ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದೆ. ಈ ವರ್ಷ ಟ್ಯಾಕ್ಸ್‌, ಬ್ಯಾಂಕಿಂಗ್‌, ವೇತನ ಸೇರಿ ನಿತ್ಯ ಬದುಕಿನ ಮೇಲೆ ಪರಿಣಾಮ ಬೀರುವಂಥ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ನೋಡೋಣ.ಆದಾಯ ತೆರಿಗೆಯಲ್ಲಿ ಬದಲಾವಣೆ, * ವೇತನದ ಮೇಲೆ ಪರಿಣಾಮ

ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದೆ. ಈ ವರ್ಷ ಟ್ಯಾಕ್ಸ್‌, ಬ್ಯಾಂಕಿಂಗ್‌, ವೇತನ ಸೇರಿ ನಿತ್ಯ ಬದುಕಿನ ಮೇಲೆ ಪರಿಣಾಮ ಬೀರುವಂಥ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ನೋಡೋಣ.

1. ಆದಾಯ ತೆರಿಗೆಯಲ್ಲಿ ಬದಲಾವಣೆ

- ಆದಾಯ ತೆರಿಗೆ ಕಾಯ್ದೆ 2025ರ ಹೊಸ ನಿಯಮಗಳು ಜಾರಿಗೆ ಬರುತ್ತವೆ. ವಾರ್ಷಿಕ 12.75 ಲಕ್ಷಗಳವರೆಗೆ ತೆರಿಗೆ ರಿಯಾಯಿತಿ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಮೊದಲಾದವುಗಳಲ್ಲಿ ವಿನಾಯಿತಿ ಇತ್ಯಾದಿ ಅಂಶಗಳು ಜಾರಿಯಾಗಲಿವೆ.

- ಈವರೆಗೆ ಬಳಕೆಯಲ್ಲಿದ್ದ ಫಿನಾನ್ಶಿಯಲ್‌ ಇಯರ್‌ ಮತ್ತು ಅಸೆಸ್‌ಮೆಂಟ್‌ ಇಯರ್‌ ಎಂಬ ಪದಗಳ ಬದಲಿಗೆ ಟ್ಯಾಕ್ಸ್‌ ಇಯರ್‌ ಎಂಬ ಒಂದೇ ಪದ ಬಳಕೆಯಾಗಲಿದೆ. ಗೊಂದಲ ಕಡಿಮೆಮಾಡುವುದು ಈ ಬದಲಾವಣೆಯ ಉದ್ದೇಶ.

- ಸ್ಟಾಂಡರ್ಡ್‌ ಡಿಡಕ್ಷನ್‌ ಎಂದರೆ ಉದ್ಯೋಗಿಗಳು ತಮ್ಮ ವಾರ್ಷಿಕ ಆದಾಯದ ಮೇಲೆ ಪಡೆಯಬಹುದಾದ ತೆರಿಗೆ ರಿಯಾಯಿತಿ. ಈ ಮೊತ್ತ 75,000 ಆಗಿದೆ. ಮೊದಲು ಇದು 50,000 ರು. ಇತ್ತು. ಈ ಮೊತ್ತದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.

- ಊಟ, ಮನೆ ಬಾಡಿಗೆ ಮೊದಲಾದೆಡೆ ಹೆಚ್‌ಆರ್‌ಎ ನಿಯಮದಡಿ ವಿನಾಯಿತಿ ಕಲ್ಪಿಸಲಾಗಿದ್ದರೂ ನಿಯಮಗಳು ಹೆಚ್ಚು ಕಟ್ಟುನಿಟ್ಟಾಗಿರಲಿವೆ.

- ಇನ್‌ಕಂ ಟ್ಯಾಕ್ಸ್‌ ರಿಟರ್ನ್ಸ್‌ (ಐಟಿಆರ್‌) ಸಲ್ಲಿಕೆಗೆ ಅಂತಿಮ ಗಡುವನ್ನು ಆಗಸ್ಟ್‌ 31ಕ್ಕೆ ವಿಸ್ತರಿಸಲಾಗಿದೆ.

2. ವೇತನದ ಮೇಲೆ ಪರಿಣಾಮ

- ಕೈಗೆ ಬರುವ ಸಂಬಳದ ಮೊತ್ತಕ್ಕಿಂತ ಉಳಿತಾಯಕ್ಕೆ ಆದ್ಯತೆ. ಮೂಲ ಸಂಬಳದ ಶೇ.50ರಷ್ಟು ಮೊತ್ತ ಪಿಎಫ್‌ಗೆ ಕಡಿತಗೊಳ್ಳಬಹುದು.

- ಗ್ಯಾಚುಯಿಟಿ ಬೆನಿಫಿಟ್‌ ಹೆಚ್ಚಾಗಲಿದೆ.

3. ಬ್ಯಾಂಕಿಂಗ್‌ ಮತ್ತು ಎಟಿಎಂ ವ್ಯವಹಾರದಲ್ಲಿ ಬದಲಾವಣೆ

- ಎಟಿಎಂನಲ್ಲಿ ಉಚಿತವಾಗಿ ತಿಂಗಳಿಗೆ 5 ಸಲ ಹಣ ತೆಗೆಯಬಹುದಷ್ಟೇ ಮತ್ತು ದಿನಕ್ಕೆ ಹಣ ವಿತ್‌ಡ್ರಾ ಮಾಡಬಹುದಾದ ಗರಿಷ್ಠ ಮೊತ್ತದಲ್ಲಿ ಬದಲಾವಣೆ. ಡೆಬಿಟ್‌ ಕಾರ್ಡ್‌ಗಳಿಗೆ ಅನುಗುಣವಾಗಿ ಈ ಬದಲಾವಣೆ ಇರುತ್ತದೆ.

- ಸೂಚಿಸಿದ್ದಕ್ಕಿಂತ ಹೆಚ್ಚು ಸಲ ಎಟಿಎಂನಿಂದ ಹಣ ಡ್ರಾ ಮಾಡಿದರೆ ಪ್ರತೀ ಸಲ 23 ರು.ಗಳಷ್ಟು ಹೆಚ್ಚುವರಿ ಹಣ ಕಟ್‌ ಆಗುತ್ತದೆ.

4. ಡಿಜಿಟಲ್‌ ವಟಿವಾಟು ಹೆಚ್ಚು ಸುರಕ್ಷಿತ

- ಪ್ರತೀ ಪಾವತಿಗೂ 2 ಅಂಶಗಳ ದೃಢೀಕರಣ ಕಡ್ಡಾಯ.

- ಸಣ್ಣ ಮೊತ್ತಕ್ಕೂ ಓಟಿಪಿ ಅಥವಾ ಬಯೋಮೆಟ್ರಿಕ್‌ ದೃಢೀಕರಣ ಬೇಕಾಗುತ್ತೆ.

5. ಪಾನ್‌ ಕಾರ್ಡ್‌ ಸಂಬಂಧಿ ನಿಯಮಗಳು

- ಆಧಾರ್‌ನ ಯಥಾವತ್‌ ವಿವರಗಳು ಪ್ಯಾನ್‌ ಕಾರ್ಡ್‌ನಲ್ಲಿರಬೇಕು.

- ಪಾನ್ ಕಾರ್ಡ್‌ ಮಾಡಿಸಬೇಕೆಂದರೆ ಮೊದಲಿಗಿಂತ ಹೆಚ್ಚು ದಾಖಲೆಗಳು ಬೇಕು.

6. ನಿತ್ಯ ಬಳಕೆಯ ಖರ್ಚು ವೆಚ್ಚಗಳು

- ಫಾಸ್ಟ್‌ಟ್ಯಾಗ್‌ನ ವಾರ್ಷಿಕ ಮೊತ್ತ 3000 ರು.ನಿಂದ 3075 ರು.ಗೆ ಹೆಚ್ಚಳವಾಗಿದೆ.

- ಪ್ರಯಾಣಕ್ಕೂ 8 ಗಂಟೆಯೊಳಗೆ ರೈಲ್ವೇ ಟಿಕೆಟ್‌ ಕ್ಯಾನ್ಸಲ್‌ ಮಾಡಿದರೆ ಹಣ ವಾಪಾಸ್‌ ಬರಲ್ಲ.

7. ಹೂಡಿಕೆ ಮತ್ತು ಉಳಿತಾಯ

- ಸಾವರಿನ್‌ ಗೋಲ್ಡ್‌ ಬಾಂಡ್‌ ಅಂದರೆ ಕೇಂದ್ರ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತರಿಸುವ ಡಿಜಿಟಲ್ ಚಿನ್ನದ ಬಾಂಡ್‌ಗಳನ್ನು ಅವಧಿಗೆ ಮೊದಲೇ ಮಾರಾಟ ಮಾಡಿದರೆ, ಸ್ಟಾಕ್‌ ಎಕ್ಸ್‌ಚೇಂಜ್‌ ಅಥವಾ ಬೇರೆ ಹೂಡಿಕೆದಾರರಿಂದ ಖರೀದಿ ಮಾಡಿದ್ದರೆ ಅದಕ್ಕೆ ಟ್ಯಾಕ್ಸ್‌ ಕಟ್ಟಬೇಕು.

- ಎನ್‌ಪಿಎಸ್‌ ಅಂದರೆ ನ್ಯಾಶನಲ್‌ ಪೆನ್ಶನ್‌ ಸ್ಕೀಮ್‌ನಲ್ಲೂ ಬದಲಾವಣೆಗಳಾಗಿವೆ.