ಸಾರಾಂಶ
ನವದೆಹಲಿ : ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಕಾರ್ಯಕ್ರಮದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಎಲ್ಲಾ ಉತ್ಪನ್ನಗಳು ಮತ್ತು ವಿನೂತನ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತಿದೆ. ಈ ಎಕ್ಸ್‌ಪೋದಲ್ಲಿ ಟೊಯೋಟಾ ನಾಲ್ಕು ಜೋನ್‌ಗಳನ್ನು ಸಿದ್ಧಗೊಳಿಸಿದ್ದು, ಪ್ರತೀ ಜೋನ್‌ಗಳಲ್ಲೂ ತನ್ನ ವೈವಿಧ್ಯಮಯ ಉತ್ಪನ್ನಗಳನ್ನು ಪ್ರದರ್ಶಿಸಲಿದೆ.ಟೊಯೋಟಾ ಪೆವಿಲಿಯನ್‌ನಲ್ಲಿ 4 ಜೋನ್‌ಗಳು
1. ಮಲ್ಟಿ-ಪಾತ್‌ವೇ ಜೋನ್
ಟೊಯೋಟಾ ಕಂಪನಿಯು ಇತ್ತೀಚೆಗೆ ಪರ್ಯಾಯ ಇಂಧನ ಆಧರಿಸಿದ ಉತ್ಪನ್ನಗಳನ್ನು ಸಿದ್ಧಗೊಳಿಸುವುದರ ಕಡೆಗೆ ಗಮನ ಹರಿಸುತ್ತಿದೆ. ಅದಕ್ಕೆ ಪೂರಕವಾಗಿ ಸಿದ್ಧಗೊಂಡ ಉತ್ಪನ್ನಗಳನ್ನು ಈ ಜೋನ್‌ನಲ್ಲಿ ಪ್ರದರ್ಶಿಸಲಾಗುತ್ತದೆ.
ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿಇವಿ), ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್ ಸಿ ಇ ವಿ), ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಪಿಹೆಚ್ಇವಿ), ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಎಸ್ ಹೆಚ್ ಇ ವಿ), ಫ್ಲೆಕ್ಸಿ-ಫ್ಯುಯೆಲ್ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಎಫ್ ಎಫ್ ವಿ- ಪಿ ಹೆಚ್ ಇ ವಿ) ಮುಂತಾದ ಉತ್ಪನ್ನಗಳನ್ನು ಪ್ರದರ್ಶಿಸಲಿದೆ. ಈ ಉತ್ಪನ್ನಗಳು ಪರಿಸರಕ್ಕೆ ಅತಿ ಕಡಿಮೆ ಇಂಗಾಲವನ್ನು ಸೇರಿಸುತ್ತವೆ.
2. ಹೈಬ್ರಿಡ್ ಜೋನ್
ಈ ಜೋನ್‌ನಲ್ಲಿ ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್ ಹೈರೈಡರ್, ವೆಲ್ ಫೈರ್, ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಸೇರಿದಂತೆ ಹೈಬ್ರಿಡ್ ಉತ್ಪನ್ನಗಳನ್ನು ಗ್ರಾಹಕರಿಗೆ ಪ್ರದರ್ಶಿಸಲಿದೆ.
3. ಎಸ್‌ಯುವಿ ಜೋನ್ಟೊಯೋಟಾ ಕಂಪನಿಯ ಅತ್ಯಾಕರ್ಷಕ ಎಸ್‌ಯುವಿಗಳನ್ನು ಈ ಜೋನ್‌ನಲ್ಲಿ ಇಡಲಾಗಿದೆ. ಲ್ಯಾಂಡ್ ಕ್ರೂಸರ್300, ಲ್ಯಾಂಡ್ ಕ್ರೂಸರ್300 ಜಿಆರ್ ಸ್ಪೋರ್ಟ್ಸ್, ಹೈಲಕ್ಸ್ ಕಾನ್ಸೆಪ್ಟ್, ಹೈಲಕ್ಸ್ ಬ್ಲಾಕ್ ಎಡಿಷನ್, ಫಾರ್ಚೂನರ್, ಲೆಜೆಂಡರ್, ಅರ್ಬನ್ ಕ್ರೂಸರ್ ಟೈಸರ್ ಈ ವಿಭಾಗದ ಪ್ರಮುಖ ಆಕರ್ಷಣೆಗಳಾಗಿವೆ.
4. ಎಂಪಿವಿ ಜೋನ್
ಈ ವಲಯವು ಎಂಪಿವಿ ವಿಭಾಗದಲ್ಲಿನ ಟೊಯೋಟಾದ ಉತ್ಪನ್ನಗಳನ್ನು ತೋರಿಸುತ್ತದೆ. ಎಕ್ಸ್-ವ್ಯಾನ್ ಕಾನ್ಸೆಪ್ಟ್, ಇನ್ನೋವಾ ಕ್ರಿಸ್ಟಾ, ರೂಮಿಯಾನ್ ಉತ್ಪನ್ನಗಳನ್ನು ಕಂಪನಿ ಇಲ್ಲಿ ಪ್ರದರ್ಶಿಸಲಿದೆ.
ಇವೆಲ್ಲವುಗಳ ಜೊತೆಗೆ ಕಂಪನಿಯು ಈ ಆಟೋ ಎಕ್ಸ್ ಪೋದಲ್ಲಿ ತಾನು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯ ಕಾರ್ಯಕ್ರಮಗಳ ಕುರಿತೂ ಮಾಹಿತಿ ನೀಡಲಿದೆ.