ಬಹುತೇಕರಿಗೆ ಸ್ವಂತ ಬಿಸಿನೆಸ್ ಮಾಡಬೇಕು, ಕೈತುಂಬಾ ಹಣ ಗಳಿಸಬೇಕು ಎಂಬ ಆಸೆ ಇರುತ್ತದೆ. ಅದಕ್ಕೆ ವೈರುಧ್ಯವೆಂಬಂತೆ ನೂರಾರು ಸ್ಟಾರ್ಟ್‌ಅಪ್‌ಗಳು ಮತ್ತು ಸಣ್ಣ ಉದ್ಯಮಗಳು ಮಾರುಕಟ್ಟೆಯಲ್ಲಿ ನಿಲ್ಲಲಾಗದೆ ಆರಂಭದಲ್ಲೇ ಮುಚ್ಚಿಹೋಗುತ್ತಿವೆ.
ಬಹುತೇಕರಿಗೆ ಸ್ವಂತ ಬಿಸಿನೆಸ್ ಮಾಡಬೇಕು, ಕೈತುಂಬಾ ಹಣ ಗಳಿಸಬೇಕು ಎಂಬ ಆಸೆ ಇರುತ್ತದೆ. ಅದಕ್ಕೆ ವೈರುಧ್ಯವೆಂಬಂತೆ ನೂರಾರು ಸ್ಟಾರ್ಟ್‌ಅಪ್‌ಗಳು ಮತ್ತು ಸಣ್ಣ ಉದ್ಯಮಗಳು ಮಾರುಕಟ್ಟೆಯಲ್ಲಿ ನಿಲ್ಲಲಾಗದೆ ಆರಂಭದಲ್ಲೇ ಮುಚ್ಚಿಹೋಗುತ್ತಿವೆ. ಈ 2026ರ ಈ ಡಿಜಿಟಲ್ ಯುಗದಲ್ಲಿ ಉದ್ಯಮವನ್ನು ಯಶಸ್ವಿಯಾಗಿ ಕಟ್ಟಿ, ಅದರಲ್ಲಿ ಲಾಭ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಖ್ಯಾತ ಬಿಸಿನೆಸ್ ಕೋಚ್ ರಾಜೀವ್ ತಲ್ರೇಜಾ ಅವರು ಇತ್ತೀಚಿಗೆ ಹೇಳಿರುವ ಐದು ಸೂತ್ರಗಳು ಇಲ್ಲಿವೆ.
1. ಗ್ರಾಹಕರನ್ನು ಗುರುತಿಸಿ
ಬಹಳಷ್ಟು ಉದ್ಯಮಿಗಳು ಕರ್ನಾಟಕದ ಏಳು ಕೋಟಿ ಜನಸಂಖ್ಯೆ ನೋಡಿ ತಮ್ಮ ಪ್ರಾಡಕ್ಟ್ ಲಾಂಚ್ ಮಾಡುತ್ತಾರೆ. ಆದರೆ ನಿಜ ಏನೆಂದರೆ, ನಿಮ್ಮ ನಿಜವಾದ ಮಾರುಕಟ್ಟೆ ಇರುವುದು ಕೇವಲ ಗರಿಷ್ಠ 5-10 ಲಕ್ಷ ಗ್ರಾಹಕರಲ್ಲಿ ಮಾತ್ರ. ನೀವು ಬಿಸಿನೆಸ್‌ನಲ್ಲಿ ಹಣ ಮಾಡಬೇಕಾದರೆ ಆ ವರ್ಗವನ್ನು ಟಾರ್ಗೆಟ್ ಮಾಡಬೇಕು. ಆ ಗ್ರಾಹಕರಿಗೆ ಹಣ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಅಗತ್ಯತೆ ಇರಬೇಕು. ದುಡ್ಡು ಮತ್ತು ಅಗತ್ಯತೆ ಎರಡೂ ಇರುವ ಸರಿಯಾದ ಗ್ರಾಹಕರನ್ನು ಗುರುತಿಸಿ ಅವರಿಗೆ ಮಾತ್ರ ಬೇಕಾಗುವ ಸೇವೆ ನೀಡಿ.
2. ಕಳಪೆ ಗ್ರಾಹಕರಿಂದ ದೂರವಿರಿ
ನೀವು ಯಾರಿಗೆ ನಿಮ್ಮ ಪ್ರಾಡಕ್ಟ್ ಮಾರುತ್ತೀರೋ, ಅವರ ಸಮಸ್ಯೆಗಳೇ ನಿಮ್ಮ ಸಮಸ್ಯೆಗಳಾಗುತ್ತವೆ. ಅಗ್ಗದ ಬೆಲೆಗೆ ವಸ್ತುಗಳನ್ನು ಹುಡುಕುವ, ಸದಾ ದೂರು ನೀಡುವ ಗ್ರಾಹಕರನ್ನು ನಿಭಾಯಿಸುವುದರಲ್ಲೇ ನಿಮ್ಮ ಸಮಯ ವ್ಯರ್ಥವಾದರೆ, ಬಿಸಿನೆಸ್ ಬೆಳೆಸುವ ಬಗ್ಗೆ ಯೋಚಿಸಲು ನಿಮಗೆ ಸಮಯವೇ ಸಿಗುವುದಿಲ್ಲ. ಹಾಗಾಗಿ ಉತ್ತಮ ಗ್ರಾಹಕರನ್ನು ಆಯ್ದುಕೊಳ್ಳಿ, ಅವರು ನಿಮ್ಮ ಮೌಲ್ಯಕ್ಕೆ ತಕ್ಕ ಹಣ ನೀಡಲು ಸಿದ್ಧರಿರುತ್ತಾರೆ.
3. ಮಾರ್ಕೆಟಿಂಗ್ ಇಲ್ಲದಿದ್ದರೆ ಉದ್ಯಮಕ್ಕೆ ಭವಿಷ್ಯವಿಲ್ಲ
‘ನನ್ನ ಉದ್ಯಮ ಚೆನ್ನಾಗಿದೆ, ಜನ ನನ್ನನ್ನು ಹುಡುಕಿಕೊಂಡು ಬರುತ್ತಾರೆ’ ಎಂದುಕೊಳ್ಳುವ ಕಾಲ ಮುಗಿದುಹೋಗಿದೆ. ಈಗಿನ ಜಗತ್ತಿನಲ್ಲಿ ಅತಿ ಹೆಚ್ಚು ಸದ್ದು ಮಾಡುವವರ ಬಳಿ ಹಣ ಹರಿಯುತ್ತದೆ. ನಿಮ್ಮ ಪ್ರಾಡಕ್ಟ್ ಎಷ್ಟೇ ಅದ್ಭುತವಾಗಿದ್ದರೂ, ಅದರ ಬಗ್ಗೆ ಜನರಿಗೆ ತಿಳಿಯದಿದ್ದರೆ ಯಾವುದೇ ಪ್ರಯೋಜನವಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಗಮನ ಸೆಳೆಯುವುದು ಈಗ ಕಡ್ಡಾಯ.
4. ರಿಜೆಕ್ಷನ್‌ಗೆ ಹೆದರಬೇಡಿ
ಸೇಲ್ಸ್ ಎನ್ನುವುದು ಸಂಪೂರ್ಣವಾಗಿ ನಂಬರ್ ಗೇಮ್. ಮಾರುಕಟ್ಟೆಯಲ್ಲಿ ಯಾರು ಅತಿ ಹೆಚ್ಚು ತಿರಸ್ಕಾರವನ್ನು ಎದುರಿಸುತ್ತಾರೋ, ಅವರೇ ಕೊನೆಗೆ ಅತ್ಯಂತ ಶ್ರೀಮಂತರಾಗುತ್ತಾರೆ. ಹೆಚ್ಚಿನವರು ತಮ್ಮ ಗೌರವ ಉಳಿಸಿಕೊಳ್ಳಲು ಸೇಲ್ಸ್ ಮಾಡಲು ಹಿಂಜರಿಯುತ್ತಾರೆ. ಆದರೆ ನೆನಪಿಡಿ, ಸೋಲಿಗೆ ಹೆದರಿ ಸುರಕ್ಷಿತ ಆಟ ಆಡುವವರಿಗಿಂತ, ಸಾವಿರ ಬಾರಿ ತಿರಸ್ಕರಿಸಲ್ಪಟ್ಟು ಗೆಲ್ಲುವ ಉದ್ಯಮಿಯೇ ನಿಜವಾದ ಯಶಸ್ವಿ ವ್ಯಕ್ತಿ.
5. ಬೋರಿಂಗ್ ಕೆಲಸಗಳೇ ಹಣ ತರುತ್ತವೆ
ಬಿಸಿನೆಸ್‌ನಲ್ಲಿ ಸದಾ ಎಕ್ಸೈಟ್‌ಮೆಂಟ್ ಇರುವುದಿಲ್ಲ. ಸಿಸ್ಟಮ್ ಬಿಲ್ಡಿಂಗ್, ಎಸ್‌ಒಪಿ ಸಿದ್ಧಪಡಿಸುವುದು, ಪ್ರಕ್ರಿಯೆಗಳನ್ನು ಆಟೊಮೇಷನ್ ಮಾಡುವುದು ಅತ್ಯಂತ ಬೇಸರದ ಕೆಲಸಗಳಾಗಿವೆ. ಆದರೆ, ಯಾವ ಉದ್ಯಮಿ ಈ ಬೋರಿಂಗ್ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡುತ್ತಾರೋ, ಅವರ ಬಿಸಿನೆಸ್ ಆಟೋ-ಪೈಲಟ್ ಮೋಡ್‌ನಲ್ಲಿ ಬೆಳೆಯುತ್ತದೆ. ಪ್ರತೀ ತಿಂಗಳು ಕೇವಲ ಆ ತಿಂಗಳ ಖರ್ಚು ತೂಗಿಸುವ ಇನ್‌ಕಮ್ ಜನರೇಟರ್ ಆಗುವ ಬದಲು ದೊಡ್ಡ ಸಾಮ್ರಾಜ್ಯ ಕಟ್ಟುವ ವೆಲ್ತ್ ಕ್ರಿಯೇಟರ್ ಆಗುವ ಕಡೆಗೆ ಗಮನ ಕೊಡಿ.
