ಆ್ಯಂಟಿ- ಡಯಾಬಿಟಿಕ್ ಔಷಧಿಗಳ ವಿತರಣೆಗೆ ಎಂಎಸ್‌ಡಿ ಮತ್ತು ಅಬಾಟ್ ಪಾಲುದಾರಿಕೆ

| N/A | Published : Jun 22 2025, 11:47 PM IST / Updated: Jun 23 2025, 04:46 AM IST

ಆ್ಯಂಟಿ- ಡಯಾಬಿಟಿಕ್ ಔಷಧಿಗಳ ವಿತರಣೆಗೆ ಎಂಎಸ್‌ಡಿ ಮತ್ತು ಅಬಾಟ್ ಪಾಲುದಾರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಎಂಎಸ್‌ಡಿ ಸಂಸ್ಥೆಯ ಆ್ಯಂಟಿ- ಡಯಾಬಿಟಿಕ್ ಔಷಧಗಳನ್ನು ವಿತರಣೆಗಾಗಿ ಅಬಾಟ್ ಮತ್ತು ಎಂಎಸ್‌ಡಿ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಗಳು ಪಾಲುದಾರಿಕೆ ಮಾಡಿಕೊಂಡಿವೆ. ಈ ಕುರಿತ ವಿವರಗಳು ಇಲ್ಲಿವೆ.

ಬೆಂಗಳೂರು : ಎಂಎಸ್‌ಡಿಯ ಮೌಖಿಕವಾಗಿ ಸೇವಿಸುವ ಆ್ಯಂಟಿ- ಡಯಾಬಿಟಿಕ್ ಔಷಧವಾದ ಸಿಟಾಗ್ಲಿಪ್ಟಿನ್, ಇದರ ಸಂಯೋಜನೆಯಾದ ಸಿಟಾಗ್ಲಿಪ್ಟಿನ್/ಮೆಟ್‌ಫಾರ್ಮಿನ್ ಔಷಧ ವಿತರಣೆಗಾಗಿ ಅಬಾಟ್ ಮತ್ತು ಎಂಎಸ್‌ಡಿ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಗಳು ಪಾಲುದಾರಿಕೆ ಮಾಡಿಕೊಂಡಿದೆ.

ಈ ಒಪ್ಪಂದದಡಿಯಲ್ಲಿ ಅಬಾಟ್ ಸಂಸ್ಥೆಯು ತನ್ನ ದೇಶವ್ಯಾಪಿ ಇರುವ ತನ್ನ ವ್ಯಾಪಕ ಜಾಲವನ್ನು ಬಳಸಿಕೊಂಡು ಈ ಔಷಧಿಗಳನ್ನು ಭಾರತದ ಜನರಿಗೆ ಲಭ್ಯವಾಗುವಂತೆ ಮಾಡಲಿದೆ. ಎಂಎಸ್‌ಡಿಯ ಸಿಟಾಗ್ಲಿಪ್ಟಿನ್, ಇದರ ಸಂಯೋಜನೆ ಮತ್ತು ವಿಸ್ತೃತ-ಬಿಡುಗಡೆ ಆವೃತ್ತಿಗಳನ್ನು ಜನುವಿಯಾ®, ಜನುಮೆಟ್® ಮತ್ತು ಜನುಮೆಟ್® ಎಕ್ಸ್‌ ಆರ್ ಬ್ರ್ಯಾಂಡ್‌ ಗಳಡಿಯಲ್ಲಿ ಮಾರಾಟ ಮಾಡಲಾಗುತ್ತದೆ.

ಸಿಟಾಗ್ಲಿಪ್ಟಿನ್ ಒಂದು ಡಿಪಿಪಿ4ಐ ಅಥವಾ ಡೈಪೆಪ್ಟಿಡಿಲ್ ಪೆಪ್ಟಿಡೇಸ್ IV ಇನ್ಹಿಬಿಟರ್ ಆಗಿದ್ದು, ಟೈಪ್ 2 ಡಯಾಬಿಟಿಸ್ ಚಿಕಿತ್ಸೆಗೆ ಬಳಸಲಾಗುತ್ತದೆ. ಎಂಎಸ್‌ಡಿ ಫಾರ್ಮಾಸ್ಯೂಟಿಕಲ್ಸ್ ಇದನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದೆ ಮತ್ತು 2008 ರಲ್ಲಿ ಭಾರತದಲ್ಲಿ ಮೊದಲ ಡಿಪಿಪಿ4ಐ ಆಗಿ ಬಿಡುಗಡೆಗೊಂಡಿತ್ತು. ಈ ಪೋರ್ಟ್‌ಫೋಲಿಯೊ ಅಡಿಯಲ್ಲಿರುವ ಬ್ರ್ಯಾಂಡ್‌ಗಳು, ಪ್ರತ್ಯೇಕತೆಯನ್ನು ಕಳೆದುಕೊಂಡ ನಂತರವೂ, ವರ್ಗದಲ್ಲಿ ಮುಂಚೂಣಿಯಲ್ಲಿವೆ.

ಭಾರತದಲ್ಲಿ ಕನಿಷ್ಠ 60 ಪ್ರತಿಶತ ಮರಣಗಳು ಸಾಂಕ್ರಾಮಿಕವಲ್ಲದ ರೋಗಗಳಿಂದ ಸಂಭವಿಸುತ್ತವೆ. ಇವುಗಳಲ್ಲಿ ಡಯಾಬಿಟೀಸ್, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಕ್ಯಾನ್ಸರ್ ಪ್ರಮುಖ ಕಾರಣಗಳಾಗಿವೆ. ದೇಶದಲ್ಲಿ ಸುಮಾರು 101 ಮಿಲಿಯನ್ ಜನರು ಡಯಾಬಿಟೀಸ್‌ನಿಂದ ಬಳಲುತ್ತಿದ್ದಾರೆ. 136 ಮಿಲಿಯನ್ ಜನರು ಪ್ರೀ-ಡಯಾಬಿಟೀಸ್‌ ಹೊಂದಿದ್ದು, ಅವರು ಮುಂದಿನ ದಿನಗಳಲ್ಲಿ ಡಯಾಬಿಟೀಸ್ ಹೊಂದುವ ಸಾಧ್ಯತೆ ಅಧಿಕವಾಗಿದೆ.

ಈ ಕುರಿತು ಮಾತನಾಡಿರುವ ಅಬಾಟ್ ಇಂಡಿಯಾದ ವೈಸ್ ಪ್ರೆಸಿಡೆಂಟ್ ಅಂಬಾಟಿ ವೇಣು ಅವರು, ‘ಭಾರತದ ಅತಿದೊಡ್ಡ ಹೆಲ್ತ್ ಕೇರ್ ಕಂಪನಿಯಾಗಿರುವ ಅಬಾಟ್ ಸಂಸ್ಥೆಯು ಆರೋಗ್ಯ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದ ಹೊರೆಯನ್ನುಂಟುಮಾಡುವ ಸಾಂಕ್ರಾಮಿಕವಲ್ಲದ ರೋಗಗಳಂತಹ ಕೆಲವು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ. 

ನಾವು ಡಯಾಬಿಟೀಸ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುವ ವಿವಿಧ ಉತ್ಪನ್ನಗಳನ್ನು ಒದಗಿಸುತ್ತೇವೆ. ಈ ವಿಭಾಗದಲ್ಲಿ ಪರೀಕ್ಷೆ, ನಿರಂತರ ಗ್ಲೂಕೋಸ್ ಮಾನಿಟರಿಂಗ್, ಪೌಷ್ಟಿಕತೆ ಸೇರಿದಂತೆ ಸಂಪೂರ್ಣ ಡಯಾಬಿಟೀಸ್ ಔಷಧಿಗಳ ಸಂಗ್ರಹವಿದೆ. ನಾವು ಭಾರತದಾದ್ಯಂತ ವ್ಯಾಪಕ ಉಪಸ್ಥಿತಿಯನ್ನು ಹೊಂದಿದ್ದು, ಜನರು ತಮ್ಮ ಟೈಪ್ 2 ಡಯಾಬಿಟೀಸ್ ಅನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ತಮ್ಮ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ನಾವು ಸಹಾಯ ಮಾಡುತ್ತೇವೆ’ ಎಂದು ಹೇಳಿದರು.

ಎಂಎಸ್‌ಡಿ ಇಂಡಿಯಾ ರೀಜನ್‌ನ ವ್ಯವಸ್ಥಾಪಕ ನಿರ್ದೇಶಕ ರೆಹಾನ್ ಎ. ಖಾನ್ ಅವರು ಮಾತನಾಡಿ, ‘17 ವರ್ಷಗಳ ಹಿಂದೆ ಭಾರತದಲ್ಲಿ ಪರಿಚಯಿಸಿದಾಗಿನಿಂದಲೂ ನಮ್ಮ ಸಿಟಾಗ್ಲಿಪ್ಟಿನ್ ಸಂಗ್ರಹವು ದೇಶಾದ್ಯಂತ ಲಕ್ಷಾಂತರ ರೋಗಿಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ವೈದ್ಯರು ಮತ್ತು ರೋಗಿಗಳ ನಂಬಿಕೆಯನ್ನು ಗಳಿಸಿದೆ. ಅಬಾಟ್‌ ಜೊತೆಗಿನ ನಮ್ಮ ಪಾಲುದಾರಿಕೆಯು ಸುಸ್ಥಿರ ವ್ಯಾಪಾರ ಮಾದರಿಯನ್ನು ಹಾಕಿಕೊಡಲಿದ್ದು, ಈ ಪಾಲುದಾರಿಕೆಯು ಭಾರತದಾದ್ಯಂತ ಇರುವ ರೋಗಿಗಳಿಗೆ ಸುಲಭವಾಗಿ ಡಯಾಬಿಟೀಸ್ ಚಿಕಿತ್ಸೆಗಳನ್ನು ಪಡೆಯಲು ನೆರವಾಗುತ್ತದೆ’ ಎಂದು ಹೇಳಿದರು.

Read more Articles on