ಬೆಂಗಳೂರಿನ ಐದು ಪಾಲಿಕೆ 368 ವಾರ್ಡ್‌ಗಳ ನಕ್ಷೆ ವೆಬ್‌ಸೈಟ್‌ನಲ್ಲಿ ಬಿಡುಗಡೆ

| N/A | Published : Oct 03 2025, 02:00 AM IST / Updated: Oct 03 2025, 03:24 AM IST

Greater bengaluru
ಬೆಂಗಳೂರಿನ ಐದು ಪಾಲಿಕೆ 368 ವಾರ್ಡ್‌ಗಳ ನಕ್ಷೆ ವೆಬ್‌ಸೈಟ್‌ನಲ್ಲಿ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ರಚಿಸಲಾಗಿರುವ ಐದು ನಗರ ಪಾಲಿಕೆಗಳ 368 ವಾರ್ಡ್‌ಗಳ ನಕ್ಷೆಯನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ನಗರ ಪಾಲಿಕೆ ಹಾಗೂ ವಿಧಾನಸಭಾ ಕ್ಷೇತ್ರವಾರು ವಾರ್ಡ್‌ ನಕ್ಷೆ ವೀಕ್ಷಿಸಬಹುದಾಗಿದೆ.

 ಬೆಂಗಳೂರು :  ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ರಚಿಸಲಾಗಿರುವ ಐದು ನಗರ ಪಾಲಿಕೆಗಳ 368 ವಾರ್ಡ್‌ಗಳ ನಕ್ಷೆಯನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ನಗರ ಪಾಲಿಕೆ ಹಾಗೂ ವಿಧಾನಸಭಾ ಕ್ಷೇತ್ರವಾರು ವಾರ್ಡ್‌ ನಕ್ಷೆ ವೀಕ್ಷಿಸಬಹುದಾಗಿದೆ.

ಸೆ.30ಕ್ಕೆ ರಾಜ್ಯ ಸರ್ಕಾರವು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ರಚಿಸಲಾದ ಐದು ನೂತನ ನಗರ ಪಾಲಿಕೆಗಳ ಕರಡು ವಾರ್ಡ್‌ ವಿಂಗಡಣೆಯ ಅಧಿಸೂಚನೆ ಹೊರಡಿಸಿ 15 ದಿನ ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶ ನೀಡಿದೆ.

ಈ ಕುರಿತು ಪ್ರತಿ ವಾರ್ಡ್‌ ನಕ್ಷೆಯನ್ನು https://bbmp.gov.in/gba-corporations-delimitation-2025/index.html ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ತಮ್ಮ ನಗರ ಪಾಲಿಕೆ ಆಯ್ಕೆ ಮಾಡಿಕೊಂಡು, ಬಳಿಕ ವಿಧಾನಸಭಾ ಕ್ಷೇತ್ರವಾರು ವಾರ್ಡ್‌ ನಕ್ಷೆ ವೀಕ್ಷಣೆ ಮಾಡಬಹುದಾಗಿದೆ. ಜತೆಗೆ, ವಾರ್ಡ್‌ ನಕ್ಷೆಯಲ್ಲಿ ವಾರ್ಡ್‌ನ ಗಡಿ, ವಾರ್ಡ್‌ನಲ್ಲಿ ಹಾದು ಹೋಗುವ ರಸ್ತೆ, ಹೆದ್ದಾರಿ, ಮುಖ್ಯ ರಸ್ತೆ, ರೈಲ್ವೆ ಹಳಿ, ರಾಜಕಾಲುವೆ ಹಾಗೂ ಪಾರ್ಕ್‌ ಹೀಗೆ ವಿವಿಧ ಪ್ರಮುಖ ಅಂಶಗಳನ್ನು ಗುರುತಿಸಲಾಗಿದೆ.

ಈ ಕುರಿತು ಆಕ್ಷೇಪಣೆಗಳಿದ್ದರೆ, ಸಾರ್ವಜನಿಕರು ತಮ್ಮ ಹೆಸರು, ವಿಳಾಸ, ಸಹಿಯೊಂದಿಗೆ ವಿಕಾಸಸೌಧದ 4ನೇ ಮಹಡಿಯಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಚೇರಿ (ಕೊಠಡಿ ಸಂಖ್ಯೆ-436) ಅ.15ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದಾಗಿದೆ.

ಪಾಲಿಕೆ, ವಿಧಾನಸಭಾ ಕ್ಷೇತ್ರ ವಾರು ವಾರ್ಡ್‌ ಸಂಖ್ಯೆ ಪಟ್ಟಿ 

ಬೆಂಗಳೂರು ಕೇಂದ್ರ ನಗರ ಪಾಲಿಕೆವಿಧಾನಸಭಾ ಕ್ಷೇತ್ರ.. ವಾರ್ಡ್‌ ಸಂಖ್ಯೆ 

ಸಿ.ವಿ.ರಾಮನ್‌ ನಗರ 13 

ಚಾಮರಾಜಪೇಟೆ 10 

ಚಿಕ್ಕಪೇಟೆ 12

ಗಾಂಧಿನಗರ 10 

ಶಾಂತಿನಗರ 10

ಶಿವಾಜಿನಗರ 08 

ಒಟ್ಟು- 63 

ಬೆಂಗಳೂರು ಪೂರ್ವ ನಗರ ಪಾಲಿಕೆವಿಧಾನಸಭಾ ಕ್ಷೇತ್ರ ವಾರ್ಡ್‌ ಸಂಖ್ಯೆ 

ಕೆ.ಆರ್‌.ಪುರ 27 

ಮಹದೇವಪುರ 23

ಒಟ್ಟು- 50

 ಬೆಂಗಳೂರು ಉತ್ತರ ನಗರ ಪಾಲಿಕೆ ವಿಧಾನಸಭಾ ಕ್ಷೇತ್ರ ವಾರ್ಡ್‌ ಸಂಖ್ಯೆ 

ಬ್ಯಾಟರಾಯನಪುರ 14

ದಾಸರಹಳ್ಳಿ 08

ಹೆಬ್ಬಾಳ 11

ಪುಲಕೇಶಿನಗರ 11

ಆರ್‌ಆರ್‌ ನಗರ 05

ಸರ್ವಜ್ಞನಗರ 16

ಯಲಹಂಕ 07

ಒಟ್ಟು- 72 

ಬೆಂಗಳೂರು ದಕ್ಷಿಣ ನಗರ ಪಾಲಿಕೆ

ವಿಧಾನಸಭಾ ಕ್ಷೇತ್ರ ವಾರ್ಡ್‌ ಸಂಖ್ಯೆ 

ಅನೇಕಲ್‌ 01

ಬಿಟಿಎಂ ಲೇಔಟ್‌ 13

ಬೆಂಗಳೂರು ದಕ್ಷಿಣ 19

ಬೊಮ್ಮನಹಳ್ಳಿ 20

ಜಯನಗರ 10

ಮಹದೇವಪುರ 01

ಪದ್ಮನಾಭನಗರ 06

ಆರ್‌ಆರ್‌ನಗರ 01

ಯಶವಂತಪುರ 01

ಒಟ್ಟು- 72

----ಬೆಂಗಳೂರು ಪಶ್ಚಿಮ ನಗರ ಪಾಲಿಕೆವಿಧಾನಸಭಾ ಕ್ಷೇತ್ರ ವಾರ್ಡ್‌ ಸಂಖ್ಯೆ

ಬಸವನಗುಡಿ 10

ದಾಸರಹಳ್ಳಿ 10

ಗೋವಿಂದರಾಜನಗರ 13

ಮಹಾಲಕ್ಷ್ಮಿಲೇಔಟ್‌ 12

ಪದ್ಮನಾಭನಗರ 08

ರಾಜಾಜಿನಗರ 11

ಆರ್‌ಆರ್‌ನಗರ 13

ವಿಜಯನಗರ 13

ಯಶವಂತಪುರ 11

ಒಟ್ಟು- 111

Read more Articles on