ಜು.3 ರಿಂದ 5ರವರೆಗೂ ಅಮೆರಿಕಾದ ಸ್ಯಾನ್‌ಜೋಸ್‌ ನಗರದಲ್ಲಿ ವಿಶ್ವ ಒಕ್ಕಲಿಗರ ಸಮ್ಮೇಳನ

| Published : Dec 10 2024, 01:17 AM IST / Updated: Dec 10 2024, 08:06 AM IST

flowers to offer lord shiva

ಸಾರಾಂಶ

ಅಮೆರಿಕಾದ ಸ್ಯಾನ್‌ಜೋಸ್‌ ನಗರದಲ್ಲಿ ಹೊಸ ವರ್ಷದ ಜು.3 ರಿಂದ 5ರವರೆಗೂ ಅಮೆರಿಕ ಒಕ್ಕಲಿಗರ ಪರಿಷತ್ತಿನ ಪಶ್ಚಿಮ ಶಾಖೆಯ ನೇತೃತ್ವದಲ್ಲಿ ವಿಶ್ವ ಒಕ್ಕಲಿಗರ ಸಮ್ಮೇಳನವನ್ನು ಆಯೋಜಿಸಲಾಗಿದೆ.

 ಬೆಂಗಳೂರು : ಅಮೆರಿಕಾದ ಸ್ಯಾನ್‌ಜೋಸ್‌ ನಗರದಲ್ಲಿ ಹೊಸ ವರ್ಷದ ಜು.3 ರಿಂದ 5ರವರೆಗೂ ಅಮೆರಿಕ ಒಕ್ಕಲಿಗರ ಪರಿಷತ್ತಿನ ಪಶ್ಚಿಮ ಶಾಖೆಯ ನೇತೃತ್ವದಲ್ಲಿ ವಿಶ್ವ ಒಕ್ಕಲಿಗರ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಮ್ಮೇಳನದ ಆಯೋಜನಾ ಸಮಿತಿಯ ಅಧ್ಯಕ್ಷ ಧನಂಜಯ್ ಕೆಂಗಯ್ಯ, ಜಗತ್ತಿನಾದ್ಯಂತ ವಿಸ್ತರಿಸಿರುವ ಒಕ್ಕಲಿಗ ಸಮುದಾಯವನ್ನು ಒಂದುಗೂಡಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಿದ್ದು ಸಮುದಾಯದ ಹಿರಿಯ ಸ್ವಾಮೀಜಿಗಳು, ಪ್ರಪಂಚದಾದ್ಯಂತ ಇರುವ ಉದ್ಯಮಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರು, ರಾಜಕಾರಣಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಒಕ್ಕಲಿಗರ ಸಾಧನೆ-ಪರಿಶ್ರಮಗಳ ಕುರುಹಾಗಿ ‘ಉಳುತ ಸಾಗಿಹೆವು ಜಗವೆಂಬ ಹೊಲವನು’ ಶೀರ್ಷಿಕೆಯಡಿ ಸಮ್ಮೇಳನ ಆಯೋಜಿಸಲಿದ್ದು ಹಲವು ದೇಶಗಳ ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ. ಭಾರತ ಹಾಗೂ ಅಮೆರಿಕಾದ ಕಲಾವಿದರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಸಾಂಪ್ರದಾಯಿಕ ಔತಣ, ಬಾಂಧವ್ಯದ ಬೆಸುಗೆಯನ್ನು ಬಲಪಡಿಸುವ ಸ್ನೇಹಕೂಟಗಳು, ಸಂಸ್ಕೃತಿ-ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಭವ್ಯ ಮೆರವಣಿಗೆ, ಮಕ್ಕಳಿಗೆ ಹಾಗೂ ಯುವಜನಾಂಗಕ್ಕೆ ಸ್ಫೂರ್ತಿ-ಸಂತೋಷ ನೀಡುವ ಅನೇಕ ಚಟುವಟಿಕೆಗಳು, ಉದ್ಯಮಶೀಲರಿಗೆ ಉತ್ತೇಜನ ನೀಡುವ ಬ್ಯುಸಿನೆಸ್ ಫೋರಂ, ಸ್ತ್ರೀ ಶಕ್ತಿಗೆ ಪೂರಕವಾದ ಮಹಿಳಾ ವೇದಿಕೆ ಸೇರಿ ವಿಭಿನ್ನ ಕಾರ್ಯಕ್ರಮಗಳಿಗೆ ಭರದ ಸಿದ್ಧತೆ ಸಾಗಿದೆ ಎಂದರು.

ಅಮೆರಿಕಾ ಹಾಗೂ ಜಗತ್ತಿನಾದ್ಯಂತ ಇರುವ ಒಕ್ಕಲಿಗ ಸಮುದಾಯದವರು ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಹೆಚ್ಚಿನ ವಿವರಗಳಿಗೆ https://myvpa.org/ ಭೇಟಿ ನೀಡಬಹುದು.