ಅದ್ಭುತ ಕ್ಯಾಮೆರಾ ಹೊಂದಿರುವ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್‌ಫೋನ್‌ ಅನ್ನು ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದೆ.

ಅದ್ಭುತ ಕ್ಯಾಮೆರಾ ಹೊಂದಿರುವ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್‌ಫೋನ್‌ ಅನ್ನು ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದೆ. 

ಈ ಫೋನುಗಳು ಸದ್ಯ Samsung.comನಲ್ಲಿ ಮತ್ತು ಸ್ಯಾಮ್ಸಂಗ್ ಮತ್ತು ಪಾಲುದಾರ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಮಾರ್ಚ್ 18, 2024ರಿಂದ ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ದೊರೆಯಲಿದೆ. ಗ್ಯಾಲಕ್ಸಿ ಎ55 5ಜಿ ಮೂರು ಮಾದರಿಗಳಲ್ಲಿ ಲಭ್ಯವಿದೆ. 

ಅದರ ಬೆಲೆ ಹೀಗಿದೆ- 8ಜಿಬಿ+128ಜಿಬಿ= ರೂ.36999, ಜಿಬಿ+256ಜಿಬಿ= ರೂ.39999, 12ಜಿಬಿ+256ಜಿಬಿ= ರೂ.42999. ಗ್ಯಾಲಕ್ಸಿ ಎ35 5ಜಿ ಬೆಲೆ ಹೀಗಿದೆ- 8ಜಿಬಿ+128ಜಿಬಿ= ರೂ.27999, 8ಜಿಬಿ+256ಜಿಬಿ= ರೂ.30999.

ಇದರ ವಿಶೇಷತೆ ಏನೆಂದರೆ ಅತ್ಯುನ್ನತ ಎಐ ಆಧರಿತ ಕ್ಯಾಮೆರಾ, ಗೊರಿಲ್ಲಾ ಗ್ಲಾಸ್ ವಿಕ್ಟಸ್ + ಪ್ರೊಟೆಕ್ಷನ್, ಎಐ ಆಧರಿತ ಕ್ಯಾಮೆರಾ ವೈಶಿಷ್ಟ್ಯಗಳು ಮತ್ತು ಟ್ಯಾಂಪರ್-ನಿರೋಧಕ ಸೆಕ್ಯೂರಿಟಿ ಫೀಚರ್ ಆದ ಸ್ಯಾಮ್‌ಸಂಗ್ ನಾಕ್ಸ್ ವಾಲ್ಟ್. 

ಈ ಫೋನುಗಳು ಆಸಮ್ ಲಿಲಾಕ್, ಆಸಮ್ ಐಸ್‌ಬ್ಲೂ ಮತ್ತು ಆಸಮ್ ನೇವಿ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ವಿಶೇಷತೆಗಳು: ಈ ಫೋನ್‌ಗಳನ್ನು 30 ನಿಮಿಷಗಳವರೆಗೆ ನೀರಿನಲ್ಲಿ ಮುಳುಗಿಸಿಟ್ಟರೂ ಏನೂ ಆಗುವುದಿಲ್ಲ ಎಂದು ಕಂಪನಿ ತಿಳಿಸಿದೆ.ಈ ಫೋನುಗಳು ಧೂಳು ಮತ್ತು ಮರಳು ನಿರೋಧಕವಾಗಿವೆ.

ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ಪ್ರೊಟೆಕ್ಷನ್ ಹೊಂದಿದ್ದು, ಸ್ಲಿಪ್ ಆಗುವುದು ಕೈ ಜಾರುವ ತೊಂದರೆ ತೊಡೆಯಲು ಈ ರೀತಿಯ ವಿನ್ಯಾಸ ಇದೆ.

ಎಐ ಆಧರಿತ ಕ್ಯಾಮೆರಾ ಫೀಚರ್‌ಗಳು ಈ ಫೋನುಗಳ ವಿಶೇಷತೆ. ಇದರಿಂದ ಫೋಟೋಹಗಳ ಅದ್ದೂರಿತನವೇ ಬದಲಾಗಲಿದೆ.

ವಿಡಿಐಎಸ್ + ಅಡಾಪ್ಟಿವ್ ವಿಡಿಐಎಸ್ (ವೀಡಿಯೋ ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್) ಮತ್ತು ಓಐಎಸ್ (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ನಂತಹ ವೈಶಿಷ್ಟ್ಯ ಹೊಂದಿದ್ದು, ಇದು ಫೋಟೋಗಳು ಮತ್ತು ವೀಡಿಯೊಗಳನ್ನು ಸುಂದರವಾಗಿ ಕಾಣಿಸುತ್ತದೆ.

ಗ್ಯಾಲಕ್ಸಿ ಎ55 5ಜಿ 50ಎಂಪಿ ಮುಖ್ಯ ಕ್ಯಾಮೆರಾ, ಓಐಎಸ್ ಮತ್ತು 12ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿದೆ. ಗ್ಯಾಲಕ್ಸಿ ಎ35 5ಜಿ 50ಎಂಪಿ ಮುಖ್ಯ ಕ್ಯಾಮೆರಾ, ಓಐಎಸ್ ಮತ್ತು 8 ಎಂಪಿ ಅಲ್ಟ್ರಾ

ವೈಡ್ ಹೊಂದಿದೆ. ಎರಡೂ ಫೋನುಗಳು 5ಎಂಪಿ ಮ್ಯಾಕ್ರೋ ಕ್ಯಾಮೆರಾ ಹೊಂದಿವೆ. ಗ್ಯಾಲಕ್ಸಿ ಎ55 5ಜಿ 32ಎಂಪಿ ಫ್ರಂಟ್ ಕ್ಯಾಮೆರಾ, ಗ್ಯಾಲಕ್ಸಿ ಎ35 5ಜಿ 13ಎಂಪಿ ಫ್ರಂಟ್ ಕ್ಯಾಮೆರಾ ಜೊತೆ ಬರುತ್ತದೆ.- 6.6-ಇಂಚಿನ ಎಫ್ಎಚ್ಡಿ + ಸೂಪರ್ ಅಮೋಲ್ಡ್ ಡಿಸ್‌ಪ್ಲೇ ಇದೆ.

ಗ್ಯಾಲಕ್ಸಿ ಎ55 5ಜಿ ಎಕ್ಸಿನೋಸ್ 1480 ಪ್ರೊಸೆಸರ್ ಹೊಂದಿದೆ. ಗ್ಯಾಲಕ್ಸಿ ಎ35 5ಜಿನಲ್ಲಿ ಎಕ್ಸಿನೋಸ್ 1380 ಪ್ರೊಸೆಸರ್‌ ಲಭ್ಯವಿದೆ.

ಸಾಧನಗಳು 25ಡಬ್ಲ್ಯೂ ಚಾರ್ಜಿಂಗ್‌ನೊಂದಿಗೆ 5000ಎಂಎಎಚ್ ಬ್ಯಾಟರಿ ಹೊಂದಿವೆ.

ಸ್ಯಾಮ್‌ಸಂಗ್ ನಾಕ್ಸ್ ವಾಲ್ಟ್ ಹೆಚ್ಚು ಭದ್ರತೆ ಒದಗಿಸುತ್ತದೆ.

ಈ ಉತ್ಪನ್ನಗಳನ್ನು ಎಚ್ ಡಿ ಎಫ್ ಸಿ, ಒನ್ ಕಾರ್ಡ್, ಐ ಡಿ ಎಫ್ ಸಿ, ಫಸ್ಟ್ ಬ್ಯಾಂಕ್ ಕಾರ್ಡ್‌ಗಳಲ್ಲಿ ಖರೀದಿಸಿದರೆ ರೂ. 3000ರ ಬ್ಯಾಂಕ್ ಕ್ಯಾಶ್‌ಬ್ಯಾಕ್ ಲಭ್ಯವಿದೆ.