ಎಲೆಕ್ಟ್ರಿಕ್‌ ವಿಭಾಗದಲ್ಲಿ ವೇಗಕ್ಕೆ ಒದಗುವ ಸಪೂರ ಮೊಬೈಲ್‌ನಂಥಾ ಸ್ಕೂಟರನ್ನು ಟಿವಿಎಸ್‌ ಹೊರತಂದಿದೆ. ಅದರ ಹೆಸರು ಟಿವಿಎಸ್‌ ಎಕ್ಸ್‌.ಇದ್ಯಾವುದು ಎಲೆಕ್ಟ್ರಿಕ್ಕಾ ಅಂತ ಯಾರಾದರೂ ಬಂದು ಕುತೂಹಲ ತೋರಿಸುವಂತಹ ವಿನ್ಯಾಸವನ್ನು ಹೊಂದಿದೆ.

ಎಲೆಕ್ಟ್ರಿಕ್‌ ವಿಭಾಗದಲ್ಲಿ ವೇಗಕ್ಕೆ ಒದಗುವ ಸಪೂರ ಮೊಬೈಲ್‌ನಂಥಾ ಸ್ಕೂಟರನ್ನು ಟಿವಿಎಸ್‌ ಹೊರತಂದಿದೆ. ಅದರ ಹೆಸರು ಟಿವಿಎಸ್‌ ಎಕ್ಸ್‌.

ಇದ್ಯಾವುದು ಎಲೆಕ್ಟ್ರಿಕ್ಕಾ ಅಂತ ಯಾರಾದರೂ ಬಂದು ಕುತೂಹಲ ತೋರಿಸುವಂತಹ ವಿನ್ಯಾಸವನ್ನು ಹೊಂದಿದೆ. ತೆಳ್ಳಗೆ ಉದ್ದಕ್ಕೆ ಇರುವ ಈ ಸ್ಕೂಟರ್‌ ಕೊಂಚ ಬೈಕ್‌ನಂತೆಯೇ ಕಾಣಿಸುತ್ತದೆ. ಮೂರು ಮೋಡ್‌ಗಳಿದ್ದು, ಆರಾಮಾಗಿ ಸಾಗಲು ಎಕ್ಸ್‌ಟೆಲ್ತ್‌ ಬಳಸಬಹುದು ಅದಕ್ಕಿಂತ ವೇಗ ಬೇಕು ಎಂದರೆ ಎಕ್ಸ್‌ಟಿರೈಡ್‌ ಮೋಡ್ ಇದೆ. ಸೊಂಯ್ ಸೊಂಯ್‌ ಅಂತ ಹೋಗಬೇಕು ಅಂತ ಬಯಸಿದರೆ ಕ್ಸಾನಿಕ್‌ ಮೋಡ್‌ ಬಳಸಬಹುದು.

59 ಕಿಮೀ ಐಡಿಸಿ ರೇಂಜ್‌ ಕೊಡುತ್ತದೆ

ಕಂಪನಿ 159 ಕಿಮೀ ಐಡಿಸಿ ರೇಂಜ್‌ ಕೊಡುತ್ತದೆ ಎಂದಿದೆ. ಆದರೆ ನಮ್ಮ ರಸ್ತೆ, ಅವರವರ ಬಳಕೆಯ ರೀತಿನೀತಿಗೆ ಅಷ್ಟೆಲ್ಲಾ ರೇಂಜ್ ದೊರಕುವುದು ಸ್ವಲ್ಪ ಕಷ್ಟವೇ. 100-110 ಕಿಮೀ ರೇಂಜ್ ನಂಬಿಕೊಳ್ಳಬಹುದು.

ಹೈವೇಗಳಲ್ಲಿ, ನೇರ ರಸ್ತೆಗಳಲ್ಲಿ ಇದರ ಸದ್ಬಳಕೆ

ವಿಶೇಷವೆಂದರೆ ಕ್ರೂಸ್ ಕಂಟ್ರೋಲ್. ಹೈವೇಗಳಲ್ಲಿ, ನೇರ ರಸ್ತೆಗಳಲ್ಲಿ ಇದರ ಸದ್ಬಳಕೆ ಮಾಡಬಹುದು. ಟ್ರಾಫಿಕ್‌ ತುಂಬಿದ ಸಿಟಿಯಲ್ಲಿ ಕಷ್ಟ. ಜೊತೆಗೆ ಟಿಲ್ಟ್‌ ಮಾಡಬಹುದಾದ 10.2 ಇಂಚಿನ ಟಿಎಫ್‌ಟಿ ಸ್ಕ್ರೀನ್ ಇದರ ಸೊಗಸು.

ಈ ಸ್ಕೂಟರ್‌ ಅನ್ನು ಪಾಸ್‌ವರ್ಡ್‌ ಹಾಕಿ ಆರಂಭಿಸಬಹುದಾದದ್ದು ಇದರ ಆಕರ್ಷಣೆ. ಈ ಪಾಸ್‌ವರ್ಡ್‌ ಅನ್ನುವುದು ಕೊಂಚ ಆತಂಕ ಹುಟ್ಟಿಸುವ ವಿಚಾರ. ಯಾರಾದರೂ ನೋಡಬಹುದು ಎಂಬ ಭಯದಲ್ಲಿ ಹೆಚ್ಚು ಎಚ್ಚರದಿಂದ ಪಾಸ್‌ವರ್ಡ್‌ ಬಳಸಬೇಕಿರುತ್ತದೆ.

ಇದರಲ್ಲಿ ಎದುರಲ್ಲಿ ತರಕಾರಿ ಇಟ್ಟುಕೊಳ್ಳುವುದಕ್ಕೆ, ನೀರಿನ ಕ್ಯಾನ್‌ ಇಟ್ಟುಕೊಳ್ಳುವುದಕ್ಕೆ ಜಾಗವಿಲ್ಲ. ಜೊತೆಗೆ ಸೀಟ್‌ ಅಡಿಯಲ್ಲಿ ಚಾರ್ಜರ್‌ ಇಟ್ಟರೆ, ಅದರ ಜೊತೆ ಸಣ್ಣ ಬ್ಯಾಗೊಂದು ಇಡಬಹುದಷ್ಟೇ. ಹಾಗಾಗಿ ನಿಧಾನವಾಗಿ ಹೋಗುವವರಿಗೆ, ಸಾಮಾನು ಎತ್ತಿಕೊಂಡು ಹೋಗುವವರಿಗೆ ಆಗಿಬರಲ್ಲ.

ಹಿಂಭಾಗ ಮತ್ತು ಮುಂಭಾಗದಲ್ಲಿ ಡಿಸ್ಕ್‌ ಬ್ರೇಕ್‌ ಹಾಗೂ ಎಬಿಎಸ್‌ ಸೌಲಭ್ಯ ಹೊಂದಿರುವ ಈ ಎಲೆಕ್ಟ್ರಿಕ್‌ ಸ್ಕೂಟರ್ ಎಕ್ಸ್‌ಶೋರೂಮ್‌ ಬೆಲೆ ರೂ.2,63,880.