ಫೆಬ್ರವರಿ 25 ರಿಂದ ಮಾರ್ಚ್‌ 2ರವರೆಗಿನ ವಾರಫಲ

| Published : Feb 25 2024, 01:45 AM IST / Updated: Feb 25 2024, 10:09 AM IST

horoscope

ಸಾರಾಂಶ

ಫೆಬ್ರವರಿ 25 ರಿಂದ ಮಾರ್ಚ್‌ 2ರವರೆಗಿನ ವಾರಫಲ

25-02-24 ರಿಂದ 2-03-24

ಮೇಷರಾಶಿ: ಲೈಫು ಇಷ್ಟೇನಾ ಅಂತಿದ್ದವರು ಲೈಫು ಹೀಗೂ ಆಗಬಹುದಾ ಎಂದು ಅಚ್ಚರಿ ಪಡುವಷ್ಟು ಬದಲಾವಣೆ ಆಗುತ್ತದೆ. ಸ್ಥಗಿತಗೊಂಡಂತೆ ತೋರುವ ಅವಕಾಶಗಳು ವೇಗವನ್ನು ಪಡೆಯುತ್ತವೆ. ನಿಮ್ಮ ಪೂರ್ವ ತಯಾರಿಯೂ ಭರ್ಜರಿಯಾಗಿ ಕೆಲಸ ವಿಜೃಂಭಿಸುತ್ತದೆ. 

ಹಣ ಬಹಳ ಖರ್ಚು ಮಾಡಬೇಡಿ. ವೆಚ್ಚಗಳ ಬಗ್ಗೆ ಜಾಗರೂಕರಾಗಿರಿ. ಗಳಿಕೆ ಸ್ಥಿರವಾಗಿರುತ್ತದೆ. ಈ ಎಲ್ಲ ಧನಾತ್ಮಕ ಬದಲಾವಣೆಯಿಂದ ಮನಸ್ಸು ಆಶಾವಾದದಿಂದ ತುಂಬಿರುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗುವಿರಿ. ಹಾಲಿಗೆ ಸಂಬಂಧಿಸಿದ ಸಾಮಗ್ರಿ ಮಾರಾಟ ಮಾಡುವವರಿಗೆ ಶುಭಫಲವಿದೆ. 

ವೃಷಭರಾಶಿ: ಈ ವಾರ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅನೇಕ ಗ್ರಹಗಳ ಶುಭ ದೃಷ್ಟಿ ನಿಮ್ಮ ಮಾನಸಿಕ ಹಾಗೂ ದೈಹಿಕ ಚೈತನ್ಯಕ್ಕೆ ಕಾರಣವಾಗುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತರಾಗುತ್ತೀರಿ. ಆದರೆ ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಬೇಕಾಗುತ್ತದೆ. 

ಇಲ್ಲದಿದ್ದರೆ ನಿಮಗೆ ಅಗತ್ಯವಿರುವ ಸಮಯದಲ್ಲಿ ಹಣದ ಕೊರತೆ ಉಂಟಾಗಬಹುದು. ವಾಹನ ಚಾಲನೆಯಲ್ಲಿ ಜಾಗರೂಕತೆ ಅಗತ್ಯ. ಭಾವನೆಗಳ ಸುಳಿಯಲ್ಲಿ ಸಿಲುಕಿ ಆತುರದಲ್ಲಿ ನಿರ್ಧಾರ ತೆಗೆದುಕೊಂಡರೆ ತೊಂದರೆ ಅನುಭವಿಸುವಿರಿ. ವಿವೇಕದ ನಿರ್ಧಾರದಿಂದ ಒಳ್ಳೆಯ ಹೆಸರು ಗಳಿಸುತ್ತೀರಿ.

ಮಿಥುನರಾಶಿ: ಈ ತಿಂಗಳು ಪ್ರೇಮ ಸಂಬಂಧಗಳಿಗೆ ಪರೀಕ್ಷೆಯ ಸಮಯ. ಅನುಮಾನ, ತಪ್ಪುಗ್ರಹಿಕೆಗಳು ಉಂಟಾಗಬಹುದು. ಭ್ರಮನಿರಸನದಿಂದ ನಿಮ್ಮ ಸಂಬಂಧ ಹದಗೆಡುವ ಸಾಧ್ಯತೆ ಇದೆ. ಆರ್ಥಿಕತೆ ಉತ್ತಮವಾಗಿರುತ್ತದೆ. ನೀವು ಇತರರಿಗೆ ಪ್ರಾಮುಖ್ಯತೆಯನ್ನು ನೀಡಲು ಕಲಿಯಬೇಕಾಗುತ್ತದೆ. 

ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕಂಗೆಡಿಸಬಹುದು. ಯೋಗ ಮತ್ತು ಧ್ಯಾನ ಇದರಿಂದ ಹೊರಬರಲು ಸಹಕಾರಿ. ಹಣಕಾಸಿನ ಹರಿವು ಉತ್ತಮವಾಗಿದೆ. ಸಾಲಗಳನ್ನು ತೀರಿಸುತ್ತೀರಿ. ಋಣಗಳಿಂದ ಆಚೆ ಬರುತ್ತೀರಿ. ತಾಯಿಯ ಆರೋಗ್ಯ ಸುಧಾರಿಸುತ್ತದೆ.

ಕಟಕರಾಶಿ: ಮಾನಸಿಕ ಸಮಸ್ಯೆಗಳು ನಿಮ್ಮ ಸಂತೋಷಕ್ಕೆ ಅಡ್ಡಿಯಾಗಬಹುದು. ಕೆಲಸದ ಸ್ಥಳದಲ್ಲಿ ಒತ್ತಡ ಉಂಟಾಗಬಹುದು. ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಖರ್ಚುಗಳ ಮೇಲೆ ಹಿಡಿತ ಬೇಕೇ ಬೇಕು. ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಿ. ಕುಟುಂಬದ ಒತ್ತಡದ ಕಾರಣ ಒಂದಿಷ್ಟು ಹಣಕಾಸಿನ ಮುಗ್ಗಟ್ಟು, ಅಶಾಂತಿ ಎದುರಾಗಬಹುದು.

 ಪ್ರತಿಕೂಲತೆಯಿಂದ ಬೇಸತ್ತು ಸಮಯ ವ್ಯರ್ಥ ಮಾಡುವುದಕ್ಕಿಂತ ಜೀವನದ ಪಾಠ ಕಲಿಯಲು ಪ್ರಯತ್ನಿಸುವುದು ಉತ್ತಮ. ಬುಧ ಎಂಟನೇ ಮನೆಯಲ್ಲಿ ರಕ್ಷೆಯನ್ನೂ ಲಾಭವನ್ನೂ ತಂದುಕೊಡುತ್ತಾರೆ. ಏಳನೇ ಮನೆಯ ಕುಜ ಶುಕ್ರನಿಂದ ಲಾಭ ಇದೆ. ವಿದೇಶ ಪ್ರವಾಸ ಯೋಗ ಇದೆ.

ಸಿಂಹರಾಶಿ: ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಹಣವನ್ನು ಗಳಿಸಬಹುದು. ನಿಮ್ಮ ಠೇವಣಿಗಳನ್ನು ಎಲ್ಲೋ ಕುರುಡಾಗಿ ಹೂಡಿಕೆ ಮಾಡುವ ಬದಲು ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಿ. ಕೆಲಸದ ಸ್ಥಳದಲ್ಲಿ ಕೆಲವು ಪ್ರಮುಖ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿ ಬರಬಹುದು. 

ಕೆಲವು ಹಠಾರ್‌ ನಿರ್ಧಾರಗಳಿಂದ ನಕಾರಾತ್ಮಕ ಫಲಿತಾಂಶ ಬರಬಹುದು. ಗುರು ಇದ್ದು ಹಣಕಾಸಿನ ಹರಿವನ್ನು ಕೊಡುತ್ತಾನೆ. ವಾಹನದಿಂದ ಲಾಭ ಇದೆ. ಹೊಸ ವಾಹನ ಕೊಳ್ಳುವ ಯೋಗ ಇದೆ. ಆಭರಣ ಖರೀದಿ ಯೋಗ ಇದೆ. ದೂರ ಪ್ರಯಾಣ ಮಾಡುವಿರಿ. 

ಕನ್ಯಾರಾಶಿ: ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಹೊಸ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ವಾರ ಆರ್ಥಿಕತೆ ತುಂಬಾ ಉತ್ತಮವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಅನೇಕ ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ. 

ಅವಿವಾಹಿತರಿಗೆ ವಿವಾಹಯೋಗ ಸದ್ಯಕ್ಕೆ ಇಲ್ಲ. ಶನಿಯಿಂದ ನಿಮ್ಮ ಕಷ್ಟಗಳ ನಿವಾರಣೆ ಆಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಯೋಜನೆ ನಿಮ್ಮ ಕೈಸೇರುತ್ತದೆ. ವಿದೇಶ ಪ್ರಯಾಣ ಯೋಗ ಇದೆ. ಕುಟುಂಬದಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ತಾಯಿಗೆ ಹೆಚ್ಚು ಕಷ್ಟ ಕೊಡಬೇಡಿ.

ತುಲಾರಾಶಿ: ನಿಮ್ಮ ಕೆಲವು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಲು ನಿರ್ಧರಿಸುತ್ತೀರಿ. ನೀವು ಗಳಿಸಿದ ಸಂಪನ್ಮೂಲಗಳಿಂದ ಲಾಭವನ್ನು ಪಡೆಯುತ್ತೀರಿ. ಮನರಂಜನಾ ಮೂಲಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತೀರಿ. ನಿಮ್ಮ ಅರಿವಿಲ್ಲದೆಯೇ ಖರ್ಚಾಗಬಹುದು. 

ಅನಗತ್ಯ ಕಾರಣದಿಂದ ನಿಮ್ಮ ಮನಸ್ಥಿತಿ ಹದಗೆಡುವ ಸಾಧ್ಯತೆಯಿದೆ. ಪರಿಣಾಮವಾಗಿ, ಕುಟುಂಬ ಜೀವನದಲ್ಲಿ ನಿಮ್ಮ ಸ್ವಭಾವವು ಸ್ವಲ್ಪ ಒರಟಾಗಿ ಕಾಣುತ್ತದೆ. ವೃತ್ತಿ ಸಂಬಂಧ ಕಿರುಕುಳ ಕಡಿಮೆಯಾಗುತ್ತದೆ. ಗುರುಬಲ ಇದೆ. ಭಯ ಬೇಡ. ಈ ವಾರ ಮಿಶ್ರಫಲ ಅನುಭವಿಸುವಿರಿ. 

ವೃಶ್ಚಿಕ ರಾಶಿ: ಬುಧ ಶುಭಫಲಗಳನ್ನು ನೀಡುತ್ತಾರೆ. ಸಕಲ ವಿಧದಲ್ಲೂ ಒಳ್ಳೆಯದು ಮಾಡುತ್ತಾನೆ. ನಿಮ್ಮ ರಕ್ಷಣೆ ಮಾಡುತ್ತಾನೆ. ಅವಿವಾಹಿತರಿಗೆ ವಿವಾಹ ಇನ್ನೂ ನಿಧಾನ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಅರ್ಹರಿಗೆ ಉನ್ನತ ಶಿಕ್ಷಣ ಪ್ರಾಪ್ತಿ ಇದೆ. ವಿದೇಶ ಪ್ರಯಾಣ ಯೋಗ ಇದೆ. 

ವಾರದ ಮಧ್ಯದಲ್ಲಿ ಶುಭಫಲಗಳು ಸಿಗಲಿವೆ. ಕಂಪ್ಯೂಟರ್ ಹಿನ್ನೆಲೆಯವರಿಗೆ ಶುಭಫಲಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಫಲವಿದೆ. ವೈವಾಹಿಕ ಸಂಬಂಧ ಚೆನ್ನಾಗಿರುತ್ತದೆ. ಆದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹೊಟ್ಟೆ ಸಮಸ್ಯೆ, ಅಜೀರ್ಣ ಉಂಟಾಗಬಹುದು. 

ಧನಸ್ಸುರಾಶಿ: ಕೆಲವು ಸಮಸ್ಯೆಗಳು ನಿಮಗೆ ಮಾನಸಿಕ ಒತ್ತಡವನ್ನು ನೀಡುತ್ತದೆ. ಆದರೆ ವಾರದ ಅಂತ್ಯದ ವೇಳೆಗೆ ಸಿಗುವ ಯಶಸ್ಸು ನಿಮ್ಮ ಒತ್ತಡವನ್ನು ದೂರ ಮಾಡುತ್ತದೆ. ನೀವು ಹಿಂದೆ ತೆಗೆದುಕೊಳ್ಳಲು ಸಾಧ್ಯವಾಗದ ನಿರ್ಧಾರವನ್ನು ಈ ವಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ. ಆದರೆ ತಪ್ಪು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ, ನಷ್ಟ ಸಂಭವಿಸಬಹುದು. ನಿಮ್ಮ ಒಡಹುಟ್ಟಿದವರ ಆರೋಗ್ಯವು ಈ ಸಮಯದಲ್ಲಿ ದುರ್ಬಲವಾಗಿರಬಹುದು. ವಾಹನ ಖರೀದಿ ಈಗ ಬೇಡ. 

ಮಕರರಾಶಿ: ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಣಕ್ಕೆ ಸಂಬಂಧಿಸಿದ ವಿಷಯಗಳು ಈ ವಾರ ನಿಮಗೆ ಲಾಭದಾಯಕ ಫಲಿತಾಂಶಗಳನ್ನು ತರುತ್ತವೆ. ನಿಮ್ಮ ಹಣಕಾಸಿನ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ. ಮಗುವಿನ ಜನನದ ಸಾಧ್ಯತೆಯಿದೆ.

ಎದುರಾಳಿಯು ನಿಮ್ಮ ವಿರುದ್ಧ ಯೋಜನೆ ಮಾಡಬಹುದು ಮತ್ತು ಸಂಚು ಮಾಡಬಹುದು. ಕಣ್ಣು ಮತ್ತು ಕಿವಿಗಳನ್ನು ತೆರೆದಿಟ್ಟು ಕೆಲಸ ಮಾಡಿ. ನಿಮ್ಮ ಯಶಸ್ಸು ಅಹಂಕಾರ ತರಿಸಬಹುದು. ಇದರಿಂದ ಸಮಸ್ಯೆ ಆಗಬಹುದು. ಆಯ್ಕೆಯಿಂದ ಗೊಂದಲಕ್ಕೊಳಗಾಗುತ್ತೀರಿ. ಕುಟುಂಬ ಸೌಖ್ಯ ವೃದ್ಧಿ. 

ಕುಂಭರಾಶಿ: ವೈಯಕ್ತಿಕ ಮತ್ತು ವೃತ್ತಿ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಆರೋಗ್ಯ ಚೆನ್ನಾಗಿರುತ್ತದೆ. ವ್ಯಾಪಾರಸ್ಥರು ಹಣವನ್ನು ಹೂಡಿಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಸಣ್ಣ ಅಜಾಗರೂಕತೆಯೂ ಹಣಕಾಸಿನ ತೊಂದರೆಗಳನ್ನು ನೀಡಬಹುದು. ಅನೇಕ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಿಗಬಹುದು. ಇದನ್ನು ಬಳಸಿಕೊಳ್ಳಿ. ಅವುಗಳಿಂದ ಲಾಭ ಪಡೆಯಲು ಪ್ರಯತ್ನಿಸಿ. ವಿದ್ಯಾರ್ಥಿಗಳಿಗೆ ಈ ಸಮಯ ಮಂಗಳಕರವಾಗಿದೆ. ವಾರವಿಡೀ ಮಾನಸಿಕ ಹಿಂಸೆ ಕಾಡಬಹುದು. ಮುಂದೆ ಒಳ್ಳೆಯ ಫಲಗಳು ಇವೆ.

ಮೀನರಾಶಿ: ನೀವು ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿದ್ದರೆ, ಈ ವಾರ ನಿಮ್ಮ ಸಂಬಂಧಿಕರು ಮತ್ತು ಇತರರ ಬೆಂಬಲವನ್ನು ನೀವು ಪಡೆಯುತ್ತೀರಿ. ಇದು ಜೀವನದ ಎಲ್ಲಾ ಸವಾಲುಗಳನ್ನು ಜಯಿಸಲು ನಿಮಗೆ ಸಹಾಯ ಮಾಡುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಂಗಾತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮರೆಯದಿರಿ. 

ವಿದ್ಯಾರ್ಥಿಗಳು ಪಾಠಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುತ್ತಾರೆ. ಆದರೂ ಫಲಿತಾಂಶದ ಬಗ್ಗೆ ಭಯ ಬೇಡ. ಪ್ರತಿಯೊಂದು ಹೆಜ್ಜೆಯನ್ನು ಯೋಚಿಸಿ ಇಡಿ. ಜಾಗರೂಕತೆಯಿಂದ ನಡೆಯಿರಿ. ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಿ.