ಸಾರಾಂಶ
ಕೊಳ್ಳೇಗಾಲ ತಾಲೂಕು ಮುಡಿಗುಂಡದ ಎಸ್.ಪುಟ್ಟಪ್ಪ ಅವರ ‘ಜ್ಞಾನಯೋಗಿ ಶ್ರೀಸಿದ್ಧೇಶ್ವರ ಶ್ರೀಗಳು’ ಕೃತಿಯನ್ನು ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ಮೈಸೂರು : ಕೊಳ್ಳೇಗಾಲ ತಾಲೂಕು ಮುಡಿಗುಂಡದ ಎಸ್.ಪುಟ್ಟಪ್ಪ ಅವರ ‘ಜ್ಞಾನಯೋಗಿ ಶ್ರೀಸಿದ್ಧೇಶ್ವರ ಶ್ರೀಗಳು’ ಕೃತಿಯನ್ನು ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ವಿಜಯಪುರ ಜ್ಞಾನಯೋಗಾಶ್ರಮದ ಶ್ರೀಸಿದ್ಧೇಶ್ವರ ಸ್ವಾಮಿಗಳ ಜೀವನ ಚಿತ್ರಣವಿದೆ. ಶ್ರೀಗಳ ಅಂತಿಮ ಅಭಿವಾದನ ಪತ್ರ, ಕೊಳ್ಳೇಗಾಲ ಹಾಗೂ ಮೈಸೂರಿಗೆ ಶ್ರೀಸಿದ್ಧೇಶ್ವರ ಶ್ರೀಗಳ ಆಗಮನ, ಸುತ್ತೂರು ಮಠದೊಂದಿಗೆ ಶ್ರೀಗಳ ಬಾಂಧವ್ಯದ ಬೆಸುಗೆ, ಜ್ಞಾನಯೋಗಿಯ ಪ್ರವಚನ, ಸಾರ, ಸಿದ್ಧಾಂತ ಶಿಖಾಮಣಿ ಅನುವಾದ, ಆರು ಭಾಷೆಗಳಲ್ಲಿ ಪಾಂಡಿತ್ಯ, ಗ್ರಾಮ ಸ್ವಚ್ಛತೆ ಹಾಗೂ ಸಮಯಕ್ಕೆ ಆದ್ಯತೆ, ಆಧ್ಯಾತ್ಮಕ್ಕಾಗಿಯೇ ಜೀವನ, ಶ್ರೀಗಳ ಅಂತಿಮ ದಿನಗಳನ್ನು ದಾಖಲಿಸಿದ್ದಾರೆ.
ನಂತರ ಶ್ರೀಗಳನ್ನು ಕುರಿತು ಛಂದಸ್ಸಿನಲ್ಲಿ ರಚಿತವಾದ 19 ಪದ್ಯಗಳಿವೆ. ಪ್ರವಚನ ಮಾಣಿಕ್ಯ ದೀಪ್ತಿ, ಸರಳತೆಯ ಸಂತ, ನಿರಾಭಾರಿ ಜಂಗಮ, ನಡೆದಾಡಿದ ದೇವರು, ಮಾತು ನಿಲ್ಲಿಸಿದ ದೇವಜ್ಯೋತಿ, ಆಕಾಶ ದೀಪ, ನಿರುಪಮ ಜ್ಞಾನಿ, ಅಮಲರೂಪ ವಿಮಲ ಚರಿತ, ಬಯಲಾದ ಅನುಭವಿ ಸಂತ, ಓ ಗುರುವೇ ಸಿದ್ಧೇಶ, ಯೋಗಿಯಲ್ಲವೇ ನೀವು, ಚರಸಂತರು, ಸಂತ ತಿಲಕರು. ದಯಾಮಯ ಗುರುವೇ,. ಭುವಿಯ ಭಾಗ್ಯರು, ಶಾಂತಿಧೂತರು. ಯೋಗಿ ಬಂದ ನೋಡಿ, ಕರುಣಾಳು ಬಾ ಬೆಳಕೆ, ಶಿವನ ಕಿಂಕರ, ಶೀವದೀಪ್ತಿ ನೀವಯ್ಯ, ಭಕ್ತಿಸುಮವು, ಶಿವಕಳೆ, ಸಮರುಂಟೆ ಲೋಕದೊಳು, ಜ್ಞಾನಶಿಖರದ ದಿವ್ಯಜ್ಯೋತಿ, ಶ್ರೀ ಗುರು ಸಿದ್ಧೇಶ, ಸಿದ್ಧೇಶ ಗುರುವರಗೆ ವಂದನೆ- ಈ ಪದ್ಯಗಳಿವೆ.
ನಂತರ ಭಾವಬಂಧನ, ಸತ್ಸಂಗ, ನಾನಾರು, ಜ್ಯೋತಿದರ್ಶನ ಕುರಿತು ಬರೆದಿದ್ದಾರೆ. ಸಿದ್ಧೇಶ್ವರರ ಕೆಲವು ಪ್ರಕಟಿತ ಗ್ರಂಥಗಳಿಂದ ಆಯ್ಗ ವ್ಯಾಕ್ಯಗಳ ಉದ್ಧರಣಗಳಿವೆ.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಂದೇಶ, ಪ್ರೊ.ಎಂ. ಕೃಷ್ಣೇಗೌಡರ ಮುನ್ನುಡಿ ಇದೆ.
ಆಸಕ್ತರು ಎಸ್. ಪುಟ್ಟಪ್ಪ ಮುಡಿಗುಂಡ, ಮೊ. 81054 92688 ಸಂಪರ್ಕಿಸಬಹುದು.
ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿಗೆ 6 ಮಂದಿ ಆಯ್ಕೆ
ಮೈಸೂರು : ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ವತಿಯಿಂದ ನೀಡಲಾಗುವ ಎರಡನೇ ವರ್ಷದ ರಾಜ್ಯ ಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿಗೆ ನಾಡಿನ ವಿವಿಧ ಕ್ಷೇತ್ರದ 6 ಮಂದಿ ಗಣ್ಯ ಸಾಧಕರು ಆಯ್ಕೆಯಾಗಿದ್ದಾರೆ.
ಚಾಮರಾಜನಗರದ ಕನ್ನಡ ಪರ ಹೋರಾಟಗಾರ, ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ (ಕನ್ನಡ ಹೋರಾಟ ಮತ್ತು ಸಂಘಟನಾ ಕ್ಷೇತ್ರ), ಮೈಸೂರಿನ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಅಂಶಿ ಪ್ರಸನ್ನಕುಮಾರ್ (ಸಾಹಿತ್ಯ ಮತ್ತು ಪತ್ರಿಕಾ ಕ್ಷೇತ್ರ), ಮಂಡ್ಯದ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆಯ ಅಧ್ಯಕ್ಷೆ ರಜನಿ ರಾಜ್ (ಮಹಿಳಾ ಮತ್ತು ಮಕ್ಕಳ ಸೇವಾ ಕ್ಷೇತ್ರ), ಮೈಸೂರಿನ ದಕ್ಷ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಪಿ.ಜಯಚಂದ್ರರಾಜು (ಉನ್ನತ ಶಿಕ್ಷಣ ಕ್ಷೇತ್ರ), ಬೆಂಗಳೂರಿನ ಹಿರಿಯ ನ್ಯಾಯವಾದಿ, ಸಾಹಿತಿ ಎಲ್.ಪುರುಷೋತ್ತಮ (ನ್ಯಾಯಾಂಗ ಮತ್ತು ಸಾಹಿತ್ಯ ಕ್ಷೇತ್ರ) ಹಾಗೂ ಮೈಸೂರಿನ ಕಾವೇರಿ ಕನ್ನಿಕಾ ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ಕೊಡಗಿನ ಮೂಲದ ಎಂ.ಸಿ. ಚೋಂದಮ್ಮ (ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕ್ಷೇತ್ರ) ಅವರನ್ನು ಪ್ರಶಸ್ತಿಗೆ ಆಯ್ಕೆಯಾಗಿ ಮಾಡಲಾಗಿದೆ.
ಮೈಸೂರಿನ ವಿಜಯನಗರದ ಮೊದಲ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಏ.6ರ ಬೆಳಗ್ಗೆ 10ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಈ ಆರು ಮಂದಿ ಗಣ್ಯ ಸಾಧಕರಿಗೆ ಕವಯತ್ರಿ ಡಾ. ಲತಾ ರಾಜಶೇಖರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.