಬೃಹತ್ ಆಲೋಚನೆಗಳು ಸಾಕಾರಗೊಳ್ಳುವುದನ್ನು ನೋಡಲು ಬಯಸುತ್ತಾರೆ. ಆದರೆ, ಅದನ್ನು ಕಾರ್ಯಗತಗೊಳಿಸುವ ಮುನ್ನ ಕಾಡುವ ಸಣ್ಣ ಹಿಂಜರಿಕೆಯೇ ಅವರ ಪ್ರಗತಿಗೆ ಅಡ್ಡಿಯಾಗುತ್ತದೆ. ಗ್ರಾಹಕರು ಆ ಹಿಂಜರಿಕೆಯನ್ನು ಮೆಟ್ಟಿ ನಿಂತು, ತಮ್ಮ ಆಲೋಚನೆಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡಲು ನಾವು ಅವರಿಗೆ ಸಹಾಯ ಮಾಡಲಿದ್ದೇವೆ. ನಿಮ್ಮಲ್ಲಿ ವಿಭಿನ್ನ ಅಥವಾ ಅಸಾಧ್ಯವೆನಿಸುವ ಕನಸುಗಳಿದ್ದರೆ, ಅದನ್ನು ನನಸಾಗಿಸಲು ನಾವು ನಿಮಗೆ ಬೆಂಬಲ ನೀಡಲಿದ್ದೇವೆ’ ಎಂದು ಹೇಳಿದರು.