ಸಾರಾಂಶ
ಬೆಂಗಳೂರು : ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳಲ್ಲಿ ಒಂದಾದ ‘ಶ್ರೀಸಾಯಿ ಗೋಲ್ಡ್ ಪ್ಯಾಲೇಸ್’ ವಾರ್ಷಿಕೋತ್ಸವದ ಪ್ರಯುಕ್ತ ಎಲ್ಲಾ ಶಾಖೆಗಳಲ್ಲಿ ಸಾಯಿಗೋಲ್ಡ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.
ಈ ಸಾಯಿ ಗೋಲ್ಡ್ ಹಬ್ಬದ ಸಂದರ್ಭದಲ್ಲಿ ಆಭರಣ ಖರೀದಿಸುವ ಪ್ರತಿ ಗ್ರಾಹಕರಿಗೆ 4 ಭರ್ಜರಿ ರಿಯಾಯಿತಿ ಘೋಷಿಸಿದೆ. ಪ್ರತಿ ಗ್ರಾಂ ಚಿನ್ನ ಖರೀದಿಗೆ 1 ಗ್ರಾಂ ಬೆಳ್ಳಿ ನಾಣ್ಯ ಉಚಿತ, ಕ್ಯಾರೆಟ್ ಡೈಮಂಡ್ ಖರೀದಿಗೆ ₹5 ಸಾವಿರ ರಿಯಾಯಿತಿ, ಬೆಳ್ಳಿ ಆಭರಣಗಳ ಖರೀದಿಗೆ ಶೇ.5ರಷ್ಟು ರಿಯಾಯಿತಿ ಮತ್ತು ಹಳೇಯ ಚಿನ್ನಾಭರಣ ಬದಲಿಸಿ ಖರೀದಿಸುವ ಹೊಸ ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂಗೆ ₹100 ರಿಯಾಯಿತಿ ನೀಡಲಾಗುತ್ತದೆ.
ವಾರ್ಷಿಕೋತ್ಸವದ ಪ್ರಯುಕ್ತ ಸಾಯಿಗೋಲ್ಡ್ ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಖರೀದಿಸುವ ನೆಚ್ಚಿನ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಬಸವನಗುಡಿ, ಎಚ್‌ಎಸ್‌ಆರ್ ಲೇಔಟ್, ಯಲಹಂಕ, ಕೆ.ಆರ್.ಪುರ, ನಾಗರಬಾವಿ ಶಾಖೆಗಳಲ್ಲಿ ಈ ವಿಶೇಷ ಕೊಡುಗೆಗಳು ಲಭ್ಯವಿದೆ. ಗ್ರಾಹಕರು ಚಿನ್ನಾಭರಣ ಖರೀದಿ ಮುಖಾಂತರ ಈ ರಿಯಾಯಿತಿ ಕೊಡುಗೆಗಳ ಸದುಪಯೋಗ ಪಡೆಯುವಂತೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಡಾ। ಟಿ.ಎ.ಶರವಣ ಮನವಿ ಮಾಡಿದ್ದಾರೆ.