ಸಾರಾಂಶ
ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಹೆಸರು ಪಡೆದಿರುವ ಟಿವಿಎಸ್ ಮೋಟಾರ್ ಕಂಪನಿ ಹೊಸ ಎಲೆಕ್ನಿಕ್ ವಾಹನ 'ಆರ್ಬಿಟರ್' ಬಿಡುಗಡೆ ಮಾಡಿದೆ. ಇದರೊಂದಿಗೆ ಐ ಕ್ಯೂಬ್ ಸರಣಿಗೆ ಮತ್ತೊಂದು ವಾಹನ ಸೇರ್ಪಡೆ ಆಗಿದೆ
ಪ್ರಶಾಂತ ಕೆ.ಪಿ.
ಹೊಸೂರು : ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಹೆಸರು ಪಡೆದಿರುವ ಟಿವಿಎಸ್ ಮೋಟಾರ್ ಕಂಪನಿ ಹೊಸ ಎಲೆಕ್ನಿಕ್ ವಾಹನ 'ಆರ್ಬಿಟರ್' ಬಿಡುಗಡೆ ಮಾಡಿದೆ. ಇದರೊಂದಿಗೆ ಐ ಕ್ಯೂಬ್ ಸರಣಿಗೆ ಮತ್ತೊಂದು ವಾಹನ ಸೇರ್ಪಡೆ ಆಗಿದೆ.
ಸವಾರರ ಸುರಕ್ಷತೆಗಾಗಿ ತಯಾರಿಸಲಾಗಿರುವ ಆರ್ಬಿಟರ್ ನಿತ್ಯದ ಓಡಾಟಕ್ಕಾಗಿಯೇ ವಿನ್ಯಾಸಗೊಂಡಿದೆ. ಆರ್ಬಿಟರ್ ಕಳ್ಳತನವಾದರೆ ಆಥವಾ ಅಪಘಾತವಾದರೆ ತಕ್ಷಣ ನೀವು ನೀಡಿರುವ ಮೊಬೈಲ್ ಸಂಖ್ಯೆಗೆ ತಕ್ಷಣ ಮೆಸೇಜ್ ಮತ್ತು ವಾಟ್ಸಪ್‌ನಲ್ಲಿ ಸಂದೇಶಗಳನ್ನು ಕಳುಹಿಸುತ್ತದೆ. ಇದರಿಂದ ಅಪಘಾತಕ್ಕೀ ಡಾದ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಸೇರಿದಂತೆ ಇನ್ನಿತರ ನೆರವು ನೀಡಲು ಸಹಾಯವಾಗು ತ್ತದೆ. ಅಲ್ಲದೆ ಈ ಆರ್ಬಿಟರ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಸುರಕ್ಷ ತೆಯ ದೃಷ್ಟಿಯಿಂದ 14 ಇಂಚಿನ ಮುಂಭಾಗದ ಚಕ್ರವನ್ನು ವಿನ್ಯಾಸ ಮಾಡ ಲಾಗಿದೆ. ಸ್ವಲ್ಪ ಅಗಲವಾಗಿರುವ ಚಕ್ರವು ರಸ್ತೆ ಮೇಲಿನ ಹಿಡಿತ ಸಾಧಿಸಲು ಸಹಾಯ ಕವಾಗಿದೆ. ಸವಾರರ ಬೆನ್ನಿನ ನೋವು ಬಾರದಂತೆ ತಡೆಯಲು ಆಸನ (ಸೀಟ್) ಅನ್ನು ವಿನ್ಯಾಸ ಮಾಡಲಾಗಿದ್ದು, ಉದ್ದ ವಾಗಿದೆ. ಇದರಿಂದ ಹಿಂಬದಿ ಸವಾರರು ಮುಂದಿನ ಸವಾರನ ಮೇಲೆ ಒರಗಿ ಕೂರುವ ಅಗತ್ಯ ಇರುವುದಿಲ್ಲ. ಆರ್ಬಿಟರ್‌ಕೇವಲ ನಗರಕ್ಕಷ್ಟೇ ಸೀಮಿತಗೊಳಿಸಿಲ್ಲ. ಇದನ್ನು ಗುಡ್ಡಗಾಡು ರಸ್ತೆಗಳಲ್ಲಿಯೂ ಓಡಿಸಬಹುದು. ಅದ ಕ್ಕಾಗಿ ಹಿಲ್ ಅಸಿಸ್ಟ್ ಎನ್ನುವ ವ್ಯವಸ್ಥೆಯನ್ನು ಆರ್ಬಿಟರ್‌ನಲ್ಲಿ ಅಳವಡಿಸಲಾಗಿದೆ.
ಹಿಲ್ ಅಸಿಸ್ಟ್ ಅನ್ನು ಆನ್ ಮಾಡಿದರೆ ಆರ್ಬಿಟರ್ ಹಿಮ್ಮುಖವಾಗಿ ಅಥವಾ ಮುಂಬದಿಗೆ ಎಕ್ಸಲೇಟರ್ ತಿರುಗಿಸದೆ ಚಲಿಸುವುದಿಲ್ಲ. ಇದರಿಂದ ಬೀಳುವ ಅಥವಾ ಅಪಘಾತ ಆಗುವ ಸಾಧ್ಯತೆ ಕಡಿಮೆ. ಅಲ್ಲದೆ ಆರ್ಬಿಟರ್ ಚಲಾಯಿಸಲು 'ಮೋಡ್ 'ಗಳಿವೆ. ಸಿಟಿ ಮೋಡ್‌ನಲ್ಲಿ ಆರ್ಬಿಟರ್ 55 ಕಿ.ಮೀ. ವೇಗದಲ್ಲಿ ಓಡುತ್ತದೆ. ಎಕಾನಮಿ ಮೋಡ್‌ನಲ್ಲಿ 35ರಿಂದ 40 ಕಿ.ಮೀ. ಚಲಾಯಿಸಬಹುದು. ಎಕಾನಮಿ ಮೋಡ್‌ನಲ್ಲಿ ವಾಹನದ ಬ್ಯಾಟರಿ ದಕ್ಷತೆ ಹೆಚ್ಚಿರುತ್ತದೆ.
ಆರ್ಬಿಟರ್‌ನಲ್ಲಿ 3.1 ಕಿಲೋ ವ್ಯಾಟ್ ಬ್ಯಾಟರಿ ಇದ್ದು, 158 ಕಿ.ಮೀ. ದೂರ ಚಲಾಯಿಸಬಹುದು. ಆದರೆ ನಗರ ಪ್ರದೇಶದಲ್ಲಿ 135 ಕಿ.ಮೀ. ಮೈಲೇಜ್ ಖಚಿತವಾಗಿ ಸಿಗುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಅಲ್ಲದೆ 34 ಲೀಟರ್ ಬೂಟ್ ಸ್ಪೇಸ್ ಇದೆ. ಇದರಲ್ಲಿ 2 ಹೆಲೈಟ್ ಗಳನ್ನು ಆರಾಮವಾಗಿ ಇಡಬಹುದು. ಬೆಂಗಳೂರು, ದೆಹಲಿ ಸೇರಿದಂತೆ ಇನ್ನಿತರ ನಗರಗಳಲ್ಲಿ ಕ99,900 ಎಕ್ಸ್ ಶೋರೂಮ್‌ಗಳಲ್ಲಿ ಬೆಲೆ ನಿಗದಿ ಪಡಿಸಲಾ ಗಿದೆ. ಆರ್ಬಿಟರ್ ದ್ವಿಚಕ್ರ ವಾಹನ ಬಿಡುಗಡೆ ಕಾರ್ಯಕ್ರಮದಲ್ಲಿ ಟಿವಿಎಸ್ ಮೋಟಾರ್‌ಕಂಪನಿಯ ಇಂಡಿಯಾ 2 ಡಬ್‌ಲ್ಯೂ ಬ್ಯುಸಿನೆಸ್ ಅಧ್ಯಕ್ಷ ಗೌರವ್ ಗುಪ್ತಾ, ಕಂಪನಿಯ ಹಿರಿಯ ಉಪಾಧ್ಯಕ್ಷ - ಮುಖ್ಯ ಪ್ರಯಾಣಿಕ ಮತ್ತು ವಿದ್ಯುತ್ ವಾಹನ ವ್ಯವಹಾರ ಮತ್ತು ಕಾರ್ಪೊರೇಟ್ ಬ್ರಾಂಡ್ ಮತ್ತು ಮಾಧ್ಯಮ ಮುಖ್ಯಸ್ಥ ಅನಿರುದ್ಧ ಹಲ್ಲಾರ್‌ಇದ್ದರು.