ಈ ವರ್ಷ 50 ಸಾವಿರ ಕೇಸ್‌ ಇತ್ಯರ್ಥಪಡಿಸಿ ಸುಪ್ರೀಂ ಕೋರ್ಟ್‌ ದಾಖಲೆ

| Published : Dec 23 2023, 01:45 AM IST / Updated: Dec 23 2023, 01:46 AM IST

ಈ ವರ್ಷ 50 ಸಾವಿರ ಕೇಸ್‌ ಇತ್ಯರ್ಥಪಡಿಸಿ ಸುಪ್ರೀಂ ಕೋರ್ಟ್‌ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ತಂತ್ರಜ್ಞಾನ ಬಳಕೆಯನ್ನು ಹೆಚ್ಚಳ ಮಾಡಿದ್ದರ ಫಲವಾಗಿ ಸುಪ್ರೀಂ ಕೋರ್ಟ್‌ 2023ರಲ್ಲಿ 52,191 ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ಬರೆದಿದೆ.

ನವದೆಹಲಿ: 2023ರಲ್ಲಿ ಸುಪ್ರೀಂ ಕೋರ್ಟ್‌ ಡಿ.15ರವರೆಗೆ ಬರೋಬ್ಬರಿ 52,191 ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ.ಸುಪ್ರೀಂ ಕೋರ್ಟ್‌ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಕಳೆದ ವರ್ಷ ಇದೇ ಅವಧಿಯಲ್ಲಿ 39,800 ಪ್ರಕರಣಗಳನ್ನು ಇತ್ಯರ್ಥ ಮಾಡಿತ್ತು.

ಆದರೆ ಈಗ 52 ಸಾವಿರ ಕೇಸು ಇತ್ಯರ್ಥದೊಂದಿಗೆ ಸುಪ್ರೀಂ ಕೋರ್ಟ್‌ನ ಪ್ರತಿಯೊಬ್ಬ ನ್ಯಾಯಮೂರ್ತಿಯೂ ಸಹ ತಿಂಗಳಿಗೆ ಸರಾಸರಿ 128 ಪ್ರಕರಣಗಳನ್ನು ಇತ್ಯರ್ಥ ಮಾಡಿದಂತಾಗಿದೆ ಮತ್ತು ವಾರ್ಷಿಕ 4,349 ಪ್ರಕರಣಗಳನ್ನು ಇತ್ಯರ್ಥ ಮಾಡಿದಂತಾಗಿದೆ.

ಕೊರೋನಾ ನಂತರ ಕೃತಕ ಬುದ್ಧಿಮತ್ತೆಯೂ ಸೇರಿದಂತೆ ಸುಧಾರಿತ ತಂತ್ರಜ್ಞಾನ ಬಳಕೆಯಿಂದ ಹಲವು ಪ್ರಕ್ರಿಯೆಯಲ್ಲಿ ಉಂಟಾಗುತ್ತಿದ್ದ ಸಮಯ ಲೋಪವನ್ನು ನಿಗ್ರಹಿಸಿದ್ದೇ ಈ ಮೈಲಿಗಲ್ಲು ಸಾಧಿಸಲು ಕಾರಣ ಎನ್ನಲಾಗಿದೆ. ಆದಾಗ್ಯೂ ಸುಪ್ರೀಂ ಕೋರ್ಟ್‌ನಲ್ಲಿ 80 ಸಾವಿರ ಸಕ್ರಿಯ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕಾಗಿರುವುದು ಬಹುದೊಡ್ಡ ಸವಾಲು ಎಂದು ವರದಿ ತಿಳಿಸಿದೆ.