ಟಿ20ಯಲ್ಲಿ 5 ಓವರ್‌ ಪಂದ್ಯಕ್ಕೆ ಇನ್ನು 1.3 ಓವರ್‌ ಪವರ್‌-ಪ್ಲೇ

| N/A | Published : Jun 28 2025, 11:37 AM IST

Cricket
ಟಿ20ಯಲ್ಲಿ 5 ಓವರ್‌ ಪಂದ್ಯಕ್ಕೆ ಇನ್ನು 1.3 ಓವರ್‌ ಪವರ್‌-ಪ್ಲೇ
Share this Article
  • FB
  • TW
  • Linkdin
  • Email

ಸಾರಾಂಶ

ಟಿ20 ಕ್ರಿಕೆಟ್‌ನಲ್ಲಿ ಮಳೆ ಹಾಗೂ ಇತರ ಕಾರಣಗಳಿಂದ ಓವರ್‌ಗಳು ಕಡಿತಗೊಂಡರೆ ಇನ್ನು ಓವರ್‌ಗಳ ಬದಲು ಚೆಂಡಿನ ಲೆಕ್ಕದಲ್ಲಿ ಪವರ್‌ಪ್ಲೇ ನಿರ್ಧಾರವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಹೊಸ ನಿಯಮ ಪರಿಚಯಿಸಿದೆ.

ದುಬೈ: ಟಿ20 ಕ್ರಿಕೆಟ್‌ನಲ್ಲಿ ಮಳೆ ಹಾಗೂ ಇತರ ಕಾರಣಗಳಿಂದ ಓವರ್‌ಗಳು ಕಡಿತಗೊಂಡರೆ ಇನ್ನು ಓವರ್‌ಗಳ ಬದಲು ಚೆಂಡಿನ ಲೆಕ್ಕದಲ್ಲಿ ಪವರ್‌ಪ್ಲೇ ನಿರ್ಧಾರವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಹೊಸ ನಿಯಮ ಪರಿಚಯಿಸಿದೆ.

ಪ್ರಸ್ತುತ ಇರುವ ನಿಯಮ ಪ್ರಕಾರ 20 ಓವರ್‌ ಇನ್ನಿಂಗ್ಸ್‌ನಲ್ಲಿ ಮೊದಲ 6 ಓವರ್‌ ಪವರ್‌ಪ್ಲೇ ಆಗಿದ್ದವು. ಈ 6 ಓವರ್​ಗಳಲ್ಲಿ ಫೀಲ್ಡಿಂಗ್ ತಂಡವು 30 ಯಾರ್ಡ್ ವೃತ್ತದ ಹೊರಗೆ ಇಬ್ಬರಿಗಿಂತ ಹೆಚ್ಚು ಫೀಲ್ಡರ್‌ಗಳನ್ನು ಇರಿಸುವಂತಿಲ್ಲ. ಪಂದ್ಯದಲ್ಲಿ ಓವರ್‌ಗಳು ಕಡಿತಗೊಂಡಂತೆ ಪವರ್‌ಪ್ಲೇ ಓವರ್‌ಗಳೂ ಕಡಿಮೆಯಾಗುತ್ತಿದ್ದವು. ಅಂದರೆ 5 ಓವರ್ ಪಂದ್ಯ ನಡೆದರೆ 2, 10 ಓವರ್‌ ಪಂದ್ಯ ನಡೆದರೆ 3 ಓವರ್‌...ಹೀಗೆ ಓವರ್‌ಗಳ ಆಧಾರದಲ್ಲಿ ಪವರ್‌ಪ್ಲೇ ನಿರ್ಧಾರವಾಗುತ್ತಿದ್ದವು.

ಇನ್ನು ಮುಂದೆ ಎಸೆತಗಳ ಆಧಾರದಲ್ಲಿ ಪವರ್‌ಪ್ಲೇ ನಿರ್ಧಾರವಾಗಲಿದೆ. ಹೊಸ ನಿಯಮ ಪ್ರಕಾರ 5 ಓವರ್‌ ಪಂದ್ಯಕ್ಕೆ 1.3, ಆರು ಓವರ್‌ ಪಂದ್ಯಕ್ಕೆ 1.5, ಎಂಟು ಓವರ್‌ ಪಂದ್ಯಕ್ಕೆ 2.2, ಹತ್ತು ಓವರ್‌ ಪಂದ್ಯಕ್ಕೆ 3, ಹದಿನಾಲ್ಕು ಓವರ್ ಪಂದ್ಯಕ್ಕೆ 4.1 ಓವರ್‌ ಪವರ್‌ ಪ್ಲೇ ಇರಲಿದೆ.

ಪವರ್‌ಪ್ಲೇ ಲೆಕ್ಕಾಚಾರ

ಪಂದ್ಯದ ಓವರ್‌ ಪವರ್‌ಪ್ಲೇ ಓವರ್‌

5 1.3

6 1.5

7 2.1

8 2.2

12 3.4

10 3.0

14 4.1

15 4.3

17 5.1

19 5.4

Read more Articles on