ಸಾರಾಂಶ
ಶಿಕ್ಷಣ ಕ್ಷೇತ್ರಕ್ಕಾಗಿ ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ಬೆಂಗಳೂರಿನ ಟ್ರಯೋ ವರ್ಲ್ಡ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ನವೀನ್ ಅವರು ಪ್ರತಿಷ್ಠಿತ ‘ಬ್ಯುಸಿನೆಸ್ ವರ್ಲ್ಡ್ ಎಜುಕೇಶನ್ 40 ಅಂಡರ್ 40’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಬೆಂಗಳೂರು : ಶಿಕ್ಷಣ ಕ್ಷೇತ್ರಕ್ಕಾಗಿ ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ಬೆಂಗಳೂರಿನ ಟ್ರಯೋ ವರ್ಲ್ಡ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ನವೀನ್ ಅವರು ಪ್ರತಿಷ್ಠಿತ ‘ಬ್ಯುಸಿನೆಸ್ ವರ್ಲ್ಡ್ ಎಜುಕೇಶನ್ 40 ಅಂಡರ್ 40’ ಪುರಸ್ಕಾರಕ್ಕೆ ಪಾತ್ರರಾಗಿದ್ದು, ಇದನ್ನು ಪಡೆದ ಈ ಬಾರಿಯ ಏಕೈಕ ಕನ್ನಡಿಗ ಎನ್ನಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟ್ರಯೋ ವರ್ಲ್ಡ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ನವೀನ್ ಅವರಿಗೆ ಬಿಡಬ್ಲ್ಯು ಆ್ಯಂಡ್ ಎಕ್ಸ್‌ಚೇಂಜ್ ಫಾರ್ ಮೀಡಿಯಾದ ಚೇರ್ಮನ್ ಮತ್ತು ಎಡಿಟರ್ ಇನ್ ಚೀಫ್ ಅನುರಾಗ್ ಭಾತ್ರಾ, ನ್ಯಾಕ್ ಮತ್ತು ಎನ್‌ಇಟಿಎಫ್ ಚೇರ್‌ಮನ್ ಅನೀಲ್ ಸಹಸ್ರಬುಧೇ ಸೇರಿ ಇತರೆ ಗಣ್ಯರು ಈ ಪ್ರಶಸ್ತಿ ಪ್ರದಾನ ಮಾಡಿದರು. ಟ್ರಯೋ ವರ್ಲ್ಡ್ ಅಕಾಡೆಮಿಯ ಐಬಿ ಸಿಲೆಬಸ್ ಶಾಲೆಯಲ್ಲಿ 22ಕ್ಕೂ ಅಧಿಕ ದೇಶಗಳ ವಿದ್ಯಾರ್ಥಿಗಳು ಓದುತ್ತಿದ್ದಾರೆ.