ಸಾರಾಂಶ
ಭಾರತ, ಅಮೆರಿಕ ಟ್ರೇಡ್ ಡೀಲ್‌ಗೆ ಅಡ್ಡಿಯಾಗಿದೆ ನಾನ್‌ವೆಜ್ ಹಾಲು, ಕುಲಾಂತರಿ! ಹೈನೋತ್ಪನ್ನ, ಕೃಷಿ ಉತ್ಪನ್ನ, ಕುಲಾಂತರಿ ಉತ್ಪನ್ನಗಳ ಆಮದಿಗೆ ಭಾರತ ಬಿಲ್‌ಕುಲ್ ನಕಾರ
ದೇಶದ ಕೃಷಿ ವಲಯ, ಧಾರ್ಮಿಕ ನಂಬಿಕೆ ಕಾಪಾಡಲು ಅಮೆರಿಕಕ್ಕೆ ಭಾರತದ ಸ್ಪಷ್ಟ ರೆಡ್‌ಲೈನ್
ಮೈತ್ರಿ. ಎಸ್
(ಇಂಟ್ರೋ) ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಏರುತ್ತಲೇ ವಿವಿಧ ದೇಶಗಳನ್ನು ಬೆದರಿಸಿ ಅವುಗಳ ಜೊತೆಗೆ ತಮಗೆ ಬೇಕಾದಂತೆ ವ್ಯಾಪಾರ ಒಪ್ಪಂದ ಕುದುರಿಸಿಕೊಳ್ಳುತ್ತಿದ್ದಾರೆ. ಅಮೆರಿಕದ ವಸ್ತುಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಉದ್ದೇಶದ ಈ ಒಪ್ಪಂದಗಳ ಜಾರಿಗೆ ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಷರತ್ತು ಮತ್ತು ಡೆಡ್‌ಲೈನ್ ಮೂಲಕ ಬೆದರಿಕೆಯ ತಂತ್ರ ಪ್ರಯೋಗಿಸಲಾಗುತ್ತಿದೆ. ಹಾಗಿದ್ದರೆ ವ್ಯಾಪಾರ ಒಪ್ಪಂದ ಅಂದರೇನು? ಅವುಗಳ ಅವಶ್ಯಕತೆ ಏನು? 2030ರ ವೇಳೆಗೆ ವಾರ್ಷಿಕ 42 ಲಕ್ಷ ಕೋಟಿ ರು. ಮೊತ್ತದ ವ್ಯಾಪಾರದ ಉದ್ದೇಶವಿರುವ ಭಾರತ- ಅಮೆರಿಕ ಒಪ್ಪಂದ ಅಂತಿಮಗೊಳ್ಳಲು ಎದುರಾಗಿರುವ ಅಡ್ಡಿಗಳೇನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ವ್ಯಾಪಾರ ಒಪ್ಪಂದ ಎಂದರೇನು?
ವ್ಯಾಪಾರ ಒಪ್ಪಂದ ಎನ್ನುವುದು ಎರಡು ದೇಶಗಳ ನಡುವೆ ನಡೆಯುವ ವ್ಯಾಪಾರ ಮತ್ತು ಈ ವೇಳೆ ಒಂದು ದೇಶದ ವಸ್ತುಗಳ ಆಮದಿಗೆ ಇನ್ನೊಂದು ದೇಶ ಎಷ್ಟು ತೆರಿಗೆ ಹಾಕಬಹುದು ಎಂಬುದನ್ನು ಮೊದಲೇ ನಿರ್ಧರಿಸುವ ವಿಧಾನ. ಜೊತೆಗೆ ಯಾವ್ಯಾವ ವಸ್ತುಗಳ ಆಮದಿಗೆ ನಿಷೇಧ ಹೇರಬಹುದು ಎಂಬಿತ್ಯಾದಿ ವಿಷಯಗಳನ್ನೂ ಇದು ಒಳಗೊಂಡಿರುತ್ತದೆ. ಜಾಗತೀಕರಣದಿಂದಾಗಿ ವಿಶ್ವವೇ ಒಂದು ಮಾರುಕಟ್ಟೆಯಾಗಿರುವಾಗ, ಪ್ರತಿಯೊಂದು ದೇಶವು ಒಂದಲ್ಲಾ ಒಂದು ಸರಕು ಅಥವಾ ಸೇವೆಗಾಗಿ ಅನ್ಯ ದೇಶಗಳ ಮೇಲೆ ಅವಲಂಬಿತವಾಗಿರುತ್ತದೆ. ಐತಿಹಾಸಿಕವಾಗಿ, ರಾಜಕೀಯವಾಗಿ ಅಥವಾ ಸೈದ್ಧಾಂತಿಕವಾಗಿ ಭಿನ್ನವಾಗಿದ್ದು, ಬದ್ಧ ವೈರಿಗಳಂತಿರುವ ರಾಷ್ಟ್ರಗಳನ್ನೂ ಬೆಸೆದಿರುವುದು ವ್ಯಾಪಾರ ಎಂಬ ಅಗೋಚರ ಕೊಂಡಿ. ==
ಒಪ್ಪಂದ ಜಾರಿಗೆ ಅಡ್ಡಿಯಾದ ಅಂಶಗಳೇನು? ತನ್ನ ಹೈನೋತ್ಪ್ನನಗಳು, ಕೃಷಿ ಉತ್ಪನ್ನಗಳು ಮತ್ತು ಕುಲಾಂತರಿ ಉತ್ಪನ್ನಗಳ ಆಮದಿಗೆ ಹೇರಿರುವ ನಿಷೇಧವನ್ನು ಭಾರತ ತೆಗೆಯಬೇಕು ಎಂಬುದು ಅಮೆರಿಕದ ಆಗ್ರಹ. ಆದರೆ 140 ಕೋಟಿ ಜನರ ಮೇಲೆ ಪರಿಣಾಮ ಬೀರುವ ಈ ಅಂಶಗಳ ಬಗ್ಗೆ ತಗ್ಗಿ ಬಗ್ಗಿ ನಡೆಯಲು ಸರ್ಕಾರ ನಿರಾಕರಿಸುತ್ತಿದೆ. ದೇಶದ ಆರ್ಥಿಕ, ಸಾಮಾಜಿಕ, ಧಾರ್ಮಿಕ ನಂಬಿಕೆಗಳ ಮೇಲೆ ಪರಿಣಾಮ ಬೀರುವ ಈ ವಿಷಯಗಳ ಬಗ್ಗೆ ತನ್ನ ಬೇಡಿಕೆ ಈಡೇರದ ಹೊರತೂ ಅವುಗಳ ಆಮದಿಗೆ ತಾನು ಒಪ್ಪುವುದಿಲ್ಲ ಎಂಬುದು ಭಾರತದ ಕಠಿಣ ನಿರ್ಧಾರ. ಇದೇ ವಿಷಯ ಇದೀಗ ಒಪ್ಪಂದ ಅಂತಿಮಗೊಳ್ಳಲು ಅಡ್ಡಿಯಾಗಿದೆ. ಇನ್ನೊಂದೆಡೆ ಭಾರತದ ಜವಳಿ, ಆಟೋಮೊಬೈಲ್ ಬಿಡಿಭಾಗ, ಔಷಧ ಉತ್ಪನ್ನಗಳ ಮೇಲೆ ತೆರಿಗೆ ಕಡಿತಕ್ಕೆ ಅಮೆರಿಕ ಹಿಂದುಮುಂದು ನೋಡುತ್ತಿದೆ.
1 ಲಕ್ಷ ಕೋಟಿ ನಷ್ಟ ಮಾಡುವ ಹೈನೋತ್ಪನ್ನಗಳ ಆಮದು
ಭಾರತ ವಿಶ್ವದಲ್ಲೇ ಅತಿದೊಡ್ಡ ಹೈನೋತ್ಪನ್ನಗಳ ಮಾರುಕಟ್ಟೆ. ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ನಂ.1 (ವಾರ್ಷಿಕ 23000 ಕೋಟಿ ಲೀ.) ಸ್ಥಾನದಲ್ಲಿದೆ. ಭಾರತದ ಹೈನೋದ್ಯಮದ ವಾರ್ಷಿಕ ವಹಿವಾಟು 16 ಲಕ್ಷ ಕೋಟಿ ರು.ನಷ್ಟಿದೆ. ಇದು ಒಟ್ಟು ಕೃಷಿ ಜಿಡಿಪಿಯ ಶೇ.25ರಷ್ಟು ಪಾಲಾಗಿದೆ. ಭಾರತದಲ್ಲಿ ಅಂದಾಜು 7-8 ಕೋಟಿ ಜನರು ನೇರವಾಗಿ ಹೈನೋದ್ಯಮ ಅವಲಂಬಿಸಿದ್ದಾರೆ. ಭಾರತದ ಆರ್ಥಿಕತೆಯಲ್ಲಿ ಹೈನೋದ್ಯಮದ ಪಾಲು ಶೇ.5ರಷ್ಟಿದೆ. ಒಂದು ವೇಳೆ ಅಮೆರಿಕದ ಹೈನೋತ್ಪನ್ನಗಳಿಗೆ ಭಾರತಕ್ಕೆ ಅವಕಾಶ ಕೊಟ್ಟರೆ, ಭಾರತದ ಹೈನೋದ್ಯಮಕ್ಕೆ ವಾರ್ಷಿಕ 1 ಲಕ್ಷ ಕೋಟಿ ರು.ನಷ್ಟದ ಆತಂಕವಿದೆ. ಜೊತೆಗೆ ದೇಶದ ಆರ್ಥಿಕತೆಯಾದ ಗ್ರಾಮೀಣ ಕೃಷಿ, ಹೈನೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇವುಗಳನ್ನೇ ನಂಬಿರುವ ಕೋಟ್ಯಂತರ ಬಡಜನರ ಮೇಲೆ ಜೀವನದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಮೊದಲಿನಿಂದಲೂ ಅಮೆರಿಕದ ಹೈನೋತ್ಪನ್ನಗಳ ಮೇಲೆ ಭಾರೀ ಸುಂಕ ಹೇರುವ ಮೂಲಕ ಅವುಗಳ ಆಮದಿಗೆ ಭಾರತ ಕಡಿವಾಣ ಹಾಕಿದೆ.
ಏನಿದು ನಾನ್‌ವೆಜ್ ಹಾಲು?
ಅಮೆರಿಕ ಜತೆ ಒಪ್ಪಂದಕ್ಕೆ ಅಡ್ಡಿಯಾಗಿರುವುದು ನಾನ್‌ವೆಜ್ ಹಾಲು ಮತ್ತು ಈ ಹಾಲಿನ ಉತ್ಪನ್ನಗಳು. ಅಮೆರಿಕದಲ್ಲಿ ಹೈನೋದ್ಯಮ ಭಾರತದಂತಲ್ಲ.ಅಲ್ಲಿ ಸಾವಿರಾರು ಗೋವುಗಳನ್ನು ಹಾಲು, ಮಾಂಸಕ್ಕೇಂದೇ ಸಾಕಲಾಗುತ್ತದೆ. ಹಸು ಸಾಕಲು ಅಲ್ಲಿ ಸೊಪ್ಪು ತರಕಾರಿ ಜತೆಗೆ ಪೌಷ್ಠಿಕ ಆಹಾರ ನೀಡುವ ನೆಪದಲ್ಲಿ ವಿವಿಧ ರೀತಿಯ ಮಾಂಸದಿಂದ ಉತ್ಪಾದಿಸಲಾದ ಫೀಡ್ಸ್‌ಗಳನ್ನು ನೀಡಲಾಗುತ್ತದೆ. ಮೀನು, ಕೋಳಿ, ಹಂದಿ ಮತ್ತಿತರ ಪ್ರಾಣಿಗಳ ದೇಹದ ಭಾಗಗಳು, ರಕ್ತದಿಂದ ಮಾಡಿದ ಆಹಾರಗಳನ್ನು ಹಸು, ದನಗಳಿಗೆ ಅಮೆರಿಕದಲ್ಲಿ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಗೋವುಗಳು ಹುಲ್ಲು, ಸೊಪ್ಪು ತಿಂದು ಹಾಲು ನೀಡುವ ಸಾಧು ಪ್ರಾಣಿಗಳು. ಅಮೆರಿಕದ ಮಾಂಸ ಸೇವಿಸಿದ ಹಸುಗಳು ನೀಡುವ ಹಾಲು ಮತ್ತು ಅವುಗಳ ಉತ್ಪನ್ನ ಕೋಟ್ಯಂತರ ಭಾರತೀಯರ ಧಾರ್ಮಿಕ ನಂಬಿಕೆಗೆ ವಿರುದ್ಧವಾದುದು. ಹಸುವನ್ನು ಪೂಜ್ಯಭಾವದಲ್ಲಿ ಕಾಣುವ ಭಾರತದಲ್ಲಿ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಈ ಹಾಲಿನ ಬಳಕೆ ಅಸಾಧ್ಯ. ಹೀಗಾಗಿ ಇಂಥ ಹಾಲೀನ ವರ್ಗೀಕರಣ ನಡೆಯಬೇಕೆಂಬುದು ಭಾರತದ ವಾದ. (ಈ ಸುದ್ದಿಗೆ ನಂಬರ್ ಗೇಮ್) 16 ಲಕ್ಷ ಕೋಟಿ ಭಾರತದ ಹೈನೋದ್ಯಮದ ಗಾತ್ರ
1 ಲಕ್ಷ ಕೋಟಿ ಅಮೆರಿಕ ಬಂದರೆ ಭಾರತಕ್ಕೆ ನಷ್ಟ 8 ಕೋಟಿ ಹೈನೋದ್ಯಮ ನಂಬಿರುವ ಭಾರತೀಯರು
ಕುಲಾಂತರಿ ಮೆಕ್ಕೆಜೋಳ,
ಸೋಯಾ ಆಮದು ಬೇಡ ಹೈನೋದ್ಯಮದಂತೆ ಕೃಷಿಯನ್ನು ಕೂಡಾ ಅಮೆರಿಕದಲ್ಲಿ ಉದ್ಯಮದ ರೀತಿಯಲ್ಲೇ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಸಣ್ಣ ಹಿಡುವಳಿದಾರರು 1-2 ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸಿದರೆ ಅಮೆರಿಕದಲ್ಲಿ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿಯನ್ನು ಯಂತ್ರೋಪಕರಣ, ಕುಲಾಂತರಿ ಕೃಷಿ ತಳಿಗಳ ಮೂಲಕ ನಡೆಸುತ್ತಾರೆ. ಇದರಿಂದ ಲಭ್ಯವಾಗುವ ಉತ್ಪನ್ನಗಳ ದರ ಅಗ್ಗವಿರುತ್ತದೆ. ಹೀಗಾಗಿ ಅವುಗಳನ್ನು ವಿದೇಶಗಳಿಗೆ ಅಮೆರಿಕ ರಫ್ತು ಮಾಡಲು ಬಯಸುತ್ತದೆ. ಅಮೆರಿಕ ತನ್ನ ಕುಲಾಂತರಿ ಮೆಕ್ಕೆಜೋಳ, ಸೋಯಾಗೆ ಮಾರುಕಟ್ಟೆ ತೆರೆಯುವಂತೆ ಭಾರತದ ಮೇಲೆ ಒತ್ತಡ ಹೇರುತ್ತಿದೆ.
ಭಾರತದ ವಿರೋಧವೇಕೆ?
1. ಭಾರತ ಸಣ್ಣ ಕೃಷಿಕರ ದೇಶ. 15 ಕೋಟಿ ಭಾರತೀಯರು ತಮ್ಮ ಜೀವನಕ್ಕೆ ಕೃಷಿ ಅವಲಂಬಿಸಿದ್ದಾರೆ. ಪರೋಕ್ಷವಾಗಿ ಇನ್ನೂ ಹಲವಾರು ಕೋಟಿ ಜನರ ಜೀವನಕ್ಕೂ ಕೃಷಿಯೇ ಆಧಾರ. ಭಾರತದ ಆರ್ಥಿಕತೆ ಕೂಡಾ ಪ್ರಮುಖವಾಗಿ ಕೃಷಿ ಅವಲಂಬಿಸಿದೆ. ಹೀಗಾಗಿ ಅಮೆರಿಕದ ಅಗ್ಗದ ಉತ್ಪನ್ನಗಳ ಆಮದಿಗೆ ಅವಕಾಶ ಕೊಟ್ಟರೆ ಕೋಟ್ಯಂತರ ರೈತರ ಜೀವನದ ಮೇಲೆ ಪರಿಣಾಮ ಬೀರಲಿದೆ.
2. ಸದ್ಯ ಭಾರತದಲ್ಲಿ ಕುಲಾಂತರಿ ಬೆಳೆಗಳ ಕೃಷಿಗೆ ಅವಕಾಶವಿಲ್ಲ. ಇದೇ ಕಾರಣಕ್ಕೆ ಹಲವು ದೇಶಗಳು ಭಾರತದ ಕೃಷಿ ಉತ್ಪನ್ನ ಆಮದು ಮಾಡಿಕೊಳ್ಳುತ್ತವೆ. ಒಂದು ವೇಳೆ ಅಮೆರಿಕದ ಕುಲಾಂತರಿ ಕೃಷಿ ಉತ್ಪನ್ನಕ್ಕೆ ಭಾರತ ಅವಕಾಶ ನೀಡಿದರೆ ಇತರೆ ದೇಶಗಳು ಭಾರತದ ಕೃಷಿ ಉತ್ಪನ್ನ ಆಮದು ಸ್ಥಗಿತ ಮಾಡಬಹುದು.
3. ಕುಲಾಂತರಿ ಬೆಳೆಗಳ ರೋಗ ನಿರೋಧಕ ಶಕ್ತಿ ವೃದ್ಧಿಗೆ ಪ್ರಾಣಿಗಳಿಂದ ಪಡೆದ ಅಂಶಗಳನ್ನು ಬಳಸುವ ಸಾಧ್ಯತೆ ಇರುವ ಕಾರಣ, ಸಸ್ಯಹಾರಿಗಳಿಗೆ ಇದು ಸಹ್ಯವಲ್ಲ.
4. ಕುಲಾಂತರಿ ಕೃಷಿಯ ಉತ್ಪನ್ನಗಳು ದೀರ್ಘಕಾಲ ಬಳಕೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಆತಂಕವಿದೆ. ಹೀಗಾಗಿ ಅವುಗಳ ಬಳಕೆ ಬಗ್ಗೆ ಸರ್ಕಾರಕ್ಕೂ ಆತಂಕವಿದೆ.
5 ಕುಲಾಂತರಿ ಬೀಜಗಳ ಮರುಬಳಕೆ ಸಾಧ್ಯವಿಲ್ಲ. ರೈತರು ಪ್ರತಿ ಬಾರಿ ಬಿತ್ತನೆಗೆ ಬೀಜ ಖರೀದಿಸುವುದು ಅನಿವಾರ್ಯವಾಗಿ, ನಷ್ಟಕ್ಕೆ ಎಡೆಮಾಡಿಕೊಡುತ್ತದೆ. ಬಿಟಿ ಬೀಜಗಳ ಉದ್ಯಮದಲ್ಲಿ ಕೆಲ ಬಹುರಾಷ್ಟ್ರೀಯ ಸಂಸ್ಥೆಗಳು ಏಕಸ್ವಾಮ್ಯ ಹೊಂದಿರುವ ಕಾರಣ ರೈತರು ಅವುಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ.
ಭಾರತದಲ್ಲೂ ಸಾಕಷ್ಟಿದೆ
ಎಥೆನಾಲ್ ಉತ್ಪಾದನೆ ಭಾರತವು ಎಥನಾಲ್‌ನ 3ನೇ ದೊಡ್ಡ ಮಾರುಕಟ್ಟೆಯಾಗಿದೆ. ಭಾರತವು ಈಗ ಇಂಧನ (ಪೆಟ್ರೋಲ್, ಡೀಸೆಲ್) ಉತ್ಪಾದನೆ ಹೊರತುಪಡಿಸಿ ಅನ್ಯ ಕೈಗಾರಿಕಾ ಉದ್ದೇಶಗಳಿಗಾಗಿ (ಆಲ್ಕೋಹಾಲ್ ಆಧಾರಿತ ರಾಸಾಯನಿಕ, ಔಷಧಿ ಅಥವಾ ಪಾನೀಯಗಳ ತಯಾರಿ) ಮಾತ್ರ ಪರವಾನಗಿಯ ಆಧಾರದಲ್ಲಿ ಎಥೆನಾಲ್ ಆಮದು ಮಾಡಿಕೊಳ್ಳಲು ಅನುಮತಿಸುತ್ತದೆ. ಆಮದು ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಕಬ್ಬು ಮತ್ತು ಏಕದಳ ಧಾನ್ಯಗಳಂತಹ ದೇಶೀಯ ಕೃಷಿ ಉತ್ಪನ್ನಗಳಿಂದ ಇಂಧನ ತಯಾರಿಸುವುದು ಭಾರತದ ಗುರಿ. ಒಂದು ವೇಳೆ ಅಮೆರಿಕದಿಂದ ಎಥೆನಾಲ್ ಆಮದಿಗೆ ಅವಕಾಶ ನೀಡಿದರೆ ಅದು ಭಾರತದ ಕೃಷಿ ವಲಯಕ್ಕೆ ಹೊಡೆತ ನೀಡಲಿದೆ.
ಅಮೆರಿಕ ಬಯಸುತ್ತಿರುವುದೇನು?
ಹೈನೋತ್ಪನ್ನ, ಪೌಲ್ಟ್ರಿ ಉತ್ಪನ್ನ, ಕಾರ್ನ್, ಸೋಯಾಬೀನ್, ಅಕ್ಕಿ, ಗೋಧಿ, ಎಥೆನಾಲ್, ಸಿಟ್ರಸ್ ಹಣ್ಣುಗಳು, ಬಾದಾಮಿ, ಸೇಬು, ದ್ರಾಕ್ಷಿ, ಚಾಕಲೇಟ್, ಕುಕ್ಕೀಸ್, ಫ್ರೋಜನ್ ಫ್ರೆಂಚ್ ಫ್ರೈಗೆ ಭಾರತ ತನ್ನ ಮಾರುಕಟ್ಟೆ ತೆರೆಯಬೇಕು
ಭಾರತ ಬಯಸುತ್ತಿರುವುದೇನು? ಭಾರತದ ಆರ್ಥಿಕತೆ, ರೈತರು, ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುವ ಅಂಶಗಳಿಗೆ ಯಾವುದೇ ಕಾರಣಕ್ಕೂ ಒಪ್ಪಲಾಗದು. ಜೊತೆಗೆ ಭಾರತದ ಜವಳಿ, ಚರ್ಮದ ಉತ್ಪನ್ನ, ಔಷದ, ಎಂಜಿನಿಯರಿಂಗ್ ಉತ್ಪನ್ನ, ಆಟೋಮೊಬೈಲ್ ಬಿಡಿಭಾಗಗಳಿಗೆ ಶೂನ್ಯ ತೆರಿಗೆ ವಿಧಿಸಬೇಕು ಎಂಬುದು ಭಾರತದ ಆಗ್ರಹ.
ಭಾರತದ ವಾದ ಏನು?
ಮಾಂಸ ತಿನ್ನುವ ಹಸುಗಳ ಕ್ಷೀರೋತ್ಪನ್ನ ನಮಗೆ ಬೇಡ
ಕೃಷಿ ತಳಿ ನಾಶ ಮಾಡುವ
ಕುಲಾಂತರಿ ಉತ್ಪನ್ನ ಬೇಡ
ದೊಡ್ಡ ನಂಬರ್‌ಗೇಮ್ 2024
11 ಲಕ್ಷ ಕೋಟಿ ರು
ಭಾರತ- ಅಮೆರಿಕ ವಾರ್ಷಿಕ ವಹಿವಾಟು
2030
45 ಲಕ್ಷ ಕೋಟಿ ರು.
ಉದ್ದೇಶಿತ ವಹಿವಾಟಿನ ಪ್ರಮಾಣ