ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಥಣಿಸಂದ್ರ, ಸರ್ಜಾಪುರ ಆಸ್ತಿ ಮೌಲ್ಯ ಭಾರಿ ಏರಿಕೆ

| N/A | Published : Mar 23 2025, 01:30 AM IST / Updated: Mar 23 2025, 07:32 AM IST

ಸಾರಾಂಶ

ಬೆಂಗಳೂರು ಜಾಗತಿಕವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಇದರ ಭಾಗವಾಗಿ ನಗರದ ಥಣಿಸಂದ್ರ ರಸ್ತೆಯ ಸುತ್ತಮುತ್ತಲಿನ ಆಸ್ತಿ ಮೌಲ್ಯವು 3 ವರ್ಷದಲ್ಲಿ ಶೇ.67ರಷ್ಟು ಹೆಚ್ಚಾಗಿದೆ. 

ನವದೆಹಲಿ: ಬೆಂಗಳೂರು ಜಾಗತಿಕವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಇದರ ಭಾಗವಾಗಿ ನಗರದ ಥಣಿಸಂದ್ರ ರಸ್ತೆಯ ಸುತ್ತಮುತ್ತಲಿನ ಆಸ್ತಿ ಮೌಲ್ಯವು 3 ವರ್ಷದಲ್ಲಿ ಶೇ.67ರಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಸರ್ಜಾಪುರ ರಸ್ತೆ ಬಳಿಯೂ ಆಸ್ತಿ ಮೌಲ್ಯವು ಈ ಅವಧಿಯಲ್ಲಿ ಶೇ.63ರಷ್ಟು ಹೆಚ್ಚಳವಾಗಿದೆ ಎಂದು ‘ಅನರಾಕ್‌’ ಸಂಸ್ಥೆ ವರದಿ ಹೇಳಿದೆ.

ಅನರಾಕ್‌ ಎಂಬುದು ರಿಯಲ್‌ ಎಸ್ಟೇಟ್‌ ಕನ್ಸಲ್‌ಟೆಂಟ್‌ ಆಗಿದ್ದು, ತನ್ನ ವರದಿಯಲ್ಲಿ ಮಾಹಿತಿ ಬಿಡುಗಡೆ ಮಾಡಿದೆ. ಕಳೆದ 3 ವರ್ಷದಲ್ಲಿ ಥಣಿಸಂದ್ರ ಮುಖ್ಯರಸ್ತೆ ಸುತ್ತಲು ಮನೆಯ ಬೆಲೆಯು ಚದರಡಿಗೆ ₹5345 ಇದ್ದ ಬೆಲೆಯು 2024ರ ಕೊನೆಗೆ ₹8900ಕ್ಕೆ ಏರಿಕೆಯಾಗಿದೆ. ಅದೇ ರೀತಿ ಸರ್ಜಾಪುರ ರಸ್ತೆಯಲ್ಲಿ ಚದರಡಿಗೆ ₹6050 ರಿಂದ ₹9850ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಬಾಡಿಗೆ ಕೂಡ ಏರಿಕೆ:

ಮತ್ತೊಂದೆಡೆ ಬಾಡಿಗೆ ದರದಲ್ಲಿಯೂ ಎರಡೂ ಪ್ರದೇಶದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಥಣಿಸಂದ್ರ ಮುಖ್ಯರಸ್ತೆ ಭಾಗದಲ್ಲಿ ಸರಾಸರಿ ತಿಂಗಳ ಬಾಡಿಗೆಯು ₹20,500 ರಿಂದ ₹33,200ಕ್ಕೆ ಜಿಗಿದಿದ್ದು, ಇದು ಶೇ.62ರಷ್ಟು ಏರಿಕೆಯಾಗಿದೆ. ಇನ್ನು ಸರ್ಜಾಪುರ ರಸ್ತೆಯಲ್ಲಿ ಬಾಡಿಗೆ ಶೇ.76ರಷ್ಟು ಹೆಚ್ಚಳವಾಗಿದ್ದು, ₹21,000 ದಿಂದ ₹36,900ಕ್ಕೆ ಏರಿಕೆಯಾಗಿದೆ ಎಂದು ಅನರಾಕ್‌ ಹೇಳಿದೆ.