ಬಿಬಿಎಂಪಿಯ ವ್ಯಾಪ್ತಿಯಲ್ಲಿ 2024-25ನೇ ಸಾಲಿನ ದುಪ್ಪಟ್ಟು ದಂಡದ ಎಚ್ಚರಿಕೆಗೂ ಕ್ಯಾರೇ ಎನ್ನದ ಸುಸ್ತಿದಾರರು!

| N/A | Published : Mar 24 2025, 01:19 AM IST / Updated: Mar 24 2025, 05:12 AM IST

ಬಿಬಿಎಂಪಿಯ ವ್ಯಾಪ್ತಿಯಲ್ಲಿ 2024-25ನೇ ಸಾಲಿನ ದುಪ್ಪಟ್ಟು ದಂಡದ ಎಚ್ಚರಿಕೆಗೂ ಕ್ಯಾರೇ ಎನ್ನದ ಸುಸ್ತಿದಾರರು!
Share this Article
  • FB
  • TW
  • Linkdin
  • Email

ಸಾರಾಂಶ

ಬಿಬಿಎಂಪಿಯ ವ್ಯಾಪ್ತಿಯಲ್ಲಿ 2024-25ನೇ ಸಾಲಿನ ಆರ್ಥಿಕ ವರ್ಷ ಮುಕ್ತಾಯಕ್ಕೆ ಕೆಲವೇ ದಿನ ಉಳಿದಿದ್ದರೂ ಇನ್ನೂ 3.49 ಲಕ್ಷ ಆಸ್ತಿ ಮಾಲೀಕರು ಬರೋಬ್ಬರಿ ₹390 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

 ಬೆಂಗಳೂರು : ಬಿಬಿಎಂಪಿಯ ವ್ಯಾಪ್ತಿಯಲ್ಲಿ 2024-25ನೇ ಸಾಲಿನ ಆರ್ಥಿಕ ವರ್ಷ ಮುಕ್ತಾಯಕ್ಕೆ ಕೆಲವೇ ದಿನ ಉಳಿದಿದ್ದರೂ ಇನ್ನೂ 3.49 ಲಕ್ಷ ಆಸ್ತಿ ಮಾಲೀಕರು ಬರೋಬ್ಬರಿ ₹390 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 20.5 ಲಕ್ಷ ಆಸ್ತಿಗಳಿದ್ದು, ಈ ಪೈಕಿ 3.49 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಯಲ್ಲಿ ಸುಸ್ತಿದಾರರಾಗಿದ್ದಾರೆ. ಇದರಲ್ಲಿ 1.73 ಆಸ್ತಿ ಮಾಲೀಕರು ದೀರ್ಘಕಾಲದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ, 1.76 ಲಕ್ಷ ಆಸ್ತಿ ಮಾಲೀಕರು ಪ್ರಸ್ತುತ ವರ್ಷದ ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ.

ಆಸ್ತಿ ತೆರಿಗೆಯನ್ನು ಪಾವತಿಸದವರಿಗೆ ನೋಟಿಸ್‌ಗಳು, ಮೊಬೈಲ್‌ ಮೆಸೇಜ್‌, ಐವಿಆರ್‌ಎಸ್ ಕರೆಗಳು, ವೈಯಕ್ತಿಕ ಕರೆಗಳು, ಮುಟ್ಟುಗೋಲು ನೋಟೀಸ್‌ಗಳು ಕಳುಹಿಸಿದರೂ ಸುಸ್ತಿದಾರರನ್ನು ತೆರಿಗೆ ಪಾವತಿಸಿಲ್ಲ. ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಒನ್ ಟೈಮ್ ಸೆಟಲ್‌ಮೆಂಟ್‌’ (ಒಟಿಎಸ್‌) ಲಾಭ ಪಡೆಯುವುದಕ್ಕೆ ಅವಕಾಶ ನೀಡಿದರೂ ಆಸ್ತಿ ತೆರಿಗೆ ಪಾವತಿ ಮಾಡದೇ ಸುಸ್ತಿ ಬಾಕಿ ಉಳಿಸಿಕೊಂಡಿದ್ದಾರೆ.

2 ವರ್ಷದಿಂದ ತೆರಿಗೆ ಬಾಕಿ: ಏ.1ರಿಂದ ಶೇ.100 ದಂಡ

ಏಪ್ರಿಲ್‌ ನಿಂದ ಎಲ್ಲ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶೇಕಡ 100ರಷ್ಟು ದಂಡ ವಿಧಿಸುವುದಿಲ್ಲ. ಆದರೆ ಸುಮಾರು ಎರಡು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 1.73 ಲಕ್ಷ ಆಸ್ತಿ ಮಾಲೀಕರಿಗೆ ಮಾತ್ರ ಆಸ್ತಿ ತೆರಿಗೆ ಬಾಕಿಗೆ ಸಮನಾಗಿ ದಂಡ ವಿಧಿಸಲಾಗುತ್ತದೆ. 2023-24 ಹಾಗೂ 2024-25ರ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರೆಗೆ ಶೇ.15ರಷ್ಟು ದಂಡ ವಿಧಿಸಲಾಗುತ್ತದೆ.