ಗುಡ್ ಬೈ ಪ್ರೀಮಿಯರ್ ಪದ್ಮಿನಿ
KannadaprabhaNewsNetwork | Published : Oct 30 2023, 12:30 AM IST
ಗುಡ್ ಬೈ ಪ್ರೀಮಿಯರ್ ಪದ್ಮಿನಿ
ಸಾರಾಂಶ
ತೆಲಂಗಾಣ ವಿಧಾನಸಭೆ ಚುನಾವಣೆಯಿಂದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಹೊರಗುಳಿಯಲಿದೆ ಎಂದು ಹೇಳಲಾಗಿದೆ.
ಮಾಯಾನಗರಿ ಮುಂಬೈನ ಮತ್ತೊಂದು ಸವಿನೆನಪು ಇತಿಹಾಸದ ಪುಟಕ್ಕೆ ಮುಂಬೈ: ಮುಂಬೈ ಮಹಾನಗರಿಗರ ಮತ್ತು ಪ್ರವಾಸಿಗರ ಸಂಚಾರದ ನೆಚ್ಚಿನ ವಾಹನವಾಗಿದ್ದ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿ ಇನ್ನು ಇತಿಹಾಸ. ದಶಕಗಳಿಂದ ಮುಂಬೈನ ಇತಿಹಾಸದ ಭಾಗವಾಗಿದ್ದ ಕಪ್ಪು ಹಾಗೂ ಹಳದಿ ಬಣ್ಣದ ಈ ಕಾರುಗಳು ಭಾನುವಾರ ನಗರದಲ್ಲಿ ಕಡೆಯ ಬಾರಿ ಸಂಚರಿಸಿ ಇತಿಹಾಸದ ಪುಟ ಸೇರಿದವು. ‘ಕಾಲಿ ಪೀಲಿ’ ಎಂಬ ಹೆಸರಿನೊಂದಿಗೆ ಮುಂಬೈ ಜನರ ನಿತ್ಜೊ ಜೀವನದ ಭಾಗವಾಗಿದ್ದ ಈ ಟ್ಯಾಕ್ಸಿಗಳು ಸೋಮವಾರದಿಂದ ರಸ್ತೆಗಿಳಿಯುವುದಿಲ್ಲ. 2003ರಲ್ಲಿ ಕೊನೆಯ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿ ನೋಂದಣಿಗೊಂಡಿತ್ತು. ಈ ವಾಹನಗಳಿಗೆ 20 ವರ್ಷಗಳ ಕಾಲ ಮಿತಿ ಇರುವುದರಿಂದ ಅವಧಿ ಮುಕ್ತಾಯವಾದ ಕಾರು ಸೇವೆಯನ್ನು ನಿಲ್ಲಿಸಿವೆ.‘ಇದೀಗ ಆ್ಯಪ್‌ಗಳ ಮುಖಾಂತರ ಸೇವೆ ಒದಗಿಸುವ ಕಾರುಗಳು ಮುಂಬೈ ರಸ್ತೆಯನ್ನು ಆಕ್ರಮಿಸಿದ್ದು, ಈ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದು ಮುಂಬೈನ ಗೌರವವಾಗಿತ್ತು. ನಮಗೆ ಜೀವನವಾಗಿತ್ತು’ ಎಂದು ಕೊನೆಯ ಕಾರು ಹೊಂದಿದ್ದ ಕಾರಿನ ಮಾಲಿಕ ಹೇಳಿದ್ದಾರೆ.