ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುಇ-ಖಾತಾ ಅರ್ಜಿ ಸಲ್ಲಿಕೆಯನ್ನು ಇನ್ನಷ್ಟು ಸರಳ ಮತ್ತು ಸುಲಭಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಶೀಘ್ರದಲ್ಲೇ ಇ-ಖಾತಾ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಿದೆ.
ಬೆಂಗಳೂರಿನಲ್ಲಿ ಕಳೆದೊಂದು ವರ್ಷದಿಂದ ತ್ವರಿತವಾಗಿ ಇ-ಖಾತಾ ವಿತರಣೆ ಕಾರ್ಯ ಆರಂಭಿಸಲಾಗಿದ್ದು, ಬೆಂಗಳೂರು ಒನ್ ಕೇಂದ್ರ, ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಸಲು ವೆಬ್ ಆಧಾರಿತ ತಂತ್ರಾಂಶ ರೂಪಿಸಲಾಗಿತ್ತು. ಹೀಗಾಗಿ, ಸಾರ್ವಜನಿಕರು ಕಂಪ್ಯೂಟರ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿತ್ತು. ಇದೀಗ, ಇನ್ನಷ್ಟು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಉದ್ದೇಶದಿಂದ ಇ-ಆಸ್ತಿ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಕೇವಲ 10 ದಿನದಲ್ಲಿ ಈ ಆ್ಯಪ್ ಕಾರ್ಯಾಚರಣೆ ಆರಂಭಿಸಲಿದೆ.ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗುತ್ತಿದೆ. ಆಸ್ತಿ ಮಾಲೀಕರು ಮಾತ್ರವಲ್ಲದೆ ಮಾಲೀಕರ ಪರ ಇತರರು ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮೌನೀಶ್ ಮುನೀಶ್ ಮೌದ್ಗಿಲ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ತಂತ್ರಾಂಶದಲ್ಲಿ ಬದಲಾವಣೆ ಇಲ್ಲ:ಹೊಸ ಇ-ಖಾತಾ ಆ್ಯಪ್‌ನ ತಂತ್ರಾಂಶ ಮತ್ತು ಹಾಲಿ ಇರುವ ವೆಬ್ ಅಪ್ಲಿಕೇಷನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. Eojz, ವೆಬ್ ತಂತ್ರಾಂಶವನ್ನು ಮೊಬೈಲ್ ಆ್ಯಪ್ ಗೆ ಪರಿವರ್ತನೆ ಮಾಡಲಾಗುತ್ತಿದೆ. ಇದರಿಂದ ಮೊಬೈಲ್‌ನಲ್ಲಿ ಇ-ಖಾತಾ ಸಂಬಂಧಿಸಿ ಅರ್ಜಿ ಸಲ್ಲಿಸಲು ಸಹಕಾರಿಯಾಗಲಿದೆ.
ದಿನಕ್ಕೆ 3 ಸಾವಿರ ಖಾತಾ ವಿತರಣೆ:ವೆಬ್ ಅಪ್ಲಿಕೇಷನ್ ಮೂಲಕ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಪೈಕಿ ದಿನಕ್ಕೆ ಸರಾಸರಿ 2 ರಿಂದ 3 ಸಾವಿರ ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ. ಮೊಬೈಲ್ ಇ- ಖಾತಾ ಆ್ಯಪ್ ಕಾರ್ಯಾಚರಣೆ ಆರಂಭಗೊಂಡರೆ ಮತ್ತಷ್ಟು ಮಂದಿ ಅರ್ಜಿ ಸಲ್ಲಿಕೆ ಮಾಡುತ್ತಾರೆ. ಇ-ಖಾತಾ ವಿತರಣಾ ಸಂಖ್ಯೆ ಸಹ ಹೆಚ್ಚಾಗಲಿದೆ ಎಂಬುದು ಕಂದಾಯ ವಿಭಾಗದ ಅಧಿಕಾರಿಗಳ ಲೆಕ್ಕಚಾರವಾಗಿದೆ.
7.50 ಲಕ್ಷ ಇ-ಖಾತಾ ವಿತರಣೆ:ಬೆಂಗಳೂರಿನಲ್ಲಿ 2019ರಿಂದ ಇ-ಖಾತಾ ವಿತರಣೆ ಕಾರ್ಯ ಆರಂಭಿಸಲಾಗಿತ್ತು. 2024ರ ಸೆಪ್ಟಂಬರ್ ವರೆಗೆ ಕೇವಲ 35 ಸಾವಿರ ಇ-ಖಾತಾ ವಿತರಣೆ ಮಾಡಲಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಇ-ಖಾತಾ ವಿತರಣೆ ಚುರುಕುಗೊಳಿಸಲಾಯಿತು. ಕಳೆದೊಂದು ವರ್ಷದಲ್ಲಿ ಬರೋಬ್ಬರಿ 7,47,772 ಅಂತಿಮ ಇ-ಖಾತಾ ವಿತರಣೆ ಮಾಡಲಾಗಿದೆ.ನಗರದಲ್ಲಿ ಸುಮಾರು 25 ಲಕ್ಷ ಆಸ್ತಿಗಳಿದ್ದು, ಈಗಾಗಲೇ 24 ಲಕ್ಷಕ್ಕೂ ಅಧಿಕ ಆಸ್ತಿಗಳ ಕರಡು ಇ-ಖಾತಾಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಪೈಕಿ ಈವರೆಗೆ 15 ಲಕ್ಷಕ್ಕೂ ಅಧಿಕ ಕರಡು ಇ-ಖಾತಾಗಳನ್ನು ಆಸ್ತಿ ಮಾಲೀಕರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅಂತಿಮ ಇ-ಖಾತಾ ಪಡೆಯಲು 7,59,290 ಅರ್ಜಿ ಸಲ್ಲಿಕೆಯಾಗಿದೆ.
ಅಂತಿಮ ಇ-ಖಾತಾ ಅರ್ಜಿಗೆ ಬೇಕಿರುವ ದಾಖಲೆಗಳುಆಸ್ತಿ ಮಾರಾಟ ಕರಾರು ಸಂಖ್ಯೆ
ಆಸ್ತಿ ತೆರಿಗೆ ರಸೀದಿಮಾಲೀಕರ ಆಧಾರ್ ಸಂಖ್ಯೆ
ಮಾಲೀಕರ ಮೊಬೈಲ್ ಸಂಖ್ಯೆಆಸ್ತಿಯ ಇಸಿ (ಫಾರಂ-15)
ಆಸ್ತಿಯ ಫೋಟೋಆಸ್ತಿ ಲೊಕೇಷನ್
ಬೆಸ್ಕಾಂ ಬಿಲ್ ಸಂಖ್ಯೆ