ಯಮಹಾ ಬೈಕ್‌ ಪ್ರೇಮಿಗಳಿಗಾಗಿ ಹೊಸ ಬ್ಲ್ಕೂಸ್ಕ್ವೇರ್‌ ಶೋರೂಮ್‌ ಆರಂಭ

| Published : Dec 04 2024, 12:32 AM IST

ಸಾರಾಂಶ

ಬೆಂಗಳೂರಿನಲ್ಲಿ ಯಮಹಾ ಬೈಕ್‌ಗೆ ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವುದನ್ನು ಮತ್ತು ರೈಡಿಂಗ್ ಸಮೂಹ ಬೆಳೆಯುವುದನ್ನು ಗಮನಿಸಿ ಯಮಹಾ ಹೊಸ ಎರಡು ಬ್ಲೂಸ್ಕ್ವೇರ್ ಶೋರೂಮ್‌ಗಳನ್ನು ಆರಂಭಿಸಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಬೆಂಗಳೂರಿನ ಯಮಹಾ ಬೈಕ್ ಪ್ರೇಮಿಗಳಿಗೆ ಯಮಹಾ ಕಂಪನಿ ಸಂತೋಷ ಒದಗಿಸಿದೆ. ಗ್ರಾಹಕರ ಬೇಡಿಕೆಯನ್ನು ಪೂರೈಸುವ ಸಲುವಾಗಿ ಬೆಂಗಳೂರಿನಲ್ಲಿ ಎರಡು ಹೊಸ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಆರಂಭಿಸಿದೆ. ಒಂದು ಶೋರೂಮ್‌ ಬೊಮ್ಮನಹಳ್ಳಿಯಲ್ಲಿ ಮೋಟೋ ವರ್ಲ್ಡ್ ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸಲಿದ್ದು, ಇನ್ನೊಂದು ಮಾರತಹಳ್ಳಿಯಲ್ಲಿ ಪನಾಚೆ ಎಂಟರ್‌ ಪ್ರೈಸಸ್ ಹೆಸರಿನಲ್ಲಿ ಕಾರ್ಯಾರಂಭ ಮಾಡಿದೆ.

ಯಮಹಾ ಬ್ಲೂ ಸ್ಕ್ವೇರ್‌ ಶೋರೂಮ್‌ಗಳ ಮೂಲಕ ತನ್ನ ಬೈಕ್‌ಗಳ ಮಾರಾಟ, ಸರ್ವೀಸ್ ಸೌಲಭ್ಯಗಳನ್ನು ಮಾತ್ರವೇ ಒದಗಿಸುವುದಿಲ್ಲ, ಜೊತಗೆ ಯಮಹಾ ರೈಡರ್‌ಗಳ ಸಮೂಹವನ್ನು ಜೊತೆಗೂಡಿಸುತ್ತದೆ. ಯಮಹಾದ ರೇಸ್‌ ಪರಂಪರೆಯನ್ನು ಹೊಸ ಪೀಳಿಗೆಗೆ ಸಾರುವ ಕೆಲಸ ಮಾಡುತ್ತದೆ.

ಇದೀಗ ಕರ್ನಾಟಕದಲ್ಲಿರುವ ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳ ಸಂಖ್ಯೆ 33ಕ್ಕೆ ಏರಿದೆ. ಬೆಂಗಳೂರಿನಲ್ಲಿಯೇ ಒಟ್ಟು 19 ಬ್ಲೂಸ್ಕ್ವೇರ್ ಶೋರೂಮ್‌ಗಳಿರುವುದು ಗಮನಾರ್ಹ.ಯಮಹಾದ ಪ್ರೀಮಿಯಂ ಮೋಟಾರ್‌ ಸೈಕಲ್‌ ಗಳು, ಸ್ಕೂಟರ್‌ಗಳು, ಯಮಹಾದ ಒರಿಜಿನಲ್ ಪರಿಕರಗಳು, ರೈಡಿಂಗ್ ಗೇರ್‌ಗಳನ್ನು ಇಲ್ಲಿ ಪಡೆಯಬಹುದು.