2008ರಲ್ಲಿ ಕೊಹ್ಲಿಗಿಂತ ಉತ್ತಮ ಆಯ್ಕೆ ನನ್ನ ಮುಂದೆ ಇರಲಿಲ್ಲ

| Published : May 23 2024, 01:02 AM IST / Updated: May 23 2024, 04:19 AM IST

ಸಾರಾಂಶ

2008ರಲ್ಲಿ ಆರ್‌ಸಿಬಿ, ವಿರಾಟ್‌ ಕೊಹ್ಲಿಯನ್ನು ಖರೀದಿಸಿದ್ದಕ್ಕೆ ವಿಜಯ್‌ ಮಲ್ಯ ಸಂತಸ. ಆಗ ಇದಕ್ಕಿಂತ ಉತ್ತಮ ಆಯ್ಕೆ ನನ್ನ ಮುಂದಿರಲಿಲ್ಲ ಎಂದು ತಂಡದ ಮಾಜಿ ಮಾಲಿಕ ಟ್ವೀಟ್‌.

ನವದೆಹಲಿ: 2008ರ ಚೊಚ್ಚಲ ಆವೃತ್ತಿಯ ಐಪಿಎಲ್‌ಗೂ ಮುನ್ನ ಆರ್‌ಸಿಬಿ ತಂಡ ವಿರಾಟ್‌ ಕೊಹ್ಲಿಯನ್ನು ಖರೀದಿಸಿದ್ದಕ್ಕೆ ತಂಡದ ಅಂದಿನ ಮಾಲಿಕ ವಿಜಯ್‌ ಮಲ್ಯ ಸಂತಸ ವ್ಯಕ್ತಪಡಿಸಿದ್ದು, ಅಂದು ಕೊಹ್ಲಿಗಿಂತ ಉತ್ತಮ ಆಯ್ಕೆ ನನ್ನ ಮುಂದಿರಲಿಲ್ಲ. ಅದಕ್ಕಾಗಿ ಅವರಿಗೆ ಬಿಡ್‌ ಮಾಡಿದ್ದೆ ಎಂದಿದ್ದಾರೆ.

ಸತತ 6 ಪಂದ್ಯ ಗೆದ್ದು ಆರ್‌ಸಿಬಿ ಪ್ಲೇ-ಆಫ್‌ಗೇರಿದ್ದಕ್ಕೆ ಅಭಿನಂದಿಸಿ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ಮಲ್ಯ, ‘ಈ ವರ್ಷ ಆರ್‌ಸಿಬಿಗೆ ಐಪಿಎಲ್‌ ಟ್ರೋಫಿ ಗೆಲ್ಲುವ ಉತ್ತಮ ಅವಕಾಶವಿದೆ. ಗುಡ್‌ ಲಕ್‌’ ಎಂದಿದ್ದಾರೆ. ಆದರೆ ಆರ್‌ಸಿಬಿ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ.

2008ರಲ್ಲಿ ಕೊಹ್ಲಿಯನ್ನು ಆರ್‌ಸಿಬಿ 12 ಲಕ್ಷ ರು. ನೀಡಿ ಖರೀದಿಸಿತ್ತು. ಅಂದು ಮಲ್ಯ ಆರ್‌ಸಿಬಿ ಮಾಲಿಕರಾಗಿದ್ದರೂ, 2016ರಲ್ಲಿ ತಂಡದ ಮಾಲಕತ್ವ ತ್ಯಜಿಸಬೇಕಾಗಿ ಬಂದಿತ್ತು. ಸದ್ಯ ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.